ಪುಟ:Vyshakha.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36




ಬಿದ್ದಿರ್ತಾನೆ ಇದ್ದ. ವೊತ್ತಾರೆಯೊ ಸಂದೆ ದನೀಗೊ ಕೆರೆ ಕಡೀಕೆ ವೋಗಿ ಬಂದರೆ, ಐಗಂಟಿ ಪಟ್ನ ವೊಕ್ಕಿ ಬದೋನಂಗೆ ಆಡೋದು!...

ಭಂಗಿ ಸೊಪ್ಪ ಅವ್ನು ಇತ್ತಲಲ್ಲೆ ಬೆಳುಕಂಡಿದ್ದ. ಒಂದು ಸರ್ತಿ ಆ ಭಂಗಿ ಗಿಡಗಳ ಬಂಡಮ್ಮಾರು ಕಿತ್ತಾಕಕ್ಕೋಗಿ ಅವಗೂ ಮಗಂಗೂ ಲಟಾಪಟ್ಯಾಗಿ, ಊರ್ನೋರೆಲ್ಲ ಸೇರಿ-

“ಓಗ್ಲಿ ಬುಡು ಬುಂಡಜ್ಜಿ, ಕಾಲಾದಿಂದ್ಲೂವೆ ಈ ಹೈದ ಗಜಗಂಟಾಗೆ ಬೆಳುಕಂಡದೆ. ಈಗಿವ್ನ ನೆಟ್ಟಗೆ ಮಾಡಕ್ಕೆ ಆ ಅರಿ ಅರ ಬೊಮ್ಮನ ಕಯ್ಲೂ ದುಸ್ತಾರ. ಮುಕ್ಕನ್ನ ಅದರ ಪಾಡಿಗೆ ಬುಟ್ಟು ನಿನ್ನ ಬದುಕು ನೀ ನೋಡಿಕೊತ್ತಾ ವೋಗು...” ಸಮಜಾಯ್ಸಿ ಯೇಳಿದ್ರು...

ಊರ್ನೋರ ಸಪೋಲ್ಟು ಸಿಕ್ಕಿದ ಮ್ಯಾಲಂತೂ, ಅವ್ನು ಇನ್ನೂ ಕೆಟ್ಟೋದ. ಆ ಸೊಸೆಗೂ ನೆಲ ಗುದ್ದಿದರೆ ನೀರು ಚಿಮ್ಮೊ ವಯಸ. ಅಟೀಲಾಗ್ಲಿ, ವೊರಗಾಗ್ಲಿ, ಆ ಎಣ್ಣು ಯಾರಾರು ಗಂಡಿಸಿನ ತಾವು ಮಾತಾಡದು ವಚ್ಚೋರಿಕೆ ಇರ್ಲಿ; ಅವಯ್ಯನ ಮೊಖ ನ್ವಾಡಕ್ಕುಂಟ?- ಅತ್ತೆ ಅವಳ ಸುತ್ತ ಭದ್ರಾದ ಇನ್ನೊಂದು ಚಿತ್ರಮೂಲನ ಕ್ವಾಟೇನೆ ಕಟ್ಟಿ, ಆ ಕ್ವಾಟೆ ಬಾಗಿಲ್ಗೆ ಗಟ್ಯಾದ ಬೀಗ ಮುದ್ರೆ ಜಡುದು ಜ್ವಾಪಾನ ಮಾಡಿದ್ಲು... ಕಟ್ಟು ಅಪ್ಪಾರ ಬಿಗಿಯಾದ್ರೆ ವಚ್ಚೋರಿ ಕಿತ್ತೋಗಲೇಬೆಕಲ್ಲ?... ಸೊಸೆ ಮೊದಮೊದ್ಲು, ಎಂಟು ಜಿನ ಈ ಊರಿನಲ್ಲಿದ್ರೆ, ಇನ್ನೆಂಟು ಜಿನಕೆ ತನ್ನ ತೌರಿಗೆ ಅರೋಳು- ಇಲ್ಲೇ ಇದ್ದರೂವೆ ಆಚೆ ಕಡ್ಡಿ ತಗುದು ಈಚೆ ಕಡೀಕೆ ಆಕೊ ಗೋಜಿಗೇ ವೋದೋಳಲ್ಲ!... ಸದೋಂಬತ್ತು ಕಾಲ ಸಿಸ್ತು ಸುಂಗಾರ ಮಾಡ್ಕಂಡು ಗಂಡಯ್ಯನ ತಾವ ಕುಂತಿರತೀನೀಂತ ನೆಪ ತಕ್ಕೊಂಡು, ಅಟ್ಟಿ ಮುಂದಿನ ಹಾದೀಲಿ ವೋಗಿ ಬರೊ ಗಂಡಸರ ಸುತ್ತ ವಾರೆಗಣ್ಣು ತೇಲಿಸೋಳು!

ಅತ್ತೆಗೆ ಇವ್ಳ ಮಿಂಡಾಟ ಸರಿಬರದೇಯ, “ಜಗುಲೀಲೆ ಕುಂತು ಅಲ್ಲೇನು ಪಸದೀಯೆ?... ಎದ್ದು ಬಾಮ್ಮಿ ವಳೀಕೆ” ಅಂದರೆ, ಸಟ್ನೆ

“ತೆಗಿ, ತೆಗಿ. ಈ ಅಟ್ಟೀಲಿ ಅದ್ಯಾವ ಕೇಮೆ ಇದ್ದು?... ಇಲ್ಲೇನು ಊಟದ ಸುಕವಾ? ನ್ವಾಟದ ಸುಖವಾ? ಇಲ್ಲ ವೋಗ್ಲೀಂದ್ರೆ, ಆಸಿಗೆ ಸುಕವಾ? ಎಮ್ಮೆ ತಿಕ ತೊಳುದು, ಗಂಜಳ ಸೀಟಿ, ತ್ವಪ್ಪೆ ಬಾಚ್ತಾ ಬಿದ್ದಿರಕ್ಕಾ ಈ ಅಟ್ಟೀಗೆ ನಾ ಲಗ್ಣ ಆದದ್ದು?” – ಆ ಗರತಿ ಮಾತಿನ ಮುಂದೆ ಬುಂಡಮ್ಮಾರಂತೂ ತುಟಿ ಪಿಟಕ್ಕನ್ದೆ ಬಾಯಿ ಮುಚ್ಚುಕಾಬೇಕಾಯ್ತು!

ಮಯ್ಯಿ ಮ್ಯಾಲೆ ಎದ್ಹುಣ್ಣು ಯಾವತ್ತಿದ್ರೂವೆ ವಡೀನೇ ಬೇಕಲ್ವ?... ಒಂದು