ಪುಟ:ಮಾತೃನಂದಿನಿ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 ಸತೀಹಿತೈಷಿಣೀ|

ಅಸದ್ವರ್ತನೆಗಳೇನಾದರೂ ನಡೆದಿದ್ದರೆ, ಇವರಿಗೆ ಶಿಕ್ಷೆಯಾಗಲೇ ಬೇಕು. ಇಲ್ಲವಾದರೆ ನಮ್ಮಲ್ಲಿ ಹೇಳಲಾಗದು. ಇನ್ನು ತೆರಳಬಹುದು; ಇದೊ ನಮ್ಮೆಲ್ಲರ ವಂದನೆಗಳು.

ಇಷ್ಟಕ್ಕೆ ಸರಿಯಾಗಿ ಹೊರಗೆ ಅಡಗಿ ನಿಂತು ಕೇಳುತ್ತಿದ್ದ ಅಚಲ ಚಂದ್ರನು ನಗುನಗುತ್ತ ಓಡಿಬಂದು- "ಓಹೋ! ಭಟ್ಟಾಚಾರ್ಯರೂ ಸಂತರೂ ಇಲ್ಲೇ ಇರುವರು. ಸರಿ, ಸರಿ! "ಯಾರು ಹೊರಗೆ? ಹೋಗಿ ಹೇಳಿರಿ, ಸ್ವಾಮಿಗಳಿಗೆ ಬೇಗ ತಿಳಿಸಿರಿ. ಬಹಿಷ್ಕೃತರಾಗಿರುವ ನಮ್ಮೊಡನೆ ಇವರೂ ವ್ಯವಹಾರ ಮಾಡಿರುವರು. ನಮಗಾಗುವುದಕ್ಕೆ ಮೊದಲೇ ಇವರಿಗೆ ಪ್ರಾಯಶ್ಚಿತ್ತವಾಗಬೇಕಾಗಿರುವುದು.” ಅಹುದೋ, ಅಲ್ಲವೋ- - ಭಟ್ಟಾಚಾರ್ಯರೇ ? ನೋಡಿಕೊಳ್ಳಿರಿ.'ಪರರಕೇಡು-ತನ್ನ ಕೇಡು' ತಿಳಿದು ಕೊಳ್ಳಿರಿ. ಕರ್ಮಹೀನರ ವಸತಿಗೆ ಬಂದಿರುವುದರಿಂದ ಮೊದಲು ನಿಮ್ಮ ಕೈಕಾಲುಗಳಿಗೆ ಇಲ್ಲಿಯೇ ಪ್ರಾಯಶ್ಚಿತ್ತಮಾಡಿಕೊಳ್ಳಿರಿ.” ಎಂದು ಹೇಳುತ್ತ ಬಳಿಗೆ ಬಂದನು. ಇವನನ್ನು ನೋಡಿ, ಪಾಪ, ನಮ್ಮ ಸಂತರಿಗೂ ಭಟ್ಟಾಚಾರ್ಯರಿಗೂ ನಡುಕಹತ್ತಿ, ಅಲ್ಲಿದ್ದರೆ ಮತ್ತೇನಾಗುವುದೋ ಎಂಬ ಭೀತಿಯಿಂದ ತಲೆ ತಪ್ಪಿಸಿಕೊಂಡು ಹೊರಟೇ ಹೋದರು. 'ಅತ್ಯಾಚಾರಕ್ಕೆ ಇದೇ ಪ್ರತಿಕಾರ'ವೆಂದು ಹೇಳುತ್ತ ಎಲ್ಲರೂ ಅಲ್ಲಿಂದೆದ್ದು ನಡೆದರು.