ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ

              ಪ್ರಸ್ತಾವನೆ 

ಕಳೆದ ಒಂದೂವರೆ ಶತಮಾನ ಈಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಪ್ರಗತಿ ಉಂಟಾಗಿವೆ .ಬಹುಪಾಲು ಕಾಯಿಲೆಗಳ ಕಾರಣಗಳು ತಿಳಿದಿವೆ.ಅತ್ಯಂತ ಒಳ್ಳೆಯ ಪರಿಣಾಮ ಬೀರುವ ಮದ್ದುಗಳು ಮತ್ತು ಯಶಸ್ವಿ ಚಿಕಿತ್ಸಾ ವಿಧಾನಗಳು ಈಗ ಲಭ್ಯವಿವೆ .ಆದರೂ ಅವು ಬಹುಪಾಲು ಜನರಿಗೆ ದೊರಕುತ್ತಿಲ್ಲ ವೆಂಬುದು ಸರ್ವವೆದ್ಯ .ಜನರ ಬಡತನ ಮತ್ತು ಆರೋಗ್ಯ ಸೇವಾ ಸೌಲಭ್ಯಗಳು ಸುಲಭವಾಗಿ ದೊರಕದಿರುವುದು ಇಂಥ ಪರಿಸ್ಥಿತಿಯ ಕಾರಣಗಳ ಎಂಬುದರಲ್ಲಿ ಸಂದೇಹವಿಲ್ಲ .ಲಭ್ಯವಿರುವ ಅಲ್ಲ ಸ್ವಲ್ಪ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಜನರಲ್ಲಿರುವ ಕಾಯಿಲೆ ಶಾಲೆಗಳ ಬಗೆಗಿನ ಅಜ್ಞಾನ ಮೂಢನಂಬಿಕೆ ಉದಾಸೀನ ಪ್ರವೃತ್ತಿಗಳು ಅಡ್ಡ ಬರುತ್ತಿವೆ .ವ್ಯಾಪಕ ಹಾಗೂ ಪರಿಣಾಮಕಾರಿ ಆಗಬಹುದಾದ ಆರೋಗ್ಯ ಶಿಕ್ಷಣದ ವ್ಯವಸ್ಥೆ ಈ ದಿಸೆಯಲ್ಲಿ ಜರೂರಾಗಿ ಆಗಬೇಕಾಗಿದೆ .

ಜನಸಾಮಾನ್ಯರಿಗೆ ಆರೋಗ್ಯ ಮತ್ತು ಕಾಯಿಲೆಗಳು ವಿಚಾರಗಳನ್ನು ತಿಳಿಸಲು ಅವರಾಡುವ ಭಾಷೆಗಳಲ್ಲಿ ಸರಳ ಹಾಗೂ ಜನಪ್ರಿಯ ವೈದ್ಯಕೀಯ ಸಾಹಿತ್ಯ ನಿರ್ಮಾಣವಾಗ ಬೇಕಾಗುತ್ತದೆ .ಇಂಗ್ಲಿಷ್ ನಂತಹ ಜಾಗತಿಕ ಭಾಷೆಯಲ್ಲಿ ಈ ತಾರೆಯ ಸಾಹಿತ್ಯ ವಿಪುಲವಾಗಿದೆ .ಕನ್ನಡ ಮತ್ತಿತರ ಭಾರತೀಯ ಭಾಷೆಗಳಲ್ಲಿ ಜನಪ್ರಿಯ ವಿಜ್ಞಾನ ಹಾಗೂ ವೈದ್ಯಕೀಯ ಸಾಹಿತ್ಯ ಪ್ರಕಾರಗಳ ಅಭಾವ ಈಗಲೂ ಇದ್ದೇ ಇದೆ. "...ಭಾಷಾಭಿವೃದ್ಧಿ ಮತ್ತು ಬೌದ್ಧಿಕ ಶಕ್ತಿಗಳು ಪರಸ್ ಪರಾವಲಂಬಿಗಳು .ಅಪಾರದರ್ಶಕ ವು ವಾಹನವು ಆದ ಪರಭಾಷಾ ದ್ವಾರದ ಶಿಕ್ಷಣ ನಿಷ್ಫಲ ವಾದ್ದರಿಂದ ನಮ್ಮಲ್ಲಿ ವೈಜ್ಞಾನಿಕ ವಾತಾವರಣ ಮೂಡಲಿಲ್ಲ .... ಯಾವ ಭಾಷೆಯೂ ಸಹಜವಾಗಿ ಬರಡಲ..ಜನರ ಶಕ್ತಿ ಸಾಮರ್ಥ್ಯಗಳು ಅದರ ಸ್ಥಿತಿಗತಿ ಗಳಲ್ಲಿ ಪ್ರತಿ ಬಿಂಬಿತವಾಗುತವೆ.ಪರಭಾಷೆ ಶೈಕ್ಷಣಿಕ ಹಾಗೂ ವ್ಯವಹಾರಿಕ ಮಾಧ್ಯಮವಾದ್ದರಿಂದ ವೈಜ್ಞಾನಿಕ ಭಾವನೆಗಳಿಗೂ ದೇಶ ಭಾಷೆಗಳಿಗೂ ದೈತ್ಯ ಕಂದಕ ಬಾಯಿ ತೆರೆದುಕೊಂಡಿದೆ." ಎಂಬು ದೇ. ಜ.ಗಾ. ಅವರ ಅನಿಸಿಕೆ ನಮ್ಮ ಭಾಷೆಗಳಲ್ಲಿ ವೈಜ್ಞಾನಿಕ ಸಾಹಿತ್ಯ ವೃದ್ಧಿ ಆಗದಿರುವುದಕ್ಕೆ.ಅವರು ಮುಂದುವರಿದು ಹೇಳುವಂತೆ ಇಂಗ್ಲಿಷಿನಲ್ಲಿ ಕಲಿತು ವೈಜ್ಞಾನಿಕ ಭಾವನೆಗಳು ನೆನಪಿನ ಕೂಪದಲ್ಲಿ ಸಂಗ್ರಹವಾಗಬಹುದು.ಆದರ ಅವು ಬುದ್ಧಿಗೆ ದಕಲಾರವು; ರಕ್ತಗತ ವಾಲಾರವು;ಬದುಕಿನ ಭಾಗವಾಗುವುದು ಇಲ್ಲ ." ಇದರಿಂದ ಕನ್ನಡ ಮತ್ತಿತರ ಭಾಷೆಗಳಲ್ಲಿ ವಿಜ್ಞಾನದ ತತ್ತ್ವ ಮತ್ತು ಸಂದೇಶಗಳನ್ನು ಜನರಿಗೆ ತಿಳಿಸುವ ವಾಹನವಾದ ಸರಳ ಸಾಹಿತ್ಯ ಪ್ರಕಾರಗಳು ಅಷ್ಟಾಗಿ ನಿರ್ಮಾಣವಾಗುತ್ತಿಲ್ಲ ಜೊತೆಗೆ ನಮ್ಮಲ್ಲಿ ಬಹುಪಾಲು