ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪

ಪು.ತಿ.ನ.ಸಮಗ್ರ

ನನ್ನಿಂದ ಬೆಲ್ಲ ಮಾಡಿಸಿದರೂ ಮಾಡಿಸಿದರೇ! ಆ ಕಥೆ ಇರಲಿ, ಈಗ ಹಸಿದಿದೀಯೆ-ಇಗೋ ತಿನ್ನು ಎಂದು ಮರ್ಮರಿಸಿ ಸುಮ್ಮನಾಯಿತು ಈ ಕಾಂತಾರ ಖರ್ಜೂರ ವೃಕ್ಷ.

ನಾನು ಆಶ್ಚರ್ಯದಿಂದಲೂ ಆಶೆಯಿಂದಲೂ ತಲೆಯನ್ನು ಮೇಲಕ್ಕೆತ್ತಿದೆ. ಕಾಗೆಯೊಂದು ಈಚಲುಹಣ್ಣನ್ನು ಮುಖದ ಮೇಲೆ ಕೆಡವಿ ಹಾರಿಹೋಯಿತು. ಅದು ಬಿದ್ದ ಏಟಿಗೆ `ಹಾ' ಎಂದು ಮುಖ ಮುಚ್ಚಿಕೊಂಡೆ. ಎಷ್ಟಾದರೂ ಈಚಲು ಮರ ಈಚಲು ಮರವೇ-ಆದರೆ ಹಣ್ಣು ರುಚಿಯಾಗಿತ್ತು. ಏನು ದೈತ್ಯ ಮರವಯ್ಯಾ ಇದು ಎಂದು ಆ ಹಣ್ಣನ್ನು ಚೀಪುತ್ತಿರುವಾಗ ನನ್ನ ಗೆಳೆಯರು ಬಂದು ನನ್ನ ಸುತ್ತನಿಂತು ನಗುತ್ತಿದ್ದರು.

ಅಂದಿನಿಂದ ನನಗೂ ಈ ವೃಕ್ಷಕ್ಕೂ ಸ್ನೇಹ ಬೆಳೆದಿದೆ. ಈ ಸ್ನೇಹ ಹೇಗೆ ತಿರುಗುತ್ತದೆಯೋ ನೋಡಬೇಕು.