ಪುಟ:ಶಕ್ತಿಮಾಯಿ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ, ಚಂದ್ರಕ, ದಂತೆ ಸುಲ್ತಾನ ಪುತ್ರ ಗಾಯಸುದ್ದೀನನೂ ಮನಸ್ಸು ಮಾಡಿದ್ದನು. ತಂದೆಯು-ವೃದ್ಧಪಿತನು ಆ ತರುಣಿಯನ್ನು ಅಪಹರಿಸಬೇಕೆನ್ನು ರುವದನ್ನು ಕೇಳಿ ಗಾಯಸುದ್ದೀನನು ಸಿಟ್ಟಿನಿಂದ ಹುಚ್ಚನಾದನು, ಶಕ್ತಿಮಯಿಯ ಮೋಹದಿಂದ ಆ ತಂದೆ-ಮಕ್ಕಳಲ್ಲಿ ಎಂದೂ ಏಕೀ ಕರಣವಾಗದಂಥ ದ್ವಂದವು-ದ್ವೇಷವು ಉಂಟಾಯಿತು. ಸ್ತ್ರೀಮಾಯೆ ಯೇ ಅಂಧ ಬಲಿಷ್ಠವಾದದ್ದಲ್ಲವೇ! ಆಕೆಯನ್ನು ಒಲಿಸಿಕೊಳ್ಳುವದ ಕ್ಕಾಗಿ ಅವರು ತಮ್ಮ ಎಲ್ಲ ಐಶ್ವರ್ಯ, ರಾಜ್ಯ, ಹಾಗು ಪ್ರಾಣಿಗ ಇನ್ನು ಕೂಡ ಆಹುತಿಯಾಗಿ ಕೊಡಲಿಕ್ಕೆ ಸಿದ್ಧರಾಗಿದ್ದರು!! ಆಗ ನವಾ ಬನು ಮನಸ್ಸಿನಲ್ಲಿ ಯೋಚಿಸಹತ್ತಿದನು.-“ನಾನು ಈಕೆಗಾಗಿ ಸಾಯ ಬೇಕೋ, ಈಕೆಯ ಹಂಬಲವನ್ನು ಬಿಟ್ಟು ದೇಶಾಂತರ ತೆರಳಬೇಕೋ? ಥ, ಸತ್ತರೂ ಚಿಂತೆಯಿಲ್ಲ, ಆದರೆ ಬಿಟ್ಟು ಬಿಡುವದು ಸರಿಯಲ್ಲ ಎಂಬ ವಿಚಾರವು ದೃಢವಾಗಲು, ಅದರಂತೆ ನಡೆಯಲಿಕ್ಕೆ ಅವನು ಟೊಂಕಕಟ್ಟಿದನು, ನವಾಬ ಗಾಯಸುದ್ದೀನನಿಗೆ ಸುವರ್ಣಗ್ರಾಮವೆಂಬದು ಬಾದ ಶಹನಿಂದ ಉಂಬಳಿಯಾಗಿ ಕೊಡಲ್ಪಟ್ಟಿತ್ತು. ಆದ್ದರಿಂದ ನವಾಬನು ಯಾವಾಗಲೂ ಅಲ್ಲಿಯೇ ಇರುತ್ತಿದ್ದನು. ಈ ದಿನ ಅನ್ನೊತ್ಸವ ಕೆಂದು ಅವನು ರಾಜಧಾನಿಗೆ ಬಂದಿದ್ದನು. ಸುವರ್ಣ ಗ್ರಾಮದಲ್ಲಿ ಆವನ ಸಂಪೂರ್ಣ ಅಧಿಕಾರವಿತ್ತು; ಇಷ್ಟೇ ಅಲ್ಲ, ನವಾಬನು ತನ್ನ ಸ್ವಂತ ಹೆಸರಿನ ನಾಣ್ಯಗಳನ್ನು ಕೂಡ ಅಲ್ಲಿ ಪ್ರಚಾರದಲ್ಲಿ ತಂದಿದ್ದನು. ಆದರೂ ಬಾದಶಹನಿಂದ ಅವನಿಗೆ ಯಾವ ತರದ ಆತಂಕವೂ ಇದ್ದಿ ೪. ತನ್ನ ತರುವಾಯ ಇಡಿ ರಾಜ್ಯಕ್ಕೆ ಅಧಿಕಾರಿಯಾಗುವ ತನ್ನ ಹಿರಿಯ ಮಗನು-ಗಾಯಸುದ್ದೀನನು ಈಗ ಸುವರ್ಣಗ್ರಾಮದಲ್ಲಿ ಸರ್ವಾಧಿಪತ್ಯವನ್ನು ನಡೆಸಿಕೊಂಡರೆ ತಪ್ಪೇನು ಎಂದು ಸುಲ್ತಾನನು ಮನದಂದು ಗಾಯಸುದ್ದೀನನ ಉಸಾಬರಿಯನ್ನೇ ಮಾಡುತ್ತಿದ್ದಿಲ್ಲ.