ಪುಟ:Hosa belaku.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೬

ನಡುವಿನ ಪರದೆ

ಬೆಲೆ ಎಷ್ಟು? ಅವಳು ಬೇರೆಯವರ ಜತೆಯಲ್ಲಿ ಸಹವಾಸ ಬೆಳಸಿದ್ದು ನಿನ್ನೆಯೇ ನನಗೆ ಗೊತ್ತಾಯಿತೆಂದು ತಾವು ಬಗೆದಿರಬಹುದು. ನನಗೆ ಅವಳಿಂದ ಆಗ ದಿನದಿನವೂ ಕಾಗದ ಬರುತ್ತಾ ಇತ್ತು. ಆಗಿನಿಂದಲೇ ನನಗೆ ಎಲ್ಲ ಸಂಗತಿಯ ಅರಿವಿದೆ. ಅವಳಿಗೆ ಅಷ್ಟೊಂದು ಪ್ರೀತಿ ಆ ಸಹವಾಸ ಬೆಳಿಸಿದವರ ಮೇಲಿದ್ದರೆ, ಆ ಬ್ರಿಟಿಶ್ ಆಫೀಸರನಿಂದ ಹುಟ್ಟಿದ ಕೂಸನ್ನು ನಾಯಿಯ ಗರ್ಭವೆಂದು ಅವಳು ಸ್ವಂತ ಕೈಯಿಂದ ಕೊಲ್ಲುತ್ತಿರಲಿಲ್ಲ!”

ಮೇಜರ್ ರಾಮನ್ ನಾಯರ್ ಬೆಪ್ಪರಾಗಿ ಬಿಟ್ಟರು. ಅವರ ಕಣ್ಣೆದುರಲ್ಲಿ ಜಾನಕಿಯ ಮೂರ್ತಿ ಬಂದು ನಿಂತು, ತಮಗೆ ಛೀ ಹಾಕುತ್ತಿರುವ೦ತೆ ಭಾಸವಾಯಿತು. ಮನದೊಳಗಿನ ಅವಳ ಮೂರ್ತಿ, ಗುಡುಗಾಡಿ ಹೇಳಿದಂತೆ ಭಾಸವಾಗತೊಡಗಿತು.

"ನೋಡಿ, ಈಗಲಾದರೂ ಪಾಠ ಕಲಿಯಿರಿ. ಈ ಓಸಾಕಾನಷ್ಟು ನೀವು ಮುಂದೆ ಹೋಗಿರಿ-ಎಂದು ನಾನು ಹೇಳುವುದಿಲ್ಲ. ಬೇರೆಯವರ ಪಾಪಕ್ಕಾಗಿ ಮತ್ತೊಬ್ಬರನ್ನು ಹಳಿಯಬೇಡಿ! ತಂದೆಯ ಸಾಲಕ್ಕಾಗಿ ಪಠಾಣನೊಬ್ಬ ನನ್ನಂಥ ಅಬಲೆಯನ್ನು ಬಲಾತ್ಕರಿಸಿದ್ದು ನನ್ನ ತಪ್ಪೇ? ವಿಚಾರ ಮಾಡಿ!"

ಹೆಚ್ಚು ಹೊತ್ತು ಸ್ವಪ್ನ ಸಮಾಧಿಯಲ್ಲಿರಲು ರಾಮನ್ ನಾಯರಿಗೆ ವೇಳೆ ಇರಲಿಲ್ಲ. ಸ್ಥಿತಪ್ರಜ್ಞರಂತೆ ಮೇಜರ್ ಓಸಾಕಾನ ಇಚ್ಛೆಯನ್ನು ತಮ್ಮ ಸಹೋದ್ಯೋಗಿಗಳ ಜತೆಯಲ್ಲಿ ಆಲೋಚಿಸಿ, ಅವನ ಕೊನೆಯಾಶೆ ಪೂರೈಸುವದು– ಎಂದು ನಿರ್ಧರಿಸಿದರು. ಕೂಡಲೆ, ಅವರಪ್ಪಣೆಯಂತೆ ಶ್ರೀಮತಿ ಓಸಾಕಾ ಉದಾಸೀನ ಮುದ್ರೆಯಿಂದ ಆ ಸ್ಥಳಕ್ಕೆ ಬಂದಳು. ಅವಳು ಬಂದುದೇ ತಡ; ಓಸಾಕಾ ಅವಳನ್ನು ತೆಕ್ಕೆಮುಕ್ಕೆಯಾಗಿ ಅಪ್ಪಿಕೊ೦ಡ. ಇಬ್ಬರೂ ಹುಚ್ಚು ಹಿಡಿದವರಂತೆ ನಗಲು ತೊಡಗಿದರು. ಆ ನಗು ರೋದನದ ನಾಂದಿಯಾಗಿ ಪರಿಣಮಿಸಿತು. ವೇಳೆಯಾದ್ದರಿಂದ ರಾಮನ್ ಇಬ್ಬರನ್ನೂ ಬೇರ್ಪಡಿಸಹೋದರು. ಆಗ ಅವರ ಕಣ್ಣಲ್ಲಿ ಮೊದಲ ಹನಿ ಮೂಡಿತು. ಆ ಹನಿ ಮುಂದೆ ಹಳ್ಳದ ರೂಪವಾಗಿ ಹರಿಯತೊಡಗಿತು. ಓಸಾಕ, ರಾಮನ್‌‌ರ ಈ ಸ್ಥಿತಿಯನ್ನು ಗಮನಿಸಿ ಅವರಿಗೆ: