ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೯೩ ಶ್ರೀಮದ್ಭಾಗವತವು [ಅಧ್ಯಾ, ೨೧ ಪೂರೈಕವಾದ ತಮ್ಮ ದೃಷ್ಟಿಯಿಂದಲೇ ಆ ಕೃಷ್ಣನಿಗೆ ಪೂಜೆಯನ್ನ ರ್ಪಿ ಸುವಂತೆ ನೋಡುತ್ತಿರುವುವು. ಆಹಾ ! ಇವು ತಿರಕ್ಕುಗಳಾದರೂ ಎಷ್ಟು ಧನ್ಯಗಳು ! ಆವುಮಾತ್ರವೇ ಅಲ್ಲ! ಅವುಗಳ ಪಕ್ಕದಲ್ಲಿ ಗಂಡುಜಿಂಕೆಗಳೂ ಆಶ್ಚರಪರವಶವಾಗಿ ನೋಡುತ್ತಿರುವುವು ನೋಡಿರಿ ! ನಾವು ಈ ಕೃಷ್ಣ ನಂತಹ ಮತ್ತೊಬ್ಬ ಪುರುಷನನ್ನು ಕಣ್ಣೆತ್ತಿ ನೋಡಿದರೆ ನಮ್ಮ ಪತಿಗಳು, ಸ ಹಿಸುವರೆ? ಅದೂ ಹೋಗಲಿ! ಸಖಿಯರೆ! ಆದೋ ! ಮೇಲೆ ನೋಡಿರಿ! ವಿ ಮಾನಚಾರಿಗಳಾದ ದೇವತಾಸ್ಸಿಯರು, ತಮ್ಮ ಪತಿಗಳ ತೊಡೆಯಮೇಲೆ ಕುಳಿತಿರುವಾಗಲೂ, ಅವರನ್ನು ಲಕ್ಷಮಾಡದೆ, ರೂಪಶೀಲಗಳಲ್ಲಿ ಸಮಸ್ತ ಸ್ತ್ರೀಯರಿಗೂ ನೇತ್ರೋತ್ಸವದಂತಿರುವ ಆ ಕೃಷ್ಣನ ಸೌಂದರಕ್ಕೂ, ಆ ವನ ವೇಣುಗಾನಕ್ಕೂ ಮೋಹಿತರಾಗಿರುವುದನ್ನು ನೋಡಿದಿರಾ ! ಅವರು ಆ ಕೃಷ್ಣನನ್ನು ಒಂದಾವರ್ತಿ ನೋಡಿದಮಾತ್ರಕ್ಕೆ ಧೈರಗೆಟ್ಟು, ಹೂಮುಡಿ ಗಳು ಉಹಿರಿಬಿದ್ದುದನ್ನೂ, ಸೀರೆಯು ಸಡಿಲಿದುದನ್ನೂ ತಿಳಿಯದೆ, ಮೈಮ ರೆತಿರುವರು ನೋಡಿರಿ! ಇದೋ! ತಿರಗಂತುಗಳಾದ ಈ ಗೋವುಗಳು, ಆ ಕೃಷ್ಣನ ಮುಖದಿಂದ ಹೊರಡುತ್ತಿರುವ ವೇಣುಗಾನಾಮೃತವನ್ನು ,ಸ್ವಲ್ಪ ಮಾತ್ರವೂ ಕೆಳಗೆ ಬಿಳದಂತೆ ಕಿವಿಯಲ್ಲಿ ತುಂಬಿಕೊಳ್ಳುವುವೋ ಎಂಬಂತೆ, ಕಿವಿಗಳನ್ನು ನೆಟ್ಟಗೆ ನಿಗುರಿಸಿ ನಿಂತಿರುವುವು ನೋಡಿರಿ! ಈ ಕರುಗಳೂಕೂಡ, ಕೃಷ್ಣನ ವೇಣುಗಾನವು ಕಿವಿಗೆ ಬಿದೊಡನೆ, ತೊರೆಯಿಕ್ಕುತ್ತಿರುವ ತಮ್ಮ ತಾಯಿಯ ಸ್ತನದಕಡೆಗೂ ದೃಷ್ಟಿಯಿಡದೆ, ಬಾಯಲ್ಲಿ ತುಂಬಿದ ಹಾಲು ಕೆಳಗೆ ಚೆಲ್ಲಿ ಹೋಗುವುದನ್ನೂ ತಿಳಿಯದೆ, ನಮ್ಮ ಕಿವಿಯಿಂದ ಕೇಳುತ್ತ, ದೃ ಮೈಮಾರ್ಗವಾಗಿ ತಮ್ಮ ಮನಸ್ಸಿನೊಳಗೆ ಪ್ರವೇಶಿಸಿದ ಆ ಕೃಷ್ಣನೊಡನೆ, ಆಲಿಂಗನಸುಖವನ್ನನುಭವಿಸುವಂತೆ, ಕಣ್ಣುಗಳಿಂದ ಆನಂದಬಾಷ್ಪವನ್ನು ಸುರಿಸುತ್ತಿರುವುವು ನೋಡಿರಿ! ಅಮ್ಮಾ! ಈ ಆಶ್ರವನ್ನು ನೋಡಿದೆಯಾ ? ಪ್ರಾಯಕವಾಗಿ ಈ ವನದಲ್ಲಿರುವ ಪಕ್ಷಿಗಳೆಲ್ಲವನ್ನೂ ಮಹಾತಪಸ್ವಿಗಳಾದ ಋಷಿಗಳೆಂದೇ ಹೇಳಬಹುದು! ಏಕೆಂದರೆ, ಇವು ಫಲಪುಷ್ಪಗಳಿಂದಲೂ,ಚಿಗು ರುಗಳಿಂದಲೂ ತುಂಬಿದ ಈ ಮರದ ಕೊಂಬೆಗಳಮೇಲೆ ಕುಳಿತಿದ್ದರೂ, ಆ ಭೋಗ್ಯವಸ್ತುಗಳಲ್ಲಿಯೂ ಆಸೆಯಿಲ್ಲದೆ,ವಿರಕ್ತಿಯಿಂದ ಮೌನವ್ರತವನ್ನು ಹಿ