ಪುಟ:ಶಕ್ತಿಮಾಯಿ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no೬ ಸ, ಚರಿದ್ರಿಕೆ, ಮುಂದಕ್ಕೆ ಸರಿದು ಡೇರೆಯ ಒಳಗೆ ಯಾರಿರುವರೆಂಬದನ್ನು ಟಕಮಕ ನೋ ಡಹತ್ತಿದಳು; ಆಗ ಆಕೆಗೆ ತನ್ನ ಬಾಲ್ಯ ಸ್ನೇಹಿತ ಗಣೇಶದೇವ ರಾಜನೂ, ನಿರೂಸವರಾಣಿಯ ಒತ್ತಟ್ಟಿಗೆ ಕುಳಿತು ಸಸ್ನೇಹದಿಂದ ಮಾತು-ಕಥೆಯಾದುವದು ಕಂಡಿತಲ್ಲದೆ, ಆ ದಂಪತಿಗಳಿಗೆ ಒಂದು ಸಂತಾನವಾಗಿರುವದೂ ಗೊತ್ತಾಯಿತು. ಗಣೇಶದೇವನನ್ನು ಹೆಂಡ ತಿಯೊಡನೆ ಶಕ್ತಿಮಯು ಇದೇ ಮೊದಲು ನೋಡಿದ್ದು, ನಿರೂಪಮೆ ಯ ಅಖಂಡ ಸುಖಶಾಂತಿಗಳು, ಸೌಭಾಗ, ಪತಿಸ್ಸೇದ, ಪುತ್ರಸ್ನೇಹ, ಸಮಾಜದಯಲ್ಲಿ ವಿಶುದ್ಧ ಶ್ರದ್ದೆ ಇವುಗಳು ಒಂದರ ಹಿಂದೊಂದರಂತೆ ಶಕ್ತಿಯಮನಸ್ಸಿನಲ್ಲಿ ಮನೆಮಾಡಹತ್ತಿದವು. ಅಷ್ಟರಲ್ಲಿ ತನ್ನ ಸ್ವಂತದ ಪ್ರೇಮನ, ಸೌಖ್ಯ ಹೀನ, ಶಾಂತಿಹೀನ, ದುಃಖವೂರ್ಣ ಹಾಗು ಭೀಕರವಾದ ಹತಾಶ ಜೀವಿತದ ರಸವು ಅವಳ ಮನಸ್ಸನ್ನು ಆವ ರಿಸಲು, ಆಗ ಅವಳು ಮನಸ್ಸಿನಲ್ಲಿಯೇ-ಭಗವಾನ್ ನನ್ನ ಯಾವ ಭ ಯಂಕರ ಅಪರಾಧದ ಸಲುವಾಗಿ ನನ್ನನ್ನು ಈ ಪರಿ ವಿರುದ್ಧಾವಸ್ಥೆ ಯಲ್ಲಿರಿಸಿರುವೆ? ಎಂದು ಯೋಚಿಸಿದಳು. ಈ ವಿಚಾರದಿಂದ ಅವಳ ಹೃದಯವು ತೀಕ್ಷ್ಮವಾದ ಈರ್ಷೆಯಿಂದ ಪ್ರೇರಿತವಾಗಲು, ಅದು ಕಾಡುಗಿಚ್ಚಿನಂತೆಯ, ತೀಕ್ಷ್ಯವಿಷಪಾನ ಮಾಡಿದಂತೆ. ಈ ರಿಯಹತ್ತಿತು. ಇಷ್ಟರಲ್ಲಿ ರಂಗೂಬಾಯಿಯು ತನ್ನ ಕಡೆಗೆ ಬರು ವದು ಆಕೆಗೆ ತೋರಲು, ಅವಳು ಹಿಂದೆ ಸರಿದು ಮತ್ತೆ ತನ್ನ ಪೂರ್ವ ದ ಸ್ಥಳದಲ್ಲಿ ನಿಂತಳು. ರಂಗಿಣಿಯು ಶಕ್ತಿಗೆ ಒಳಗೆ ಬರಲಿಕ್ಕೆ ಸೂ ಚಿಸಿದಳು. ಆದರೆ ಅವಳು ಹಾಗೆ ಮಾಡದೆ ನಾನು ಹೇಳತಕ್ಕ ಗುಪ್ತ ಸಂಗತಿಯನ್ನು ರಾಜನ ಹೊರತು ಬೇರೆ ಯಾರ ಮುಂದೂ ಹೇ ಳುವ ಹಾಗಿಲ್ಲ. ಆದ್ದರಿಂದ ಅವನನ್ನೇ ಹೊರಗೆ ಕರೆ, ಎಂದು ಸ್ಪಷ್ಟ ವಾಗಿ ತಿಳಿಸಿದಳು. ಬಳಿಕ ರಂಗಿಣಿಯು ಪುನಃ ಒಳಗೆ ಹೋಗಿ ರ ಜನನ್ನು ಹೊರಗೆ ಕಳಿಸಿದಳು. ಅವನು ಬಂದವನೇ ಆ ಭಿಕ್ಷುಕಿಯ