ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦

ಪು.ತಿ.ನ.ಸಮಗ್ರ

ಸಾಧ್ಯ. ನಿನ್ನಂಥವರ ಪ್ರಯತ್ನ ಜಾಗ್ರದವಸ್ಥೆಯಲ್ಲಿ ಸ್ವಪ್ನಾವಸ್ಥೆಯನ್ನು ತಂದುಕೊಳ್ಳುವುದರಲ್ಲಿ ಮುಗಿಯುತ್ತದೆ. ಅದು ಹಾಲು, ಇದು ನೊರೆ. ರಸಿಕರಿಗೆ ಇಂಥ ನೊರೆಹಾಲು ಹೃದ್ಯ. ನಿದ್ರೆ ತರುವುದರಲ್ಲೂ ನೀನು ಗಟ್ಟಿಗ-ಇರಲಿ-ಅಂತೂ ನೀನು ಯತ್ನಶಾಲಿ. ಆದರೆ ನನ್ನಷ್ಟು ಕುಶಲನಲ್ಲ. ನನ್ನ ರಸಸಂಸರ್ಗದಿಂದ ಎಲ್ಲರ ಚೈತನ್ಯಕ್ಕೂ ಜಾಗ್ರದವಸ್ಥೆಯಲ್ಲಿಯೇ ಸ್ವಪ್ನಾವಸ್ಥೆನಿಸ್ಸಂಶಯವಾಗಿ ಪ್ರಾಪ್ತವಾಗುತ್ತದೆ. ಅದು ನಿದ್ರಾಂತವೂ ಆಗುತ್ತದೆ. ನಿನ್ನ ಕಸಬೂ ನನ್ನ ಕಸಬೂ ಒಂದೇ. ಏಕೆ, ನಿನಗಿಂತ ನಾನು ಹೆಚ್ಚು ಕುಶಲ. ಆದರೆ ನಿಮ್ಮ ಸಮಾಜದಲ್ಲಿ ನಿನಗಿಂತ ನನಗೆ ಹೆಚ್ಚು ತಿರಸ್ಕಾರ. ಏಕೋ ಕಾಣೆ. ಇದರಿಂದ ನನಗೇನೂ ವಿಷಾದವಿಲ್ಲ. ಇದನ್ನು ನಾನು ನಿನಗೆ ಹಾಕಿಕೊಳ್ಳುವ ಅರ್ಜಿ ಎಂದು ತಿಳಿದುಕೊಳ್ಳಬೇಡ. ಇದ್ದ ಸಂಗತಿಯನ್ನು ಹೇಳಿದೆ ಅಷ್ಟೆ.

ಈಚಲಮರ ಇಷ್ಟು ವಾಚಾಳನೆಂದು ನನಗೆ ಗೊತ್ತಿರಲಿಲ್ಲ. ನಾನೂ ಅದೂ ಒಂದೇ ಕಸಬಿನವರೆಂದು ಅದು ಹೇಳಿದ್ದನ್ನು ಕೇಳಿ ನನಗೆ ಸ್ವಲ್ಪ ರೇಗಿತು. ಸರಸ್ವತೀಪೂಸಾದರೂಪವಾದ ನನ್ನ ಸಾರಸ್ವತ ಸಂಪತ್ತೆಲ್ಲಿ? ಅಜ್ಞಾನಾಂಧತಮಸ್ಸನ್ನು ಪ್ರಕೋಪನ ಮಾಡುವ ಅದರ ಸುರೆಯಲ್ಲಿ? ಆದರೆ ಅದರ ಮಾತಿನಲ್ಲಿ ಸತ್ಯಾಂಶವಿಲ್ಲದೆ ಇರಲಿಲ್ಲ. ಜಾಗ್ರದವಸ್ಥೆಯಲ್ಲಿ ಸ್ವಪ್ನವನ್ನು ತಂದು ನೆಲೆಗೊಳಿಸುವುದಲ್ಲವೇ ಎಲ್ಲಾ ಕವಿಗಳ ಕಾರ್ಯ? ಅಲ್ಲಿ ಜೀವನದ ಮೂರರಲ್ಲಿ ಎರಡು ಸ್ಥಿತಿಗಳ ಸಮಗ್ರ ದೃಷ್ಟಿ ಸಿಕ್ಕುತ್ತದೆ. ಅದರಿಂದಲೇ ಪ್ರತ್ಯಕ್ಷಕ್ಕಿಂತ ಕಾವ್ಯವೇ ಸತ್ಯಕ್ಕೆ ಹೆಚ್ಚು ಸಮೀಪವಾಗಿದೆ. ಸುರೆಯ ಗುರಿಯೂ ಇದೆಯೇ? ಮದ್ಯಮತ್ತ ಕಾಣುವುದು ತಾನೆ ಏನನ್ನು? ಸುರಾಮತ್ತತೆಯಲ್ಲಿ ಸ್ವಪ್ನ ಜಾಗೃತಿಗಳ ಸಾಮರಸ್ಯವಿದೆಯೇ? ನಾನೂ ಈ ಈಚಲಮರವೂ ಹೇಗೆ ಒಂದೇ ಕಸಬಿನವರು? ನನ್ನದು ಸತ್ಯಾನ್ವೇಷಣೆ-ಇದರದೊ?

ಹೀಗೆಂದುಕೊಳ್ಳುತ್ತಿರುವಾಗ ಈಚಲಮರ ತನ್ನ ಗರಿಗಳನ್ನು ಸದ್ದು ಮಾಡತೊಡಗಿತು.

``ನೀನು ನನ್ನಿಕಾರನೋ? ನಾನಲ್ಲವೋ? ಈ ಒಂದೇ ಒಂದು ಉದಾಹರಣೆಯನ್ನು ತೆಗೆದುಕೊ. ಭೂಮಿ ಸುತ್ತುತ್ತದೆಯೋ-ಸೂರ್ಯನೋ? ಭೂಮಿಯೇ-ಸೂರ್ಯನಲ್ಲ-ಎಂಬ ತತ್ವ ನಿಮ್ಮ ಜಾಗ್ರದವಸ್ಥೆಯಲ್ಲಿ ನೆಲೆಗೊಳ್ಳುವುದಕ್ಕೆ ಎಷ್ಟೊಂದು ವರ್ಷಗಳ ಕಾಲ ಹಿಡಿಯಿತು; ಲೆಕ್ಕ ಮಾಡು. ಇದು ನಿಮಗಿನ್ನೂ ಅನುಮಿತ ಸತ್ಯ. ನಾನೋ. ಒಂದೇ ನಿಮಿಷದಲ್ಲಿ ಇದನ್ನು ಅನುಭೂತ ಸತ್ಯವನ್ನಾಗಿ ಮಾಡಬಲ್ಲೆ. ಈ ನೆಲ ಅಸ್ಥಿರ ಏಕೆ, ಎಲ್ಲವೂ ಅಸ್ಥಿರ,