ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಪ್ರಬಲ ಆಡಳಿತ ಶಕ್ತಿಯಾಗುತ್ತದೆ ಎಂದೂ, ಅಖಂಡ ಭಾರತದ ಮೇಲೆ ರಾಜ್ಯಭಾರ ನಡೆಸುತ್ತಾರೆಂದೂ ಆಗಲೂ ಯಾರೂ ಊಹಿಸಲು ಸಾಧ್ಯವಿರಲಿಲ್ಲ. ಯಾರಾದರೂ ನೋಡಿದವರು ಪಶ್ಚಿಮ ಮತ್ತು ಮಧ್ಯ ಭಾರತದಲ್ಲೆಲ್ಲ ದೆಹಲಿಯವರೆಗೆ ಹಬ್ಬಿ ಹರಡಿದ್ದ ಧೈರ್ಯಶಾಲಿಗಳೂ ವೀರಾಗ್ರಣಿಗಳೂ ಎಂದು ಪ್ರಸಿದ್ಧ ರಾದ ಮರಾಠರಿಗೆ ಮೊದಲನೆಯ ಸ್ಥಾನವನ್ನು ಕೊಡುತ್ತಿದ್ದರು. ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಇಬ್ಬರೂ ಪ್ರಬಲ ಶತ್ರುಗಳಾಗಿ ಬ್ರಿಟಿಷರಿಗೆ ದೊಡ್ಡ ಸೋಲನ್ನು ೦ಟುಮಾಡಿ ಈಸ್ಟ್ ಇಂಡಿಯ ಕಂಪೆನಿ ಯನ್ನು ಧ್ವಂಸಮಾಡುವಷ್ಟರಲ್ಲಿದ್ದರು. ಆದರೆ ಅವರ ವ್ಯಾಪ್ತಿ ಎಲ್ಲವೂ ದಕ್ಷಿಣದಲ್ಲಿ, ಆದ್ದರಿಂದ ಒಟ್ಟಿನಲ್ಲಿ ಭಾರತದ ಮೇಲೆ ಹೆಚ್ಚು ಪರಿಣಾಮಮಾಡಲಿಲ್ಲ. ಹೈದರಾಲಿಯು ಒಬ್ಬ ಅಸಾಧ್ಯ ವ್ಯಕ್ತಿ, ಭಾರತೀಯ ಇತಿಹಾಸದಲ್ಲಿ ಒಬ್ಬ ಪ್ರಸಿದ್ಧ ಪುರುಷ, ಆತನಿಗೆ ಒಂದು ಬಗೆಯ ರಾಷ್ಟ್ರೀಯ ಭಾವನೆ ಇತ್ತು. ಆತನು ದೂರದೃಷ್ಟಿಯುಳ್ಳ ಒಬ್ಬ ಮಹಾನಾಯಕ, ಪ್ರಬಲವಾದ ರೋಗದಿಂದ ನರಳುತ್ತಿದ್ದರೂ, ಆತನ ಆತ್ಮ ಸಂಯಮ ಕಷ್ಟ ಸಹಿಷ್ಣುತೆ ಮತ್ತು ಕಾರ್ಯಶಕ್ತಿ ಅತ್ಯಾಶ್ಚರ್ಯಕರವಿದ್ದವು. ಆತನು ನಾವಿಕ ಬಲದ ಪ್ರಾಮುಖ್ಯತೆಯನ್ನೂ ನಾವಿಕಾ ಶಕ್ತಿಯನ್ನವಲಂಬಿಸಿದ್ದ ಬ್ರಿಟಿಷರಿಂದ ಒದಗಬಹುದಾದ ಅಪಾಯ ವನ್ನೂ ಎಲ್ಲರಿಗೂ ಮೊದಲು ಅರಿತುಕೊಂಡನು. ಅವರನ್ನು ಭಾರತದಿಂದ ಓಡಿಸಲು ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ಮಡಿದನು. ಮರಾಠರಲ್ಲಿಗೆ, ನೈಜಾಮನಲ್ಲಿಗೆ, ಅಯೋಧ್ಯೆಯ ಪೂಜಾವು ದೌಲನಲ್ಲಿಗೆ ರಾಯಭಾರಿಗಳನ್ನು ಕಳುಹಿಸಿದನು. ತನ್ನ ದೇ ನಾವಿಕಾಪಡೆಯನ್ನು ಕಟ್ಟಿ ಮಾಲಿನ್ ದ್ವೀಪಗಳನ್ನು ಹಿಡಿದನು, ತನ್ನ ನಾವೆಗಳನ್ನು ಕಟ್ಟಿ ನೌಕಾಪಡೆಯನ್ನು ಹೆಚ್ಚಿಸಲು ಅದನ್ನೇ ತನ್ನ ವಾಸಸ್ಥಾನವನ್ನಾಗಿಮಾಡಿಕೊಂಡನು. ತನ್ನ ಸೈನ್ಯದೊಂದಿಗೆ ಬರುತ್ತಿರುವಾಗ ದಾರಿಯಲ್ಲಿ ಪ್ರಾಣ ಬಿಟ್ಟನು. ಆತನ ಮಗನಾದ ಟಿಪೂ ನಾವಿಕಾಬಲವನ್ನು ಅಭಿವೃದ್ಧಿಗೊಳಿಸುತ್ತಾ ಬಂದನು. ಟಿಪ್ಪು ನೆಪೋಲಿಯನ್ನ ನಿಗೂ ಕಾನ್‌ಸ್ಟೆಂಟಿನೋಪಲ್ ನ ಸುಲ್ತಾನನಿಗೂ ಸಂದೇಶಗಳನ್ನು ಕಳುಹಿಸಿದನು. ಉತ್ತರದಲ್ಲಿ ಪಂಜಾಬಿನಲ್ಲಿ ರಣಜಿತ್ ಸಿಂಗನ ನಾಯಕತ್ವದಲ್ಲಿ ಸಿಕ್ ರಾಜ್ಯ ಸ್ಥಾಪನೆಯಾಗಿ ಅದು ಕಾಶ್ಮೀರ ಮತ್ತು ವಾಯವ್ಯ ಪ್ರಾಂತ್ಯದವರೆಗೆ ಹಬ್ಬಿತ್ತು. ಆದರೆ ಅದೂ ಒಂದು ಕೊನೆಯಲ್ಲಿ ಹುಟ್ಟಿದ ರಾಜ್ಯ. ಭಾರತದಲ್ಲಿ ಪರಮಾಧಿಕಾರದ ಹೋರಾಟದಲ್ಲಿ ನಿಜವಾದ ಪರಿಣಾಮ ಮಾಡಲಿಲ್ಲ. ಆ ಹೋರಾಟವು ಹದಿನೆಂಟನೆಯ ಶತಮಾನದ ಅಂತ್ಯದ ಹೊತ್ತಿಗೆ ಮರಾಠರು ಮತ್ತು ಇಂಗ್ಲೀಷರು ಇಬ್ಬರ ಮಧ್ಯ ಉಳಿಯಿತು. ಉಳಿದ ಎಲ್ಲ ರಾಜ್ಯಗಳು, ಆಡಳಿತಗಳು ಇವರಿಬ್ಬರ ಅಧೀನವಾದವು. * ಬ್ರಿಟಿಷರು ೧೭೯೯ರಲ್ಲಿ ಮೈಸೂರಿನ ಚಮ್ರವನ್ನು ಸೋಲಿಸಿದರು. ಅಂತ್ಯ ಹೋರಾಟವು ಇದ ರಿಂದ ಮರಾಠರಿಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೂ ಮಧ್ಯೆ ನಿಂತಿತು. ಆಗಿನ ಬ್ರಿಟಿಷ್ ಅಧಿಕಾರಿಗಳಲ್ಲಿ ಚಾಲ್ಲಿ ಸ್ ಮೆಟಾಫ್ ಬಹಳ ದಕ್ಷನಾಗಿದ್ದನು. ಆತನು ೧೮೦೬ರಲ್ಲಿ “ ಭಾರತದಲ್ಲಿ ಮರಾಠರು ಮತ್ತು ಬ್ರಿಟಿಷರು ಈ ಇಬ್ಬರನ್ನು ಬಿಟ್ಟರೆ ಬೇರೆ ಯಾವ ಶಕ್ತಿಯೂ ಇಲ್ಲ. ಉಳಿದೆಲ್ಲ ರಾಜರೂ ಇವರಲ್ಲಿ ಯಾರಾದರೊಬ್ಬರ ಸ್ವಾಮ್ಯವನ್ನು ಒಪ್ಪುತ್ತಾರೆ. ನಾವು ಒಂದು ಅಂಗುಲ ಹಿಂದೆ ಸರಿದರೂ ಅವರು ಅದನ್ನು ಆಕ್ರಮಿಸಿಕೊಳ್ಳುತ್ತಾರೆ” ಎಂದು ಬರೆದಿದ್ದಾನೆ. ಆದರೆ ಮರಾಠ ನಾಯ ಕರಲ್ಲಿ ಪರಸ್ಪರ ಜಗಳಗಳಾಗಿ ಅಂತರ್ಯುದ್ಧಗಳಾದವು. ಬ್ರಿಟಿಷರು ಅವರನ್ನು ಒಬ್ಬೊಬ್ಬರನ್ನಾಗಿ ಸೋಲಿಸಿದರು. ಅವರೂ ಕೆಲವು ಯುದ್ಧಗಳನ್ನು ಗೆದ್ದರು. ೧೮೦೪ರಲ್ಲಿ ಆಗ್ರ ಬಳಿ ಮರಾಠರು ಬ್ರಿಟಿಷರನ್ನು ಬಲವಾಗಿ ಸೋಲಿಸಿದರು. ಆದರೆ ೧೮೧೮ರ ಹೊತ್ತಿಗೆ ಮರಾಠರು ಪೂರ್ಣ ಪರಾಜಯ ಹೊಂದಿದರು. ಮಧ್ಯ ಭಾರತದ ಮರಾಠ ರಾಜರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಶರಣಾಗತ ರಾಗಿ ಅವರ ಪರಮಾಧಿಕಾರವನ್ನು ಒಪ್ಪಿದರು. ಬ್ರಿಟಿಷರು ಆಗ ಭಾರತದ ಬಹು ಭಾಗದಲ್ಲಿ ನೇರ ವಾಗಿಯೋ, ತಮ್ಮ ಅಧೀನರಾದ ರಾಜರುಗಳ ಮೂಲಕವೂ ಅಧಿಕಾರ ಮಾಡುತ್ತ ಎದುರಿಲ್ಲದ ಪರಮಾ ಧಿಕಾರ ಪಡೆದರು. ಪಂಜಾಬ್ ಮತ್ತು ಗಡಿನಾಡಿನ ಕೆಲವು ಭಾಗಗಳು ಅವರ ಅಧೀನವಾಗಿರಲಿಲ್ಲ. ಆದರೆ ಭಾರತದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಸ್ಥಾಪನೆಯಾಯಿತು, ಸಿಕ್ಕರು, ಗೂರ್ಖಾಗಳು ಮತ್ತು ಬಲ್ಮೀಯರೊಡನೆ ಆದ ಯುದ್ದಗಳೆಲ್ಲ ಆ ಸಾಮ್ರಾಜ್ಯದ ಗಡಿಯನ್ನು ವಿಸ್ತರಿಸಲು ಮಾಡಿದ ಯುದ್ಧಗಳು.