ಪುಟ:ಮಾತೃನಂದಿನಿ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಸತೀಹಿತೈಷಿಣಿ

ಗಣದಲ್ಲಿ ಸರಸವಾಣಿಯ ಇಷ್ಟರ ಸ್ವ್ರೆರಾಲಾಪಕ್ಕೆ ಆತಂಕವುಂಟಾಗದೆ ಇರುತ್ತಿದ್ದಿತೋ? ಪಾಪ, ನಿಮ್ಮ ಸರಸ ಸಲ್ಲಾಪಕ್ಕೆ ನಾನೇಕೆ ವಿಘ್ನಕಾರಿಯಾಗಬೇಕೆಂದು ಅಲ್ಲಿಯೇ ನಿಂತನು. ನಂದಿನಿ:--ಸುರಸೆ!ಕೇಳಿದಿಯೇನು? ನಿನ್ನ ನಾದಿನಿಯ ಚಾಟೂಕ್ತಿಯನ್ನು ಚೆನ್ನಾಗಿ ಕೇಳಲಿಲ್ಲವೇ? ಸುರಸೆ:--ತಲೆಯೆತ್ತಿ,-"ಏನು ಹೇಳಿದೆ? ನಂದಿನಿ !” ನಂದಿನಿ:-ಈವರೆಗೆ ಏನು ಮಾಡುತ್ತಿದ್ದೆ!ಹೀಗೇಕೆ ಮೌನವಾಗಿ ಕುಳಿತಿದ್ದೆ ? ಪರಿಮಳೆ:-ಬೇಡವೇನು ? ನಾಲ್ಕಾರು ವರ್ಷಗಳಿಂದಲೂ ವಿಷಯ ಸಾಮ್ರಾಜ್ಯದಲ್ಲಿ ನಲಿದಾಡುತ್ತಿದ್ದ ತಮ್ಮ ಮುಂದೆ, ಆಜನ್ಮ ಬ್ರಹ್ಮಚಾರಿಣಿಯಾಗಿರುವವಳೊಬ್ಬಳು, ವಿಷಯಗಳ ವಿಚಾರವಾಗಿಯೂ ಪ್ರಕೃತಿಧರ್ಮ ವಿಚಾರವಾಗಿಯೂ ಬಹು ಧಾರಾಳಬುದ್ಧಿಯಿಂದ ತಕ್ಕ ಉದಾಹರಣೆಯೊಡನೆ ಭಾಷಣ ಮಾಡಿದರೆ, ಮತ್ತೆ ಹೇಗಾಗಬೇಕು? ಮೌನವನ್ನು ಹಿಡಿದಿದ್ದುದೊಂದು ಅತಿಶಯವೋ? ಮರುಳರಂತೆ ಕುಣಿದಾಡಿದರೂ ಆಕ್ಷೇಪವಿಲ್ಲ. ಅಲ್ಲವೆ? ಅತ್ತಿಗೆ! ಸುರಸೆ:- ಪರಿಮಳಾ! ನೀನು ಹೇಗಾದರೂ ಹಾಸ್ಯಮಾಡು. ನನಗೆ ನಂದಿನಿಯ ದೀರ್ಘಭಾಷಣದಿಂದ ಆಶ್ಚರ್ಯವುಂಟಾಗಿದ್ದುದು ನಿಜ. ಇವಳಲ್ಲಿ ಇಷ್ಟರ ಪಾಂಡಿತ್ಯವಿದೆಯೆಂದು ನಾನು ಈವರೆಗೂ ತಿಳಿದಿರಲಿಲ್ಲ. ಅದರೆ, ಈಗಲೂ ಇವಳು ಇದೆಲ್ಲವನ್ನೂ ಹೇಗೆ ತಿಳಿದಳೆಂಬುದೇ ನನಗೆ ಬಗೆ ಹರಿದಿಲ್ಲ. ಪರಿಮಳೆ:-ಹೇಗೆ ತಿಳಿದೆಯೆಂದು ಅವಳನ್ನೇ ಕೇಳು? ಸುರಸೆ:-ನಾನು ಕೇಳಲಾರೆನು. ನಂದಿನಿ:-ಸುರಸೆ! ಪರಿಮಳೆ! ಸಾಕು! ಹೆಂಗಸರು ಕುಳಿತೆಡೆಯಲ್ಲಿ ಈ ರಗಳೆಯು ತಪ್ಪಿದುದೇ ಅಲ್ಲವೆಂದು ಬಲ್ಲವರಾಡುವುದು ಸುಳ್ಳಲ್ಲ, ಇನ್ನು ಹೆಚ್ಚು ಮಾತು ಬೇಡ. ಪರಿಮಳೆ:-ಇದೊ, ಬಿಟ್ಟೆ; ಆದರೆ ಒಂದೇ ಪ್ರಶ್ನೆಗೆ ಉತ್ತರವನ್ನು ಹೇಳು. ಅತ್ತೆ ಮಾವಂದಿರ ಕೈಕೆಳಗಿರುವ ಕ್ರಮವನ್ನೂ, ಗಂಡನನ್ನು ನೀತಿಮಾರ್ಗ