ಪುಟ:Vyshakha.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು 13

ಒಂದೊಂದು ಮರದ ಹಂಬಿಗೂ ಕಟ್ಟು ಬಿಗಿಯುತ್ತ ಸಾಗಿದರು.

3 “ಅಯ್ಯಯ್ಯೋ ಬಿದ್ದೇವೋಗಿದ್ನೆಲ್ಲ!... ಇದರ ವಂಸ ಎಕ್ಕುಟ್ಟೋಗ. ಎತ್ತಾಗೋದರೂವೆ ಕಾಲುಕಾಲಿಗೇ ತ್ವಡರಿಕತ್ತದಲ್ಲ!... ಕ್ವಾಪದಿಂದ ಲಕ್ಕ ಬೋಡ್ಡನ್ನ ಕಾಲ್ನಿಂದ ಝಾಡಿಸ್ದ. ಕುಂಯಯ್ಯೋ ಕುಂಯ್ಯಯ್ಯೋ ಅಂತ ಬೊಡ್ಡ ವಚ್ಚೋರಿಕೆ ಬಿದ್ದೋಡ್ತು. ಕಿಸ್ಣಶಾಸ್ತ್ರಿಗಳ ಮನಿಂದ ವೊಂಟ ಲಕ್ಕ ದೇವಗಣಗ್ಲೆ ಮರಕ್ಕೆ ಕಟ್ಟಿದ್ದ ಕಟ್ಟೆಮ್ಯಾಕೆ ಕುಂತು ಊರ್ನ ಹೈಕಳು ಒಬ್ಬರಿಗೊಬ್ಬರು ಒಗಟು ಒಡಿಯೊ ಆಟ ಆಡ್ತಿದ್ದ ಆಟ ಕಂಡು, ಅದ್ನೆ ಕೇಳ್ತ ನಿಂತ: “ಪಂಚ ಮೊಕದ ಕುದುರೆ ಪಾರ ತಿರುಗ್ತದೆ-ಅದೇನು ಯೋಳಿ?” ಅಂತು ಒಂದು ಹೈದ. ಉಳಿಕೆ ಹೈಕ ಮಕ್ಕಳೆಲ್ಲ ಯೋಚ್ನೆ ಮಾಡ್ತ ಕುಂತುಗಂಡೊ. ಯಾರೂ ಯೋಳೋಕ್ಕಾಗನಿಲ್ಲ. “ಅಯ್ಯೊ, ಪೆದ್ದುಗಳೇ ಇಸ್ಟೂ ವೋಳಿನಿಲ್ವ?- ಮಜ್ಜಿಗೆ ಕಡಿಯೋ ಮಂತು” ಅಂತು ಹೈದ. “ಕತ್ತಲೆ ಮನೇಲೆ ಕರಿಯಪ್ಪ ಗುಟರಾಕ್ತಾನೆ?” ಈ ಪ್ರಸ್ನೆ ಕೇಳಿದ್ದು ಕಟ್ಟೊ ಲಂಗದ ಒಂದು ಎಣ್ಣು. ಆ ಕ್ಸಣ ಏಡು ಹೈಕಳು- “ರಾಗಿಕಲ್ಲು, ರಾಗಿಕಲ್ಲು...” ಅಂತ ಕೂಗ್ದೊ. “ಇಟ್ಟು ಆಯಿತ್ಲೆ ಜುಟ್ಟುಕುಣಿಸ್ತು- ಈ ಒಗಟು ಒಡೀರಿ?” –ಕೇಳ್ತು ಎಣ್ಣು. “ಕಸಬರಲು, ಕಸಬರಲು” – ಒಟ್ಟಿಗೇ ಕೂಗ್ದೊ ಹೈಕಳು. “ಎಲ್ಲಾನೂ ಯೋಳಿಕ್ವಟ್ಟಮ್ಯಾಲೆ ಯೋಳಕ್ಕೆ ನೀವೇ ಬಲುಸೂರರು...” ಅಣುಕ ಆಡ್ದು ಹೆಣ್ಣು. ಇನ್ನೊಂದು ಹೈದ ಕೇಳ್ತು: “ಊತ್ತ ವೊಳದಲ್ಲಿ ತೆಕ್ಕೆ ಮೊಡಿಸಿ ಬಿದ್ದದೆ, ಅದೇನು?” “ಹಾವು”- ಅಂತು ಒಂದು ಹೈದ. “ಅಲ್ಲ-ಉಳೋ ಹಗ್ಗ”- ಅಂದ ಲಕ್ಕ. “ಸುಮ್ಮಕಿರದೆ ನಮ್ಮಾಟದಲ್ಲಿ ನೀ ಯಾಕೊ ತಲೆ ಆಕೀಯೆ?” ಸಿಟ್ಟು ಮಾಡಿದೊ ಹೈಕಳು.