ಪುಟ:Vyshakha.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

39

ಮೆಳೆ ಮರೇಲಿ ಕುಂತ...ಆ ವಯಸ್ನಲ್ಲಿ ಬಿಸಿಬಿಸ್ಯಾಗಿ ಸ್ಯಾವಿಗೆ ವತ್ತಿದಂಗೆ ಇಂದಿನಿಂದ ತೊಡೆಗಳ ಸಂದೀಲಿ ಈಚ್ಗೆ ಕಡೆಯೋವ್ನ ಬಗ್ಗೆ ಬಗ್ಗೆ ನ್ವಾಡ್ತಾ ಇರಕ್ಕೆ ಕುಸಿಯೋ ಕುಸಿ:

ನ್ವಾಡ್ತಾನೆ ಇದ್ದ. ಒಂದು ದಪ್ಪನೆ ಕೊಂತ ಬಿತ್ತು. ಅದರ ಇಂದೇಯ ಒಂದು ಉದ್ದಾನೆ ಎರೆ ಉಳ- ಇನ್ನೂ ಜೀವ ಇರಾದು!- ತಿಕದಿಂದ ಅರ್ಧ ಈಚೆಗೆ ಬಂದು, ಹಾವಿನಂಗೆ ಆಚೆ ತೊಡೆ ಕಡಿಂದ ಈಚೆ ತೋಡೇಗೆ ಬಡಿದಾಡಿ ನುಲಿದಾಡ್ತ ಇತ್ತು... ಲಕ್ಕ ಹಾವು ಅಂತಾನೆ ಬ್ರಮುಸಿ- “ಹಾವು!...ಹಾವು!” ಅಂಚ ಗಟ್ಯಾಗಿ ಅರಚಿ, ನಿಂತ ಜಾಗ್ದಲ್ಲೇ ತಕಪಕ ಕುಣಿದಾಡ್ತಿದ್ದ.

ಆಟಗುಳಿ ಹೈಕಳು ಎಮ್ಮೆ ದನಗಳ ಮೇಯಕ್ಕೆ ಬುಟ್ಟು ಯಾವುದೋ ಆಟ ಆಡ್ತಿದ್ರುವು ಲಕ್ಕ ಹಾವೂಂತ ಕಿರುಚಿದ ಕೂಡ್ಲೆ ಆ ಕೂಗು ಕ್ಯಾಳಿ ಒಂದೇ ಉಸುರ್ಗೆ ವಾಟ ವೊಡದು ಅವ್ನು ನಿಂತಿದ್ದ ತಾವಿಗೆ ಬಂದೋ-ನ್ವಾಡಿದ್ರೆ- ಚಡ್ಡ ಬಿಚ್ಚಾಕಿ, ಒಂದು ಕಯ್ಲಿ ಇಡುದು, ಬೆತ್ತಾನೆ ಮರಿ ಕುಣ್ತ ಕುಣಿತಾ ಅವ್ನೆ!... ಇನ್ನೂ ಸಮೀಪ ಬಂದು ನ್ವಾಡಿದಾಗ ವಸಿ ಹೈಕಳು ಹಾವೊಂತಾನೆ ಎದರಿ ದೂರದೂರ್ಕೆ ವೋದೊ. ಅದರಾಗೆ ಆ ಎಣ್ಣು, ಗಂಗಿಯೇ ಧೆರ್ಯ ಮಾಡಿದೋಳು... ಅವ್ಳೆ ನಮ್ಮೆಲ್ಲಾರಿಗಿಂತ ದೊಡ್ಡೋಳು. ಆಗ್ಲೆ ಎಣ್ಣಾಗಕ್ಕೆ ಬತ್ತಾ ಇದ್ಲು... ಏಡು ವಣುಗಿದ ಕಡ್ಡಿಗಳ ಮೆಳಿಂದ ಮುರ್ದು, ಏಡು ಕಡ್ಡಿಗೂ ಎರೆ ಹುಳುವ ಇಕ್ಕಳಿಕ್ಕೆ ಸಿಕ್ಕಸ್ದಂಗೆ ಸಿಕ್ಕುಸಿ, ಈಚೆಗೆ ಎಳದಾಕಿ- “ಇದಕ್ಯಾಕೊ ಲಕ್ಕ ಈ ಪಾಟಿ ಎದರಿ ಎಪ್ಪಳಿಸೋದೆ? -ನ್ವಾಡು, ಇದು ಹಾವಲ್ಲ... ಎರೆಹುಳ!”... ಕೆದಕಿ ಕೆದಕಿ, ತೋರಿದ್ಲು...

ಅಲ್ಲೀಗಂಟ ಇಲ್ಲಿದ್ದ ನಾಚಿಕೆ, ಎರೆಹುಳ ಈಚ್ಗೆ ಕಡೀತ್ಲೆ, ತನ್ನ ಮುತ್ತುಗಂಡಿತ್ತು. ಆತ್ರ ಎಲ್ಲೂ ನೀರು ಸಿಕ್ಕದೆ, ತಮ್ಮೂರ ದೊಡ್ಡಕೆರೆ ತಾವಿಕೆ ಓಡೋದ. ಸರಸರ ತಿಕ ತೊಳದು, ಚಡ್ಡಿ ಸಿಕ್ಕುಸಿ, ಇಂದ್ಕೆ ಓಡೋಗಿ ನ್ವಾಡಿದ್ರೆ- ತನ್ನೆಮ್ಮೆಗಳೇ ಕಾಣುಸ್ತಿಲ್ಲ!... ಬಾಕಿಯೋರ ಎಮ್ಮೆ ದನಗೋಳೆಲ್ಲ ವೋಟೋಟು ದೂರಕೆ ಮೇಯ್ತಾ ಇದ್ದೊ!... ಜೀವ ಹಚಾಡು ಪಚಾಡಾಗಿ ಮೆಳೆಗಳ ಸಂದುಸಂದೀಲೂ ತಡಕಾಡ್ದ. ತನ್ನ ಎಮ್ಮೆಗಳು ಮಾತ್ರ ಯಾತಾವೂ ಕಾಣ್ನಿಲ್ಲ. ತನ್ನ ಜೊತೆಗಾರ ಹೈಕಳೂವೆ, ಪಾಪ- ಅವೂವೆ ಒಂದು ಮೆಳೆ ಸಂದನೂ ಬುಡದೆ ಸೋಸಿ ಸೋಸಿ ಬೆಪ್ಪಾದೊ. ಯಾತಾವೂ ಎಮ್ಮೆಗಳ ಸುಳುವೇ ಇಲ್ಲ!- ಸಂದೆ ದನ ಅಟ್ಟಿ ಊರಿಗೆ ಇಂತಿರುಗೊವರಿಗೂ ಉಡುಕ್ದೊ. ಸಿಕ್ಕನೇ ಇಲ್ಲ. ಹ್ಯಾಪಮ್ವಾರೆ ಅಕ್ಕಂಡು ವೊತ್ತೊ ಗಿನ್ವಾಡ್ಲಿ? ಅನ್ನುಸ್ತು. ದುಕ್ಕ ವಳುಗ್ನಿಂದ ವತ್ತೊತ್ತಿ ಏಡು ಕಣ್ಣನೂವೆ ತುಂಬಿಕತ್ತು. ಊರು ಮುಟ್ಟತ್ಲೂವೆ ಮೊದ್ಲು ಸಿಕ್ಕೋದೆ ವೊಲಗೇರಿ. ಲಕ್ಕ ಮೆತ್ತಗೆ