ಪುಟ:ಮಾತೃನಂದಿನಿ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172

              ಸತೀಹಿತೈಷಿಣಿe

ಪತ್ನಿಯಲ್ಲಿ,-ಪ್ರಜ್ಞಾಸ್ವರೂಪಿಣಿಯಾದ ಸಹಧರ್ಮಿಣೆಯಲ್ಲಿ, ಕಾಲೋಚಿತವಾಗಿ ಸಮಾಲೋಚಿಸಿ, ತಕ್ಕಂತೆ ಸಹಾಯವನ್ನು ಹೊಂದಿ, ಸಕಲ ಧರ್ಮ-ಅರ್ಥಸಂಬಂಧವಾದ ಕ್ರಿಯಕಲಾಸಗಳಲ್ಲಿ ಕೃತಕಾರ್ಯರಾಗುವವರು ವಿರಳ. ಇ೦ತಹ ಪುರುಷಶ್ರೇಷ್ಠರಲ್ಲಿ ಸಧ್ಯಸ್ಥಿತಿಯಲ್ಲಿ ನಮ್ಮ ನಗೇಶರಾಯನೇ ಅಗ್ರಗಾವಿಯಾಗಿರುವನೆಂದರೆ ಅತ್ಯುಕ್ತಿಯಲ್ಲ. ( ಸಾಧು ಸಾಧು.)

ನಾಗೇಶರಾಯನಲ್ಲಿ ಇಂತಹ ಲೋಕೋತ್ತರ ಗುಣಗಳಿರುವುದರಿಂದಲೇ, ಆತನು ತನ್ನ ಸಹಧರ್ಮಿಣಿಯೊಡನೆ, ದೇಶಮಾತ್ತೃ ಸೇವೆಯಲ್ಲಿ ಕೃತಕೃತ್ಯನಾಗಿರುವನು. ಸತೀಮಣಿಯಾದ ಚಿತ್ರಕಲೆಯು, ಪತಿಯ ಛಾಯಾನುವರ್ತಿನಿಯಾಗಿರುವುದರಿಂದಲೇ, ಶಿವಪುರದಲ್ಲಿ ಈ ಕೆಳಗೆ ಸಂಭವಿಸಿದ ಸಮಾಜಶಾಸನ ಸಂಬಂಧವಾದ ಗಂಡಾಂತರಗಳೆಲ್ಲವನ್ನೂ ದಾಟಿ, ವಿಘ್ನಕಾರಿಗಳ ಪುಂಡಾಟವಡಗುವಂತೆ ಮಾಡಿ, ಪ್ರತಿಜ್ಞಾಪರಿಪಾಲನೆಯಲ್ಲಿ ಅಪ್ರತಿಮನೆನ್ನಿಸಿದನು.

ಇನ್ನೊಂದು ಕಡೆಯಲ್ಲಿ ನೋಡಿದರೆ, ಸಪತ್ನೀಮಾತ್ಸರ್ಯದ ಭೀಕರ ವ್ಯಾಧಿಯು ನಮ್ಮವರಲ್ಲಿ ಬಹುಜನರನ್ನು ನರಳಿಸುತ್ತಿರುವುದಾದರೂ, ನಿರ್ಮತ್ಸರ ಪ್ರೇಮಮಯವಾಗಿರುವ ಚಂದ್ರಮತೀದೇವಿಯಿ೦ದ ಅದು ಪುಭವ ಹೊಂದುವಂತಾಯಿತು. ಅಂತಹ ನಾರೀಮಣಿಯ ಸಹವಾಸಲಾಭದಿಂದ ಶರಶ್ಚಂದ್ರನಾಥನು, ಲೋಕೋತ್ತಮ ಗುಣಸಂಪನ್ನನಾದ ಅಚಲಚಂದ್ರನಿಂದ ನಿರಂತರವೂ ಸೇವಿಸಲ್ಪಡುವಂತಾದನು. ಹಾಗಾಗದಿದ್ದರೆ, ಇಂತಹ ಪುತ್ರರತ್ನವನ್ನು ಪಡೆದೂ ಅದೃಷ್ಟಹೀನನಾಗಿ ನರಳಬೇಕಾಗುತ್ತಿದ್ದಿತು.

ಮತ್ತೂ ಕೇಳಿರಿ ಬಾಂಧವರೇ!

ನಾಲ್ಕಾರು ಅಕ್ಷರಗಳನ್ನು ಕಲ್ತು, ಒಂದೆರಡು ಕಲೆಗಳನ್ನು ತಿಳಿದು,ಯಾವುದೋ ಒಂದು ಸರ್ಕಾರಿ (ಅಲ್ಪವೋ-ಅಧಿಕವೋ ಹೇಗಾದರೂ ಸರಿ) ಉದ್ಯೋಗ ಅಥವಾ ಅಧಿಕಾರವನ್ನು ಕೈಕೊಂಡ ಮಾತ್ರಕ್ಕೆ, ಅಹಂಕಾರ-ಉದಾಸೀನಗಳಿಂದ ಬೀಗಿ, ದೀನಾನಾಥರಲ್ಲಿ ಒಂದಿಷ್ಟಾದರೂ ದಯೆತೋರಿದರೆ, ತಮಗಾರು ಸರಿ, ತಾವಾರಿಗೆ ವಿಧೇಯರಾಗಬೇಕು' ಎಂಬ ದುರ್ಭಾವನೆಯಿಂದ ತಮ್ಮ ಕರ್ತವ್ಯವನ್ನೇ ಮರೆತು, ಕುಳಿತಿರುವವರೆಷ್ಟೋ ಮಂದಿಯಿರುವರು. ಇಂತವರಲ್ಲಿ ಕೆಲವರು, ತಮ್ಮ ವಯಃಪ್ರಾಬಲ್ಯಕಾಲ.