ವಿಷಯಕ್ಕೆ ಹೋಗು

ಪುಟ:ಸ್ವಾಮಿ ಅಪರಂಪಾರ.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ
೨೧೩

ಅದು ಕ್ರಿಸ್ತಶಕ ಸಾವಿರದ ಎಂಟುನೂರ ಎಪ್ಪತ್ತನೆಯ ವರ್ಷದ__ ಶಾಲಿವಾಹನ ಶಕ
ಸಾವಿರದ ಏಳುನೂರ ಎಪ್ಪತ್ತೆರಡನೆಯ ಪ್ರಮೋದೂತ ಸಂವತ್ಸರದ___ಒಂದು ದೀರ್ಘ
ರಾತ್ರೆ.

* * *

ಬೆಳಿಗ್ಗೆ ಶಂಕರಪ್ಪ ಹಳ್ಳಿಗರನ್ನು ಕರೆತಂದು ಶವಸಂಸ್ಕಾರಕ್ಕಾಗಿ ಕೊಳದ ಬಳಿ ಒಂದು
ಕುಣಿ ತೋಡಿಸಿದ.
“ಹಾಲೇರಿವಂಶದ ಸ್ಥಾಪಕನನ್ನೂ ಇಲ್ಲೇ ಎಲ್ಲೋ ಮಣ್ಣು ಮಾಡಿರಬೇಕು' ಎಂದು
ಅವನಿಗೆ ಅನಿಸಿತು.
ಅಪರಂಪಾರನ ಪಾರ್ಥಿವ ಶರೀರವನ್ನೆತ್ತಿಕೊಂಡಾಗ ಶಂಕರಪ್ಪನಿಗೆ ಒಂದು ಕ್ಷಣ
ಅಳುಕಿತು.
ಐವತ್ತು ವರ್ಷಗಳಿಗೆ ಹಿಂದೆ ತಾನೊಮ್ಮೆ ಎತ್ತಿದ್ದಾಗ ಆ ಜೀವದಲ್ಲಿ ಕಾವಿತ್ತು.
ಈಗ ?
ಶಂಕರಪ್ಪ ನಿಂತ
“ನನಗೆ ಹುಚ್ಚು !” ಎಂದುಕೊಂಡು, ಮುಂದೆ ಚಲಿಸಿ, ಅಪರಂಪಾರನನ್ನು ಕುಣಿಯಲ್ಲಿ
ಇಳಿಬಿಟ್ಟ.
ತನ್ನ ಹರಕು ಕೋಟಿನ ಜೇಬಿನೊಳಗಿಂದ ಒಂದು ಪುಡಿಕೆಯನ್ನು ಜಾಗರೂಕತೆಯಿಂದ
ಹೊರ ತೆಗೆದು ಬಿಚ್ಚಿ, ಅದರೊಳಗಿದ್ದ ಒಂದು ರತ್ನಹಾರವನ್ನು ಕುಣಿಯೊಳಕ್ಕೆ ಮೆಲ್ಲನೆ
ಇಳಿಸಿದ.
ನಾಲ್ಕೂ ಕಡೆಗಳಿಂದ ಮಣ್ಣು ಮುಚ್ಚಿಕೊಂಡಿತು.
ಶಂಕರಪ್ಪ, ಅಪರಂಪಾರ ಕಣ್ಮರೆಯಾದುದನ್ನು ನೋಡುತ್ತ ನಿಂತ.
ನೆರೆದಿದ್ದವರಲ್ಲಿ ಯಾರೋ ಅಂದರು:
“ಶರಣರ ಗುಟ್ಟು ಮರಣದಲ್ಲಿ...”