ಪುಟ:Mrutyunjaya.pdf/೬೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೩೨

ಮೃತ್ಯುಂಜಯ

ನೀಳವಾಗಿ ಉಸಿರು ಬಿಟ್ಟು ನೆಫಿಸ್ ಅಂದಳು :
“ಕ್ಷಮಿಸ್ಬೇಕಾದ್ದು ನಾನಲ್ಲ. ನೀವು. ನನ್ನನ್ನು .ನಾನು ಪಾಪಿ.
ನಿಮ್ಮ ನಾಯಕನಾಗಿ ನನ್ನ ಗಂಡ ಏರಿದ ಎತ್ತರವನ್ನು ನಾನು ಮುಟ್ಟಲಿಲ್ಲ.”
ಸ್ನೊಫ್ರು : “ಹಾಗನ್ನಬಾರದು ನೆಫಿಸ್ ತಾಯಿ,”
ನೆಫಿಸ್: “ಇನ್ನು ರಾಜಗೃಹಕ್ಕೆ ಕರಕೊಂಡು ಹೋಗ್ತಿರಾ ?”
ನೆಫಿಸ್ : “ನಾನೂ ಬರಲಾ ? ಗೋರಿಗೆ ಕಳಿಸುವಾಗ ನಾನೂ
ಇರಲಾ ?”
ಸ್ನೊಫ್ರು: “ ತಾಯಿ ನೆಫಿಸ್, ದಿನ ತುಂಬಿದೆ. ಈ ಪರಿಸ್ಥಿತಿಯಲ್ಲಿ
ಅಂತ್ಯಕ್ರಿಯೆಗೆ ನೀವು ಬರಬಾರದು.”
ನೆಫಿಸ್ : “ ಹಾಗಾದರೆ ಬರಿಯ ಪಾಪಿಯಲ್ಲ, ಕಡು ಪಾಪಿ ನಾನು,”
ಖ್ನೆಮ್ ಹೊಟೆಪ್ ಕಾಣಿಸಿಕೊಂಡ.
ಸೊಪ್ಪು: "ಅಮ್ಮ, ಅಪ್ಪಣೆ ಕೊಡು.”
ನೆಫಿಸ್: “ನನ್ನದೆ ಈ ಒಡವೆ ? ನಾನು ಬಿಟ್ಟುಕೊಡಬೇಕೆ ?
ಶೋಕಾಲಾಪನೆ ಅಯ್ಯೋ ! ಅಯ್ಯೋ ! "
ರಾಮೆರಿಯೆಂದ :
“ಧೈರ್ಯ ವಾಗಿರು ಅಮ್ಮ.”
ನೆಫಿಸ್ ಮತ್ತೊಮ್ಮೆ ಪಾದಗಳಿಂದ ತಲೆಯತನಕ ಶವವನ್ನು ತಡವಿ
ದಳು. ಸಂಕಟವನ್ನು ಹತ್ತಿಕ್ಕಲಾಗದೆ, ರಾಮೆರಿಪ್ಟಾನನ್ನು ತಬ್ಬಿಕೊಂಡು
ಆರಂಭಿಸಿದಳು.
ಸ್ನೊಫ್ರು ಸನ್ನೆ ಮಾಡಿದ; ಖ್ನೆಮ್ ಹೊಟೆಪ್ ಸೂಚನೆ ಇತ್ತ, ಹಿರಿಯರು
ಹಲಗೆಗಳನ್ನೆತ್ತಿದರು. ಅವರು ಮುಂದಕ್ಕೆ ಹೆಜ್ಜೆ ಇಟ್ಟಂತೆ, ನೆಫಿಸ್ಳ ರೋದ
ನಕ್ಕೆ ನೆಜಮುಟ್, ತಬಬುನಾ, ಅಹೂರಾ, ನೆಫರುರಾ ಧ್ವನಿಗೂಡಿ
ಸಿದರು.
ಹೊರಗೆ ಕೇಳಿಸಿತು ಜನಸಾಗರದ ಭೋರ್ಗರೆತ.
“ಓ ಒಸೈರಿಸ್, ಓ ಒಸೈರಿಸ್; ಓ ಮೆನೆಪ್ ಟಾ, ಓ ಮೆನೆಪ್‌ಟಾ....”