ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಂದನೆಗಳು

  • ಬೋಧ

ಶ್ರೀ ಮಹಾರಾಜರವರ ಕೃಪೆಯಿಂದ ( ಬೋಧ ಸುಧೆ ' ಯ ಈ ಪದ್ಯಾನುವಾದವು ಇದೀಗ ಬೆಳಕನ್ನು ಕಾಣಲಿದೆ. ಅದಕ್ಕಾಗಿ ಅವರ ಸಿರಿಚರಣ ಗಳಿಗೆ ನಾನು ನನ್ನ ಅನನ್ಯ ವಂದನೆಗಳನ್ನು ಸಲ್ಲಿಸುವೆ. ಶ್ರೀ ಗುರುದೇವ ರಾನಡೆ ಶಾಮರಾಯರು ಆಗಾಗ ಸಲಹೆಯನ್ನಿತ್ತರು. ಸುಧೆ' ಯ ಮರಾಠಿ ಪ್ರಸ್ತಾವನೆಯಲ್ಲಿಯ ಕೆಲಭಾಗವನ್ನೂ : ನಿತ್ಯ ನೇಮಾವಲಿ' ಯ ಪ್ರಸ್ತಾವನೆಯಲ್ಲಿಯ ಕೆಲಭಾಗವನ್ನು ಕನ್ನಡಿಸಿ ಇದರಲ್ಲಿ ಉಪಯೋಗಿಸಲು ಅನುಮತಿಯನ್ನು ಇತ್ತರು. ಅದಕ್ಕಾಗಿಯೂ ಅವರ ಕೃಪಾಶೀರ್ವಾದಗಳಿಗಾಗಿಯೂ ಅವರಿಗೆ ನನ್ನ ಹಾರ್ದಿಕ ವಂದನೆಗಳು, ನನ್ನ ಹಿರಿಗೆಳೆಯರಾದ ಶ್ರೀಮಾನ್ ಸಂಗೋರಾಮ ಕೃಷ್ಣರಾಯರು ಇದನ್ನು ಪ್ರಸಿದ್ಧಿಸಿದರು. ಮತ್ತು ನನ್ನ ತರುಣ ಗೆಳೆಯರಾದ ಶ್ರೀಮಾನ್ ದೇಶಪಾಂಡೆ ದಾದಾಸಾಹೇಬರವರು ತಮ್ಮ ಶ್ರೀ ಗಣಪತಿ ಸಂಸ್ಥಾನ ಮುದ್ರಣಾಲಯದಲ್ಲಿ ಇದನ್ನು ಅಂದವಾಗಿ ಮುದ್ರಿಸಿದರು. ಅದಕ್ಕಾಗಿ ಅವರೀರ್ವರಿಗೂ ನಾನು ತುಂಬಾ ಉಪಕೃತನು. ಶಾ ೦ ತಿ ಕು೦ ಜ ವಿಕ್ರಮಪುರ ಅಥಣಿ. ದಿ. ೧೫-೧೨-೧೯೫೨ ತಮ್ಮ ನ ಶ್ರೀ. ದೇಶಪಾಂಡೆ