ಪುಟ:Chirasmarane-Niranjana.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾಡಿಕೊಟ್ಟರು;ಮಹಾಕವಿ ವಲ್ಲತ್ತೋಳರ ಕವನಗಳನ್ನು ತಿಳಿಯ ಹೇಳಿದರು. ಹೀಗೆ ಆ ಮಧುರ ಕಂಠ ಹೊಸ ಚೈತನ್ಯದಿಂದ ಮೈತುಂಬಿಕೊಂಡಿತು.ಕಣ್ಣ ಎಲ್ಲರ ಗೌರವಕ್ಕೂ ಪಾತ್ರನಾದ.
ತನ್ನನ್ನು ಆ ಸ್ಥಿತಿಗೆ ತಂದ ಮಾಸ್ತರರೊಡನೆ ಓದುಬಾರದ ಕಣ್ಣ ಒಂದು ದಿನ ಕೇಳಿದ: "ಇನ್ನು ಬೇರೆ ಹಾಡುಗಳಿಲ್ಲವ ಮಾಸ್ತರೆ?"
"ಬೇಕಾದಷ್ಟಿವೆ.ಮನುಷ್ಯ ಮಾತು ಬಂದ ದಿನದಿಂದ ಹಾಡಿಲ್ವ?ಹಾಡು ಕಟ್ಟಿಲ್ವ?" "ಹಾಗಲ್ಲ ಮಾಸ್ತರೆ...."
ಆತ ಏನು ಹೇಳಲು ಹೊರಟ್ಟಿದ್ದನೆಂಬುದು ಅವರಿಗೆ ಸ್ಪಷ್ಟವಾಗಿತ್ತು.ಮನಸ್ಸಿನಲ್ಲೇ ನಕ್ಕುಅವರೆಂದರು:
"ನೋಡಪ್ಪ ಕಣ್ಣ.ನನ್ನ ಹತ್ತಿರ ಹತ್ತು ಹಾಡಿನ ಪುಸ್ತಕಗಳಿವೆ.ಎಲ್ಲ ನಿನಗೆ ಕೊಡ್ತೇನೆ.ನೀನೇ ಇಟ್ಕೊಂಡಿರು.
"ಕಣ್ಣನ ಮುಖ ಸಪ್ಪಗಾಯಿತು.ಮಾಸ್ತರು ಸಣ್ಣನೆ ನಕ್ಕರು."ಯಾಕೆ,ಪುಸ್ತಕ ಬೇಡ್ವ?"
ಉತ್ತರ ಕೊಡದೆ ಕಣ್ಣ ಹೊರಟುಹೋದ."ಅವನಿಗೆ ಅವಮಾನವಾಯ್ತೂಂತ ತೋರ್ತದೆ" ಎಂದ,ಹತ್ತಿರದಲ್ಲೇ ಇದ್ದ ಚಿರುಕಂಡ.
"ಹೋಗಲಿ ಬಿಡು"ಎಂದರು ಮಾಸ್ತರು.
ಮಾರನೆಯ ರಾತ್ರೆ ಕೋರನ ಹಟ್ಟಿಗೆ ಬಂದಾಗ,ಕಣ್ಣ ನಗುಮುಖನಾಗಿರಲಿಲ್ಲ.ಹಾಡಿದಾಗ ಕಂಠವೂ ಹೃದಯದ ತಾಕಲಾಟದ ಫಲವಾಗಿ ಕಂಪಿಸಿತು.ಹಾಡು ಮುಗಿದೊಡನೆಯೇ ಆತ ಮಾಸ್ತರ ಬಳಿಗೆ ಬಂದು,ತಾನು ದೊರಕಿಸಿ ತಂದಿದ್ದ ಸ್ಲೇಟನ್ನು ಅವರ ಮುಂದಿಟ್ಟು,"ಅಕ್ಷರ ಬರಕ್ಕೊಡಿ" ಎಂದ. ಮಾಸ್ತರು ನಗಲಿಲ್ಲ.ಸ್ಲೇಟನ್ನು ಪರೀಕ್ಷಿಸಿ ನೋಡಿ,"ಚೆನ್ನಾಗಿದೆ;ಎಲ್ಲಿಂದ ತಂದೆ?"ಎಂದರು."ನೀಲೇಶ್ವರದಿಂದ." "ಓ!ಇವತ್ತು ಹೋಗಿ ತಂದಿಯಾ?"
"ಹೌದು.ಅಕ್ಷರ ಬರಕ್ಕೊಡಿ." ಕಂಪಿಸುತ್ತಿದ್ದ ಆ ಸ್ವರದಲ್ಲಿ ಅಸಹನೆಯೂ ಬೆರೆತ್ತಿತ್ತು.ಮಾಸ್ತರ ಹೃದಯ ತುಂಬಿಬಂದಿದ್ದರೂ ಅದನ್ನು ತೋರಗೊಡದೆ,ಆಸ್ಲೇಟಿನ ಮೇಲೆ ಮೊದಲ