ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೧


                       ೨೦.ಗುದದ್ವಾರದ ಸೀಳು ರೋಗ
      ಚಳಿಗಾಲದಲ್ಲಿ ಕೆಲವರ ತುಟಿಗಳು ಒಡೆದು ಬಿರುಕುಗಳಾಗುವುದನ್ನು 

ನೋಡುತ್ತೇವೆ. ಅದೇ ರೀತಿಯಲ್ಲಿ ಜೀರ್ಣಾಂಗಗಳ ಇನ್ನೊಂದು ತುದಿ, ಗುದದ್ವಾರದ ಬಾಯಿಯಲ್ಲಿ ಬಿರುಕು (ಸೀಳು)ಗಳಾಗುವುದುಂಟು. ಆದರೆ ಈ ಸೀಳುಗಳು ಹವಾಮಾನದ ವ್ಯತ್ಯಾಸಗಳಿಂದುಂಟಾಗುವುದಿಲ್ಲ. ಮಲಬದ್ಧತೆ ಮತ್ತು ಆ ಪ್ರದೇಶದಲ್ಲಿರುವ ಬಿಗಿಸುತ್ತುಗಳ ಸೆಡೆತವೇ ಅವಕ್ಕೆ ಕಾರಣವಾಗಬಹುದು.

      ಗುದದ್ವಾರದ ಬಿರುಕುಗಳು ತುಟಿಯವುಗಳಿಗಿಂತ ಬಹುಪಾಲು ಉದ್ದ

ಮತ್ತು ಆಳವಾಗಿರುತ್ತವೆ. ಮಲವಿಸರ್ಜನಾ ಕಾರ್ಯವನ್ನು ನಿಯಂತ್ರಿಸುವ ಬಿಗಿಸುತ್ತುವಳವರರೆಗೂ ಅವು ವಿಸ್ತರಿಸಬಹುದು. ಬಿಗಿಸುತ್ತುಗಳು ಸಂಕುಚನ ಮತ್ತು ವಿಕಸನ ಗೊಂಡಾಗಲಲೆಲಾ ಆ ಸೀಳುಗಳ ಬಾಯಿ ಪದೇ ಪದೇ ತೆರೆದಂತಾಗಿ ರೋಗಿ ಸದಾ ಯಾತನ ಅನುಭವಿಸುವಂತಾಗುತ್ತದೆ. ಮಲವಿಸರ್ಜನೆಯ ಸಮಯದಲ್ಲಂತೂ ವಿಪರೀತ ನೋವಾಗುತ್ತದೆ. ಈ ನೋವಿನ ಭಯದಿಂದ ರೋಗಿ ಮಲವಿಸರ್ಜಯ ಪ್ರಚೋದನೆಗಳಾದರೂ ಕ್ರಿಯೆಯನ್ನು ಮುಂದೂಡುತ್ತಿರುತ್ತಾನೆ. ಹೀಗಾಗಿ ಮಲವಿಸರ್ಜನೆ ಮಾಡಲಾಗದ ಹಾಗೂ ಮಾಡದಿರಲಾಗದ ವಿಷವರ್ತುಲದಲ್ಲಿ ಸಿಲುಕಿ ವಿಲಿ-ವಿಲಿ ಒದ್ದಾಡುವಂತಾಗುತ್ತದೆ.

ಲಕ್ಷಣಗಳು

     ಗುದದ್ವಾರದ ಸೀಳು ರೋಗ ನಡುವಯಸ್ಕರಲ್ಲೇ ಹೆಚ್ಚಾಗಿ ಪ್ರಕಟವಾಗುತ್ತದೆ.

ಎಳೆಯರಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ವಯಸ್ಸಾದಂತೆ ಗುದನಾಳದ ಸುತ್ತಲ ಮಾಂಸಖಂಡಗಳು ಸಡಿಲಗೊಂಡಂತೆಲ್ಲಾ ವಯಸ್ಸಾದವರನ್ನು ಈ ವ್ಯಾಧಿ ಹೆಚ್ಚಾಗಿ ಬಾಧಿಸುವುದಿಲ್ಲ ಕಷ್ಟಕರ ಹೆರಿಗೆ ಸಮಯದಲ್ಲಿ ಶಿಶುವಿನ ತಲೆಯ ಒತ್ತಡ ಗುದದ್ವಾರದ ಕಡೆಗೂ ಪ್ರಸರಿಸುವುದರಿಂದ, ಸೀಳು ರೋಗದ ಪ್ರಮಾಣ ಮಹಿಳೆಯರಲ್ಲಿ ಪುರುಷರಿಗಿಂತಲೂ ಸ್ವಲ್ಪ ಹೆಚ್ಚು ಎಂತಲೇ ಹೇಳಬಹುದು.

    ಗಡಸು ಹಾಗೂ ಒರಟಾದ ಮಲದ ತುಣುಕುಗಳು ಮಲವಿಸರ್ಜನೆಯ

ಸಮಯದಲ್ಲಿ ಕೆಲಸಾರಿ ತೆರಚಿದ ಗಾಯಗಳನ್ನುಂಟು ಮಾಡುವುದುಂಟು. ಮುಂದೆ