ಪುಟ:Vyshakha.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40

ತಮ್ಮ ಗುಡ್ಲಿಗೋಗಿ, ಕಂಬಳೀಯ ಮೊಖದ ತುಂಬ ಎಳುದು ಬಿದ್ಕಂಡ. ಅವನವ್ವ ಅಡಿಗೆಕ್ವಾಣೇಲಿ ಎಸೆರೆತ್ತುತ ಇದ್ದೋಳು,

“ಇದ್ಯಾಕ್ಲ, ಲಕ್ಕ, ಜೊರಗಿರ ಬಂದಿದ್ದಾತೇನ್ಲ?”... ಕೇಳಿದ್ದು.

ಲಕ್ಕನಿಂದ ಉತ್ತರವೇ ಇಲ್ಲ!... ಕಂಬಳಿ ಉಡುಕಂಡು ಕಪ್ಪರ ಜೋಳಿನಂಗೆ ಬಿದ್ಕಂಡು ಅವ್ವ ಅದೇಟೇ ಸಾಸ ಮಾಡಿದ್ರೂವೆ ಆ ಕಂಬಳಿ ಕಿತ್ತು ಮಯ್ಯಿ ಮುಟ್ಟಿ ನ್ವಾಡಕ್ಕೆ ಅನುವು ಕ್ವಡ್ತಾನೆ ಇರ್ಲಿಲ್ಲ...

ತಾವಿಬ್ರೂ ಈ ಪರಿ ಜಗ್ಗಾಡ್ತ ಇರೋನೂವೆ, ನಮ್ಮ ಗುಡ್ಲ ವೋರಗ್ನಿಂದ-

“ಕಲ್ಯಾಣಿ... ಕಲ್ಯಾಣಿ... ನಿನ್ಮಗ ಲಕ್ಕ ಬಂದಿದ್ದಾನೇನೆ?” ಅಂದದ್ದು ಕ್ಯಾಳಿ ನನ್ನ ತೊಳ್ಳೆ ನಡುಗೋಯ್ತು. ಅವ್ವ ಕಂಬಳಿ ಕೀಳಾದು ನಿಲ್ಲುಸಿ,

“ಯಾರು?” ಅಂದು ಮುಂಚೊರಿಕೋಗಿ,

“ನೀವಾ- ಬುಂಡಮ್ಮಾರೆ?... ನಾ ಯಾರೋ ಅಂತಿದ್ದೆ!” ಅಂದದ್ದು ಕ್ಯಾಳಿಸ್ತು.

“ಅದಿರ್ಲಿ, ನಿನ್ಮಗ ಲಕ್ಕ ಬಂದಿದ್ದಾನೊ, ಇಲ್ವೊ?”

-ಬುಂಡಮ್ಮಾರೇಯ!... ಇನ್ನೇನಪ್ಪ ಗತಿ?

“ಬಂದವ್ನ ಕನ್ರವ್ವ. ಜೊರಾ ಬಂದಿರಾ ಅಂಗದೆ. ಕಂಬಳಿ ವೊದ್ದು ನಡುಗ್ತಾ ಮನಗವ್ನೆ.”

“ಜೊರವೂ ಇಲ್ಲ, ಚಳಿಯೂ ಇಲ್ಲ. ನನ್ನೆಮ್ಮೆಗಳ ಕಾಡ್ನಲ್ಲಿ ಕಳುದು, ಇಲ್ಲಿ ಬಂದು ಯಾಸ ಆಕ್ತಾ ಅವ್ನೆ... ಎದ್ದು ಈಚೆಗೆ ಬರ್ಲಾ-ಕಂಡಿವ್ನಂತೆ!”

ಬುಂಡಮ್ಮಾರ ಗುಡುಗು ನಮ್ಮ ನೆರಿಕೆ ಗುಡ್ಲುನೂವೆ ಅಲುಗಾಡಿಸ್ತು. ಗುಡ್ಲ ಮ್ಯಾಲೆ ಹಬ್ಬಿ ಮನಗಿದ್ದ ಸಕ್ಕರಗುಂಬಳದ ಕಾಯ್ಗಳು ನನ್ನ ತೊಳ್ಳೆವಳುಗೆಲ್ಲ ಉಳ್ಳಾಡಿದಂಗಾಯ್ತು.!... ಮೊಖ ಸುತ್ತಿದ್ದ ಕಂಬಳ್ಯ ಸರುಸಿ ಕಿಂಡಿ ಮಾಡಿ ನ್ವಾಡ್ದೆ. ಬುಂಡಮ್ಮಾರು ಗುಡ್ಲು ಬಾಗ್ಲಲ್ಲಿ ಬಕ್ಕಂಡು ನಡ ನಿಗುರ್ಸಿ ಸೊಂಟದ ಮ್ಯಾಲೆ ಬಲದಾ ಕಯ್ಯಿಟ್ಟು, ಏಡು ಕಟವಾಯ್ಲೂವೆ ಎಲಡಿಗೆ ರಸವ ಸೋರುಸ್ತ, ರುಕ್ಮಿಣವ್ವಾರ ಅಟ್ಟ ವಳುಚೋರಿ ಗ್ವಾಡೆಗೆ ನ್ಯಾತಾಕಿದ್ದ ಪಟದ ಚಾಮುಂಡೇಸ್ವರಿ ತಾಯಾಗಿ ನಿಂತಿದ್ರು... ಇನ್ನು ನನ್ನ ಬ್ಯಾಳೆ ಕಾಳು ಇವರ ಮುಂದೆ ಬೇಯಕ್ಕಿಲ್ಲ ಅನ್ನುಸ್ತು. ಜಟ್ನೆ ಕಬಳಿ ವದುರಿ, ಎದ್ದೋಗಿ, ಅವರ ಮುಂದೆ ತಲೆತಗ್ಗುಸಿ, ಕುರಿಮರ್ಯಾಗಿ ನಿಂತೆ...

ನಂಗಾಗ್ಲೆ ಗ್ವತ್ತಾಗದೆ. ನೀನು ಕಾಡ್ನಲ್ಲಿ ನನ್ನೆಮ್ಮೆ ಕಳುದು ಬಂದಿರಾ ಇಸ್ಯ. ನಿನ್ನ ಜೊತ್ಗೆ ಬಂದಿದ್ದ ಎಮ್ಮ ದನ ಕಾಯೋ ಹೈಕಳು ಎಲ್ಲಾ ನೂವೆ ಯೋಳಿ