ಪುಟ:ಶಕ್ತಿಮಾಯಿ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ, ೧೫” ಮುಖವುಳ್ಳವನೂ ಆದ ಹೀನ ದೀನನೊಬ್ಬ ಕೈದಿಯು ತನ್ನ ಮುಂದೆ ಬಂದು ನಿಂತಿದ್ದನೆಂಬದು ಆಕೆಯ ನಿದರ್ಶನಕ್ಕೆ ಬಂದಿತು, ಶಕ್ತಿಮಯಿಯು ಇಂದು ಸನ್ಯಾಸಿನಿಯ ಇಲ್ಲವೆ ಬಡವೆಯ ವೇಷದಿಂದ ಅಲ್ಲಿಗೆ ಬಂದಿದ್ದಿಲ್ಲ. ಆಕೆಯು ರಾಜರಾಜೇಶ್ವರಿಯಂತೆ ಉತ್ತಮೋತ್ತಮ ವಸ್ತಾಲಂಕಾರಗಳನ್ನು ಧರಿಸಿಕೊಂಡು ಬಂದಿದ್ದಳು ಗಾಯಸುದ್ದೀನನೊಡನೆ ಶಕ್ತಿಮಯಿಯ ವಿವಾಹವಾದ ದಿವಸ ಒಂದು ಕ್ಷಣಮಾತ್ರ ಆಕೆಯು ಈ ತರದ ವೇಷಭೂಷಣಗಳನ್ನು ಧರಿಸಿಕೊಂ ಡಿದ್ದಳೆಂಬದನ್ನು ವಾಚಕರು ಬಲ್ಲರು; ಆದರೆ ಆನಂತರ ಇಂದಿನವರೆಗೆ ಆ ತರದ ಸುಲತಾಣೆಗೆ ಪರಿಶೋಭಿಸುವ ವೇಷಭೂಷಣಗಳನ್ನು ಎಂದೂ ಧರಿಸಿದ್ದಿಲ್ಲ. ಯಾಕಂದರೆ ಅವಳು ತಿಳಿದೇ ಆಗಲಿ, ತಿಳಿಯ ದೇ ಆಗಲಿ, ಸೇಡಿನ ಹವ್ಯಾಸದ ಬಲಿಗೆ ಬಿದ್ದು ಗಾಯಸುದ್ದೀನನೋ ಡನೆ ಲಗ್ನವಾದ ಉತ್ತರ ಕ್ಷಣದಲ್ಲಿಯೇ ಅವಳಿಗೆ ತನ್ನ ಕುಲಗೇಡಿ ತನದ ಹಾಗು ಉಚ್ಛಖಲವೃತ್ತಿಯ ಬಗ್ಗೆ ಮನಸ್ಸಿನಲ್ಲಿ ಬಹ ಪಶ್ಚಾತಾಪವುಂಟಾಗಿತ್ತು. ಅದರಿಂದಲೇ ಅವಳು ಈ ವರೆಗೆ ತನ್ನ ಪದವಿಗೆ ತಕ್ಕಂತೆ ವಸ್ತ್ರಾಲಂಕಾರಗಳನ್ನು ಧರಿಸುತ್ತಿರಲಿಲ್ಲ. ಆದರೆ ಈ ದಿವಸ ಅವಳು ಅವುಗಳನ್ನು ಒಳ್ಳೆ ಆನಂದದಿಂದ ಧರಿಸಿ ಮೆರೆಯಬಂದಿದ್ದಿಲ್ಲ. ಯಾವನು ತನ್ನನ್ನು 'ಕೀಳಜಾತಿಯವಳೆಂದು ತಿರಸ್ಕರಿಸಿ ಬಿಟ್ಟಿದ್ದನೋ, ಆ ಯಃಕಶ್ಚಿತ್ ಸಾಮಂತ ರಾಜನನ್ನು ತನ್ನ ಐಶ್ವರ್ಯದ ಬೆಳಕಿನಿಂದ ದಂಗುಬಡಿಸಿ ಬಿಡಬೇಕೆಂದು ಹೀಗೆ ಸು ಸುಜ್ಜಿತಳಾಗಿ ಬಂದಿದ್ದಳು. ಆದರೆ ಮೇಲೆ ವರ್ಣಿಸಿದಂತೆ ಗಣೇಶದೇ ವನ ದೀನಮರ್ತಿಯು ಎದುರಿಗೆ ಬಂದು ನಿಂತದ್ದನ್ನು ಕಂಡು ಅವಳು ಪ್ರಸ್ತರ ಮೂರ್ತಿಯಂತೆ ಸ್ತಬ್ಧಳಾಗಿಬಿಟ್ಟಳು. ಆಗ ಅವಳ ಮನಸ್ಸಿ ನಲ್ಲಿ ಯಾವ ವಿಚಾರಗಳು ಉತ್ಪನ್ನವಾಗುತ್ತಿದ್ದವು ಮತ್ತು ರಾಜನ ಆ ದುರ್ದೆಸೆಯನ್ನು ಕಂಡು ಅವಳಿಗೆ ಸುಖವಾಗುತ್ತಿತ್ತೊ, ದುಃಖ