ಪುಟ:Vyshakha.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

19

ರಟ್ಟೆ ಇಡುದೆಳ್ದು, ದಡಾರ್ನೆ ಕಡ ಮುಚ್ಚಿ, ತಾಪಾಳು ಝಾಡಿಸಿದ್ಲು... ವಸಿ ದೂರ ವೋಗೂದರೋಳ್ಗೆ ಆ ಗೋಣಿ ತಾಟ್ನ ವಳುಗೆ ಏನಿರಬೈದು ಅನ್ನೊದು ಲಕ್ಕಂಗೆ ತಿಳಿದೋಗಿತ್ತು. ಅದರ ನಾತವೆ ಸಾರ್ತಾ ಇತ್ತು ಎಲ್ಲಾ ಕತೆನೂವೆ!... ತನ್ನಯ್ಯನೂ ಕುಡಿದು ಬತ್ತಾ ಇರನಿಲ್ವ?... ತನಗೆ ಅದರ ವಾಸಣ ತೀರ ಹೇಸಿಗೆ... “ಲಕ್ಕ...ಲೋ ಲಕ್ಕ...ನಿಂತುಗೊಳ್ಲಾ ಅಪ್ಪಯ್ಯಾ...” ಹಿಂದ್ನಿಂದ ಕೂಗ್ತ ಓಡಿಬಂದೋರು ಯಾರೂಂತ ನ್ವಾಡಿದ್ರೆ-ಬೈಲಿಗ ರಂಗ! “ಸದ್ಯ ಆ ಮಾರಿ ಕಯ್ಯಿಂದ ತೆಪ್ಪುಸಿಬಂದೆ...”ದುಸುದುಸು ಏದ್ತ ವದುರ್ದ. “ಅದ್ಯಾವ ಮಾಟದಲ್ಲಿ ತೆಪ್ಪುಸ್ದೆ?” -ಲಕ್ಕ ಕೇಳಿದಾಗ, “ಏಡು ನಿಮಿಸ ಅವಳು ಯೋಳಿದ್ದ ಕೇಳ್ಕಂಡು ವಕ್ಕಡೆ ಕುಕ್ಕುರುಸಿದ್ದೋನು, ಅವಳು ಅಡಿಗೆ ಕ್ವಾಣೆಗೆ ಹ್ವಾದ್ದೆ ಸಮ, ಮುಂದಿನ ಬಾಗಿಲ ತಾಪಾಳ ತೆಗೆದು ವಾಟ ವೊಡದುದ್ದೇ ವೊಡದುದ್ದು!...” ರಂಗ ಜೋರು ಜೋರ್ನಿಂದ ನಕ್ಕ. ಅಂಗೆ ನಗಾಡ್ವಾಗ ಅವ್ನ ಹ್ವಟ್ಟೆ ಮುಂಚೋರಿ ದೋಣೂವೆ ಎದ್ದು ಬಿದ್ದು ಕುಣುದಾಡ್ತಿತ್ತು. ಅದ ಕಂಡು ಲಕ್ಕನೂವೆ ತಡಕೋನಾರದೆ ಬಿದ್ದು ಬಿದ್ದು ನಗಾಡ್ದ. ನಗಾಡ್ತ ನಗಾಡ್ತಾನೆ ಬೈಲಿಗೆ ರಂಗ ಲಕ್ಕನ ಸಂಸಯಾವ ನಿವಾರ್ಸಿದ್ದ. “ಈ ಬಾಟ್ಲಿಗಳು ಜಪ್ಪಯ್ನ ಮಟದ ಸಿವಪಾದಪ್ಪಾರಿಗಲ್ಲ ಕನೊ, ಲಕ್ಕ...” “ಮಂತೆ?” “ಅವರೆಸರ್ನಲ್ಲಿ ನಂಜೇಗೌಡ್ರು ನಡುಸ್ತಿರೋ ಕರಾಮತ್ತು ಇದು. ಪಾಪ, ಈ ಪರಿಪಾಟ್ಲ ಒಂದೂ ತಿಳೀದ ಆ ಅಯ್ಯನೋರ್ಗೆ ಸುಮ್ಮಸುಮ್ಕೆ ಅಪಾದ, ಕೆಟ್ಟೆಸರು...” ಕುಡುದ ಗ್ಯಾನದಲ್ಲಿ ಈಟೆಲ್ಲ ಇವರಿಸಿ, ಬೈಲಗ ರಂಗ ಮಾರಿ ಗುಡಿದಿಕ್ಕೆ ವೋಳ್ಳಿದ. ಅಂಗೆ ವೊಳ್ವಾಗ ಲಾಟೀನ ಈ ಕಯ್ಯಿಂದ ಈ ಕಯ್ಯಿಗೆ ಬದ್ಲಾಯಿಸ್ದ. ಆಗ ಅವ್ನು ಕಂಕುಳಲ್ಲಿ ಇರುಕಿಸಿದ್ದ ಬಾಟ್ಲಿಗಳ ಇನ್ನೊಂದು ಹೊದೆ ಲಕ್ಕನ ಕಣ್ಣಿಗೂ ಬಿತ್ತು... “ಈ ನಮ್ಮ ಊರಾಗೆ ಯಾರ್ದೋ ಹೆಸರು, ಇನ್ಯಾರ್ದೋ ಬೊಸರು”- ಇಸ್ಮಯಪಡ್ತ, ಆ ಮಾಲ ಗುಟ್ಟಾಗಿ ಕ್ವಂಡೋಗಿ ಗೌಡ್ರಿಗೆ ತಲುಪಿಸ್ದ ಲಕ್ಕ...ಮಠದ ವಳುಗಡೀಕೆ ಎಲ್ಲೋ ಸಿವಪಾದಪ್ಪನೋರು ತಮ್ಮೋಟಿಗೆ ತಾವು ಯಾವ್ದೋ ಸರಣರ ಪದವ ಅಂದುಕತ್ತಿದ್ದರು...ಗೌಡ್ರಿಗೆ ಕುಸಿ ಆಯ್ತು. ಮೊಗ