ಪುಟ:Vyshakha.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೆಟ್ಟಿ, ಒಂದು ಗಂಜು... ಇವಿಟ್ನೂ ನಾನು ಕ್ವಟ್ಟಿದ್ದೆ ಬುಂಡಮ್ಮಾರೆ. ಆದ್ರೆ ಹಡಸಿಕಂಡಮ್ಯಾಲೆ ಯೋಳಿಕೋಬ್ಯಾಡದು ಆಂತ ಆ ಚಮಾಚಾರ್ವ ನಮ್ಮೆಜ್ಮಾನರಿಂದ ಮುಚ್ಚಾಕ್ದೆ!... ಇನ್ನೇನಮಾಡಾದು. ಇನ್ನು ಮ್ಯಾಕೆ ಅಂತೋನು ಯಾರಾರು ಜಾಗ ಕ್ಯಾಳಿಕಂಬಂದ್ರೆ, ವೋಗ್ಲ ಅಪ್ಪಯ್ಯ, ನೀ ಬಂದ ಹಾದಿಗೆ ಸುಂಕ ಇಲ್ಲ ಅಂದು ಬಿಡ್ತೀನಿ” – ಚಕ್ಕಚಕ್ನೆ ಮಾತಾಡಿ ಮುಗಿಸಿದ್ಲು ಸಾಕವ್ವ... ಸುದ್ದಿ ಕೇಳಿ ಬುಂಡಮ್ಮಾರ ಮೊಖದಾಗೆ, ತಟಕ್ನೆ ದೀವಿಗೆ ಕೆಡುಸದಂಗೆ ಕಪ್ಪು ಮೆತ್ತಿಗತ್ತು... ಇಂಗಾದ್ದು ಒಂದೇ ಗಳಿಗೆ, ಆಟೇಯ. ಆ ಗಳಿಗೆ ಕಳೀತು. ಪುನಾ ಅವರ ಮೊಖದಾಗೆ ನಗಸಾರ ಇಟ್ಟಾಡ್ತು... ಊ- ಅಂತ ತುಟಿ ಬಿರುವಿ, ತಲೆಕೊಸರಿ, ಎಮ್ಮೆ ಕೆಚ್ಚಲ್ಗೆ ನೀರೆರುಚಿ, ಹಾಲು ಕರೆಯಕ್ಕೆ ಕುಂತರು... ಆಚೆ ಅಟ್ಟ ತಿಮ್ಮರಾಯಿ ಎಡತಿ ಸಾಕಿ ಆಟೋತ್ತು ಈಟೋತ್ತು ನಿಂತು, ಆ ಸುದ್ದಿ ಈ ಸುದ್ದಿ ಎತ್ತ, ಕೊನೇಲಿ - “ನಿಮ್ಮ ಸೊಸೆಯೆಲ್ಲಿ ಬುಂಡವ್ವ, ಕಾಣುಸ್ತಾನೆ ಇಲ್ಲ?” ಅಂದುದಕೆ, ಹಾಲು ಕರೀತಾ ಕರೀತಾನೆ ಬುಂಡಮ್ಮಾರು “ಇನ್ನೆನ- ಆ ಕಂಚುಗಾರ ಸಾಬಿ ಕುಟ್ಟೆ ವೋಡೋಗಿರಬೇಕು, ಆ ಹಗಲು ಹಾದರಗಿತ್ತಿ” - ನಿಸೂರಾಗಿ ಯೇಳಿಬುಟ್ರ, ಆಚೆ ಅಟ್ಟಿ ತಿಮ್ಮರಾಯಿ ಎಡತಿ ಸಾಕವ್ವ,

“ಇದೂ ಉಂಟ? ಕಲಿಗಾಲ!... ನಿಮ್ಮಟ್ಟೀಲಿ ಅವಳಿಗೇನ ಕೊರತೆ ಮಾಡಿದ್ರಿ?...” ಅಂದುಕೊತ್ತ, ಊರೋಳ್ಗೆ ಈ ಬಿಸಿಬಿಸಿ ಸುದ್ಯ ಟಾಂಟಾಮು ಮಾಡಕ್ಕೆ ತುದಿಗಾಲ್ನಲ್ಲೆ ಬಿರಬಿರ್ನೆ ವೊಂಟೋದ್ಲು...

ಹಾಲ ಕಾಯಿಸಿಟ್ಟು ಬುಟ್ಟು ಬಂದು ನಡುದ ಸಮಸ್ತಿಚಾರಾನು ನನ್ನ ಕುಟ್ಟೆ ಯೋಳಿ, ಬುಂಡಮ್ಮಾರು-

“ಲೌಡಿಮೋದರೊಯ್ತಾಳೆ ಬುಡೋ, ಲಕ್ಕ. ಅವ್ಳು ವೋದರೆ ನಮ್ಮಟ್ಟಿ ಇಟ್ಟಿನ ಮುದ್ಯೇ ಉಳೀತವೆ...” ಅನ್ತಾ ಅನ್ತಾ ಸಮಾದಾ ತಂದುಕ್ವಂಡ್ರು.

  • * * *

ಲಕ್ಕ ಇದೇ ಗುಂಗ್ನಲ್ಲಿ ವೋಯ್ತಾ ಇದ್ದ... ಚಾಪೆ ಸುರುಳಿ ಬಿಚ್ಚಿದಂಗೆ ಅವ್ನ ವಳುಗ್ನಿಂದ ನೆಪ್ಪು ಬಿಚ್ಚುಗತ್ತಾ ವೋಯ್ತ:

ಒಂದು ವೊತ್ತಾರೆ, ಕಸ ಆಕಿ, ಹಾಲ ಕರೆದಾದಮ್ಯಾಲೆ ಬುಂಡಮ್ಮಾರ ಅಯಿದು ಎಮ್ಮೆನೂವೆ ಮೇಯಕ್ಕೆ ಕಾಡಿಗೆ ಅಟ್ಟಿಗಂಡೋಗಿದ್ದ. ಉಳಿಕೆ ಹೈಕಳೂ ಬ್ಯಾರೆ ಬ್ಯಾರೆ ಎಮ್ಮೆ ದನಗಳ ಅಟ್ಟಿಗಂಬಂದಿದ್ದೊ. ಆಗ್ಲೇ ನಂಗೆ ಹೇಲಕ್ಕೆ ಅವಸರಾಗಬೇಕ?... ಉಳಿಕೆ ಹೈದಳಿಗೆ, “ವಸಿ ನನ್ನೆಮ್ಮೆ ನ್ವಾಡಕತ್ತಿರಿ” ಯೋಳಿ, ಜೊತ್ಗೆ ಒಂದು ಎಣ್ಣೂವೆ ಇದ್ದದ್ರಿಂದ ನಾಚಿಕ್ಯಾಗಿ ಕಾಡ್ನಲ್ಲಿ ರವೋಟು ದೂರವೋಗಿ