ಪುಟ:ಮಿಂಚು.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

148

ಮಿಂಚು


ಮೃದುಲಾಬೆನ್ ಗೆ ರಾಷ್ಟ್ರಪಕ್ಷದ ಕೃಪೆ ಇದೆ. ನಾವು ದಿಲ್ಲಿಯಲ್ಲಿದ್ದಾಗ ಅವರ ಪರಿಚಯ
ವಾಯ್ತು. ಕರ್ತೃತ್ವಶಾಲಿ ಮಹಿಳೆ, ಕಲಾತಂಡದ ಜತೆ ಇಲ್ಲಿಗೆ ಬರ್ತಾರೆ, ಈ
ತಿಂಗಳ ಕೊನೆಯ ವಾರ, ನಿಮ್ಮ ಸಹಕಾರ ಬೇಕಲ್ಲ?"
ಕಾರ್ಯಕ್ರಮದ ವಿವರ ತಿಳಿದು ಸುಲೋಚನಾಬಾಯಿ ಅಂದಳು :
“ನೂರು ಟಿಕೆಟ್ ನಾವು ಮಾರ್ತೇವೆ. ಐ.ಜಿ.ಪಿ.ಯವರ ಪತ್ನಿ ಆಶ್ರಮದ
ನಮ್ಮ ಕಮಿಟೀಲಿದ್ದಾರೆ.”
"ಹಾಗೋ! ಐ.ಜಿ.ಪಿ. ಜತೆ ಮಾತಾಡ್ತೇನೆ. ಐನೂರು ಟಿಕೆಟ್ ಅವರ
ಜವಾಬ್ದಾರಿ. ಉಳಿದು ಐದು ನೂರು ಇತರ ಸರಕರೀ ಕಚೇರಿಗಳ ಮೂಲಕ
ಮಾರಟವಾಗ್ತವೆ. ನೀವು ಮತ್ತು ಮಿಸೆಸ್ ಐ.ಜಿ.ಪಿ.-ಅವರ ಹೆಸರೇನು ?"
"ಸುಹಾಸಿನಿ ಪ್ರಭು."
"ನೀವು ಮತ್ತು ಅವರು ಆತಿಥೇಯರ ಸಮಿತಿಯಲ್ಲಿರಬೇಕು. ನೀವು ಸಂಚಾಲ
ಕರು. ಆ ಭಾನುವಾರ ನಾಟ್ಯಮಂದಿರ ನಿಮ್ಮ ವಶದಲ್ಲಿರ್ತದೆ. ಏನು ಸಹಾಯ ಬೇಕಾ
ದರೂ ಕೇಳಿ. ನಮ್ಮ ಆಪ್ತ ಕಾರ್ಯದರ್ಶಿಗೆ ಫೋನ್ ಮಾಡಿದರೆ ಸಾಕು.... ಕಿಷ್ಕಿಂಧೆಯ
ಮಟ್ಟಿಗೆ ನಿಮ್ಮ ಅನಾಥಾಶ್ರಮವನ್ನೇ ರಾಜ್ಯದ ಕೇಂದ್ರ ಘಟಕವಾಗಿ ಪ್ರತಿಷ್ಠಾನ
ಸ್ವೀಕರಿಸಿಸಲಿ. ನಿಮಗೆ ಇನ್ನಷ್ಟು ಹಣ ಬರ್ತದೆ."
"ಕಮಿಟಿಯ ಮುಂದೆ ಈ ವಿಷಯ ಇಡ್ತೇನೆ."
"ನಿಬಂಧನೆಗಳ ವಿಚಾರ ತಾನೆ? ತಿದ್ದು ಪಾಟು ಮಾಡಿದರಾಯಿತು.... ಕಾರ್ಯ
ಕ್ರಮಕ್ಕೆ ಸಂಬಂಧಿಸಿ ಜಾಹೀರಾತು ವಾರ್ತಾಇಲಾಖೆಯವರು ಪತ್ರಿಕೆಗಳಿಗೆ ಕೊಡ್ತಾರೆ.
ಅದರಲ್ಲಿ ಸಂಚಾಲಕರು ಅಂತ ನಿಮ್ಮ ಮತ್ತು ಅ-ಆ-"
"ಸುಹಾಸಿನಿ ಪ್ರಭು."
"ಅವರ ಹೆಸರುಗಳಿರ್ತವೆ. ಭಿತ್ತಿಪತ್ರಗಳನ್ನೂ ಮಾಡಿಸೋಣ. ಪ್ರತಿಷ್ಠಾನದ
ಕಿಷ್ಕಿಂಧೆ ಸಂದರ್ಶನ ಒಂದು ಐತಿಹಾಸಿಕ ಸಂಭವವಾಗ್ಬೇಕು."
"ಆಗಲಿ,ಮಾತಜಿ."
"ಇಷ್ಟರ ತನಕ ಒಂದು ಅನಾಥಾಶ್ರಮ ನಡೆಸ್ತಿದ್ದಿರಿ. ಇನ್ನು ಅಖಿಲ ಭಾರತ
ವ್ಯಾಪ್ತಿಯಲ್ಲಿ ನಿಮ್ಮ ಚಟುವಟಿಕೆ. ಹಾಗನಿಸುತ್ತೆ ನಿಮಗೆ?"
"ತಮಗೆ ಧನ್ಯವಾದ ಅರ್ಪಿಸ್ತೇನೆ. ಅಷ್ಟೆ."
"ಆಶ್ರಮಕ್ಕೆ ಫ಼ೋನ್ఆ ಇಲ್ಲ,ಅಲ್ಲವೆ?"
"ಇಲ್ಲ. ಅದೊಂದು ತೊಂದರೆ."
"ಸರಿಯಾದ ವಿಳಾಸ, ವಿವರ, ಆಪ್ತ ಕಾರ್ಯದರ್ಶಿ ಹತ್ತಿರ ಕೊಟ್ಟ ಹೋಗಿ,
ನಾಳೆ ಟೆಂಪರರಿ ಫ಼ೋನ್ ಬರ್ತದೆ.ಮುಂದೆ ಅದನ್ನು ಖಾಯಂ ಮಾದಿಸಿದರಯ್ತು."
"ತಮ್ಮಿಂದ ಬಹಳ ಉಪಕಾರವಾಯ್ತು"

 * * *