ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಕ್ತವತ್ಸಲನಾದುದರಿಂದ ವಾಯುದೇವರು ಭಕ್ತನಾದ ನಾನು ಒಂಟಿಗನಾಗಿ ಹೋಗುವುದನ್ನು ನೋಡಿ ಸಹಿಸಲಾರದೆ ತನ್ನ ಮಹಾ ಬಲತ ಸಾರಕವಾಗು ವಂತೆ, ಸಮುದ್ರದೊಳಗೆಲ್ಲ ತೀರ ಮಾರ್ಗವಾಗಿಯೇ ನನಗೆ ಸಂಗಡಿಗನಾಗಿ ಬಂದು ನನಗೀ ಕಿಡಾ ಸಂಖ್ಯಗಳನ್ನು ಪ್ರಸಾದಿಸಿದನು, ವಾಯು ಮಹಿಮೆ ಯಿಂದುಂಟಾದ ವಿಕಾರವೂ, ವಾಂತಿ, ನನಗೆ ಅಸಾಖ್ಯ ವನ್ನು ಂಟು ಮಾಡಿ ತೆಂದು ನೀವು ಎಣಿಸುವಿರೋ ಏನೋ, ಆದರೆ ನಿನವನ್ನು ವಿಚಾರಿಸಲಾಗಿ, ನನ ಗವು ಒಳ್ಳೆಯ ವೈದ್ಯರಹಾಗೆ ಒಳಗಣ ಕಲ್ಮಷವನ್ನು ಹೋಗಗೊಳಿಸಿ ಆರೋ ಗ್ಯವನ್ನೇ ಉಂಟು ಮಾಡಿ ನನ್ನ ನ್ನು ಮಹಾಬಲನ ಹಾಗೆ ಸತ್ಯಸಂಪನ್ನ ನನ್ನಾಗಿ ಮಾಡಿದುವು. ನಾನು ಹಡಗಿ ನಲ್ಲಿರುತ್ತಿದ್ದ ಮೂರುದಿನ ವುಪವಾಸವತ ಕೈಕೊಂ ಡಿದ್ದ ಸಂಗತಿಯನ್ನು ಬುದ್ಧಿವಂತರಾದ ನೀವು ಇದಕ್ಕೆ ಮೊದಲೇ ಊಹಿಸದಿರಲಾ ರಿರಿ, ನನ್ನ ಭಾಗ್ಯವನ್ನೆನೆಂದು ಹೇಳಲಿ ? ಅದರಲ್ಲಿ ಕಡೆದುದಿನ ಕಾದಶಿ ಕೂಡ ಆಯಿತು, ಆ ಕಡೆಯುದಿನದ ನಿರಾಹಾರ ಪುಣ್ಯಕ್ಷ ಯಾವುದಾದರೂ ಸರಿ ಯುಂಟೇ ? ಉಳಿದ ಎರಡು ದಿನಗಳ ಫಲವೂ ಹೊಗೆದು ಹಡಗೇರಿದ ಶಾಸಕ ಸರಿಹೋದರೂ, ಹರಿವಾಸರ ದಿನದ ಶುಷ್ಪಪವಾಸದ ಪುಣ್ಯ ಫಲವು ನನಗೆ ಹೆಚ್ಚಾಗಿ ಉಳಿಯದಿರದು, ಶ್ರೀಹರಿಯ ಕರುಣ ಕಲಾ ಕ್ಷವುಳ್ಳವರಿಗೆ ಎಲ್ಲಿ ಹೋದರೂ ಪುಣ್ಯಕೆ ಶೆಪವಿಲ್ಲ, ಆ ಮೇಲಿನ ಚರಿತ್ರೆಯನ್ನು ಕೇಳಿರಿ. ಎರಡನೆಯ ಪುಕರ್ರವು. ನಾಲ್ಕನೆಯದಿನ ದ್ವಾದಶಿಯ ಪಾರಣೆಗೆ ಅನುಕೂಲವಾಗಿ ಪ್ರಾತಃಕಾಲದ ಲ್ಲಿಯೆ ಹೊಗೆದುಹಡಗು ಬೆನ್ನ ಪುರಿದು ರೇವನ್ನು ಸೇರಿತು. ಹಡಗು ಲಂಗರು ಹಾ ಕಿದೊಡನೆ ಯಷ್ಟೇ ಸಣ್ಣದೋಣಿಗಳು ಅಲ್ಲಿಗೆ ಬರಲು, ನಾನೊಂದು ದೋಣಿ ಹನ್ನೇರಿ ತೀರಕ್ಕೆ ಹೋದೆನು. ತೀರದಿಂದ ನೂರು ಗಣನಡೆಯುವುದರೊಳಗಾಗಿ ಎತ್ತಿನ ಬಂಡಿಯೊಂದು ಕಣ್ಣಿಗಿದರಾಯಿತು. K ಊರಿಗೆ ಹೋಗುವುದಕ್ಕೆ ಬಾಡಿಗೆಗೆ ಬಂಡಿ ತೆಗೆದುಕೊಂಡು ಬರು ವೆಯಾ” ಎಂದು ನಾನಾ ಬಂಡಿಗಾರನನ್ನು ಕೇಳಿದೆನು, ಅವನೇನೋ ಅರವದಲ್ಲಿ ಹೇಳಲಾಗಿ ನನಗೆ ತಿಳಿಯದೆ “ ನಿನಗೆ ತೆಲುಗು ಬರುವುದೇ'? ಎಂದಾತ ನನ್ನು ಕೇಳಿದೆನು, ಆಮೇಲೆ ನಮಗಿಬ್ಬರಿಗೂ ಈಕೆಳಗಿನಂತೆ ಸಂಭಾದ್ರಣೆ ನಡೆಯಿತು,

- * ¥