ಪುಟ:Vyshakha.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

31


ಮ್ಯಾಲೆ ಕೆಲವ್ರು-ಇಂಗೆ ಕುಂತು ನಿಂತು ಪರಸಂಗ ವೊಡೀತಿದ್ರು ಜನ... ಇದ ಕಂಡೇ ಕೇಸವಯ್ಯ ತಮಾಸೆ ಮಾಡ್ತಿದ್ದದ್ದು: ‘ನಮ್ಮ ದರುಮನಳ್ಳೀಲಿ ಸ್ವಾಮಾರದ ಜಿನ ಸೂರ್ಯಪ್ಪ ಮಯ್ಯಿ ಮುರದೇಳೋದು ತಳಾರ ಅಂದರೆ ತಳಾರ!’ ಲಕ್ಕ ತೆಂಕಲಾಗಿ ತಿರುಗಿನಾಗ, ವಕ್ಕಲುಗೇರಿ, ಕುಂಬಾರಗೇರಿ, ಪರಿವಾರಗೇರಿ, ಕುರುಬಗೇರಿ, ಇಂತಿಂತಾ ಕೇರಿಗಳೆಲ್ಲ ಇಂದುಕಾಗಿ, ಜೈನಿಗ ಜಿನ್ನಯ್ಯ ತನ್ನಟ್ಟಿ ಜಗುಲೀಲಿ ಕುಂತು ಚೌರಾ ಮಾಡಿಸಿಕೂತ್ತ ಇದ್ದದ್ದು ಕಣ್ಣಿಗೆ ಬಿತ್ತು. ಅವ್ನ ಎಡತಿ ಒಗೆಯೋ ಬಟ್ಯ-ಒಂದು, ಏಡು, ಮೂರೂಂತ ತಂದು ತಂದು ರಾಸಿ ಆಕ್ತಾ ಇದ್ರೆ, ಹಿಂದ್ನ ಲೆಕ್ಕ ಚುಕ್ತಾ ಮಾಡುದ್ರೆ ಮಾತ್ರ ವೊಸದಾಗಿ ಒಗಿಯೋ ಅರಿವೆ ಎಂತಿಗಂಡೋಯ್ತೀನಿ, ಅಂದ ಮಡಿವಾಳ ಸೆಟ್ಟಿ. ಕಳೆದ ವಾರವೆ ಆ ಬಾಕೀನೆಲ್ಲ ತೀರುಸಿದ್ನಲ್ಲೊ ಮಡಿವಾಳ ಸೆಟ್ಟಿ – ಅಂತ ಜಿನ್ನಯ್ನ ಎಡತಿ... ಈ ತರ ಅವರಿಬ್ಬರ್ಗೂ ಲಟಾಪಟಿ ನಡೀತಿತ್ತು. ಒಂದು ಮೂಲ್ಗೆ, ಒಂದು ಎತ್ತ ಕೆಡೀಕೆಂಡು ಲಾಳ ವೋಡೀತಿದ್ರು... ಇದ್ನೆಲ್ಲ ನ್ವಾಡ್ತ ನ್ವಾಡ್ತ, ಲಕ್ಕ ಬುಂಡಮ್ಮನ ಹಟ್ಟಿ ತಾವಿಕೆ ಬಂದಿದ್ದ. ಆಗ್ಲೆ ಊರ ಹೈಕಳು ಕಾಡಿಗೆ ದನ ಅಟ್ಟಗಂಡೋಗಿದ್ರು, ಒಂದು ಹೈದ ಮಾತ್ರ ಏಳು ಮದ್ದಿನ್ನ ಮಾಡ್ಕಂಡು, ತನ್ನ ದನ ಅಟ್ಟಿಗಂಡೋಯ್ತಿದ್ದೋನು, ತೀರ ಅವಸರಾಗಿ, ತನ್ನ ಚಡ್ಡಿ ಗುಂಡಿ ಬಿಚ್ಚಿ, ಅಟ್ಟಿ ಗ್ವಾಡೇನೆ ನೆನೆಸ್ತಾ ಇತ್ತು. ಬುಂಡಮ್ಮ ಯಾಕೋ ವೊರೀಕೆ ಬಂದೋಳು ಕ್ವಾಪ ಅತ್ತಿ, “ಏನ್ಲ, ಈ ನಮ್ಮಟ್ಟಿ ಕಟ್ಟಿದೋನು ನಿಮ್ಮಪ್ನೊ? ನಿಮ್ಮಜ್ನೊ?- ನಿಸೂರಾಗಿ ನಿನ್ನ ಗ್ವಾಡ್ಕೇ ನಿನ್ನ ಚಿರುಕಿ ತಿರುಗುಸ್ತ ನಿಂತುಬುಟ್ಯಲ್ಲ?”= ಕೈಕೋಲು ಬೀಸ್ತಾ ಅಂದ್ಲು. ಹೈದ ದಿಗಲುಬಿದ್ದು ಉಚ್ಚೆ ಉಯ್ಯೋದ ಅರ್ದಕೇ ತಡುದು, ಕೆಟ್ನೋ ಬದುಕಿದ್ನೋಂತ ಗಂಜಳ ಸುರುಸ್ತಾ ವೋಗೋ ಎತ್ತಿನಂಗೆ ಉದ್ದಕೂ ಉಚ್ಚೆ ಸುರಿಸಿಕೊತ್ತ ದನಗಳ ಇಂದಿಂದೆ ಓಡೋಯ್ತು. ಲಕ್ಕ ಆ ಹೈದ್ನ ಅವಸ್ತೆ ನೋಡಿ ನಕ್ಕ. “ಅದ್ಯಾಕ್ಲ ಗಂಡೆ, ನಗಾಡ್ತ ನಿಂತೆ?... ಆ ಹೈದ್ನ ವಯಸಾಗಿದ್ದಾಗ ಬೆದುರಿಸಿದ್ರೆ, ನೀನೂವೆ ಚಡ್ಡಿ ವಳುಗೇಯ ಇಂಗೇ ಸೊರ ಬುಟ್ಟುಕತ್ತಿದ್ದೆ... ನೀ ನಗಾಡುದು ಅಂಗಿರ್ಲಿ, ವಸಿ ಬಾ ವಳೀಕೆ.” ಬುಂಡಮ್ಮ ಕರೆದ್ಲು. ಲಕ್ಕ ನಗ ತಡುದು ಮುದುಕಿಯ ಗಮ್ನೆ ಇಂಬಾಲಿಸ್ದ. ವಳೀಕೋಯಿತ್ಲೆ. “ಲಕ್ಕ, ನಮ್ಮೆಮ್ಮೆ ಕರೀಗೆ ಅಕ್ರ ಆಗದೆ ಕನ್ಲ. ವಸಿ ತಕ್ಕೊಟ್ಟೀಯ?”