ಪುಟ:Vyshakha.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42

ಮುದ್ದೆ ಕಟ್ಟಿ ಉಡುಸು... ಅಮ್ಯಾಕೆ ಈಚೋರಿ ದೊಡ್ಡೆಮ್ಮೆಗಳ ಕಟ್ಟಿದ್ದ ಜಾಗದಲ್ಲಿ ಒಂದು ತಬ್ಬು ಉಲ್ಲಾಕಿವ್ನಿ. ಆ ತಬ್ನಲ್ಲಿ ಒಂದೀಟೀಟು ತಗುದು ಒಂದೊಂದು ಕರೀನ ಮುಂದ್ಕೂ ಇಕ್ಕು. ವೋಟ್ರಲ್ಲಿ ನಾನು ರಾಗಿ ರೊಟ್ಟಿ ತಟ್ಟಿ ಇಡ್ತೀನಿ”...

ಆ ಪರ್ಕಾರ ಅಂಗಿ ತುದಿಂದ ಕನ್ನೀರೊತ್ತೊ, ಬೆಯ್ಸಿಟ್ಟಿದ್ದ ಉಳ್ಳೀಯ ವಳುಕಲ್ನಲ್ಲಿ ಆಡುಸಿ, ಮುದ್ದೆ ಕಟ್ಟಿ, ಅದ್ನ ಮುರು ಉಂಡೆ ಮಾಡಿ, ಮೂರು ಕರುಗಳ್ಗೂ ತಿನ್ನುಸಿ, ಅವುಗಳ ಮುಂದ್ಕೆ ಉಲ್ಲಾಕಿ ಬಂದು ನೆಟ್ಟಗಿನ್ನೂ ನೆಲಕೆ ಅಂಡ ಊರೇ ಇಲ್ಲ, ವೋಟರಲ್ಲಿ- “ಇಡೀಲ ನೀರ” ಅಂತ ಕಯ್ಯ ತ್ವಳುಸಿ, ತಕ್ಕ ಅಂತ ರೊಟ್ಟೀಯ ಕಯ್ಯಾಗಿಟ್ಟರು. ನಂಗೆ ತಿನ್ನಕ್ಕೆ ಸೆಡೀದು. ವಳುಗ್ನಿಂದ ತಿದಿ ಒತ್ತ ಬತ್ತಾ ಇತ್ತು ದುಕ್ಕ. ರೊಟಿ ಮುರೀದೆ ಸುಮ್ಮೆ ಕುಂತಿದ್ದೆ...

ಬುಂಡಮ್ಮಾರು ವಳೀಕೋಗಿ, ಅವ್ನು ಕುಡಿಯಕ್ಕೆ ಒಂದು ತೆಂಗಿನ ಕರಟದಲ್ಲಿ ನೀರು ತಂಡು ನ್ವಾಡ್ತಾಂ-ನಾನಿನ್ನೂ ಒಂದು ಚೂರು ರೊಟ್ಟೀನು ಮುರಿದೇ ಇಲ್ಲ. ಕ್ಯಾಣ ಅತ್ತಿ...

ಇದ್ಯಾಕ್ಲ ಅಪ್ಪಯ್ಯ ರೊಟ್ಟಿ ತಿನ್ನದೆ, ಬೆಪ್ಪು ನಾಡ್ನಿಂದ ಬಂದೋನಂಗೆ ಹ್ಯಾಪಹ್ಯಾಪಗೆ ಕಣ್ಣ ತೇಲಿಸೀಯೆ?... ನನ್ನೆಮ್ಮೆ ವೋದ್ರೆ ವೋದೊ, ಅದು ನನ್ನಣೆಬರಾವು. ನಾ ಕಳಕೋಬೇಕೂಂತ ಬರದಿದ್ರೆ ನೀಯೇನುತಾನೆ ಮಾಡೀಯ?” –ಗ್ವಾಡೆ ವರಗಿ ಕುಂತು ಇಂದಿನದೆಲ್ಲಾನೂ ಗೆಪ್ತಿ ಮಾಡ್ಕತ್ತ ಮಾಡ್ಕತ್ತ ವೊಂಟರು...

“ನ್ವಾಡ್ಲ ಲಕ್ಕ, ಇಂದ್ಕೆ ನನ್ನ ತಾವು ಏಳು ಎಮ್ಮೆ ಇದ್ದೂ. ಅವ್ನ ಇಂಗೇಯ ಒಂದು ಹೈದನ ಜ್ವತೆ ಮಾಡಿ ಮೇಯ್ಸಿಗಂಬಾ ಅಂತ ಕಾಡಿಗೆ ಕಳುಸಿದ್ದೆ. ಆ ಆಟಗುಳಿ ಹೈದ, ಉಳಿಕೆ ಹೈಕಳ ಜ್ವತೆ ಸೇರಿ ಗೋಲಿ, ಗಂಜೀಪು ಆಡ್ತ, ಎಮ್ಮೆಗಳ ಕಡೆ ನಿಗಾನೆ ಮಡಗ್ನಿಲ್ಲ. ಆ ಆಳುಗೇರಿ ಎಮ್ಮೆಗಳು ಮೇಯ್ತಾ ಮೇಯ್ತಾ ಹಾದಿ ತೆಪ್ಪೋಗಿ ನಟ್ಟಡವಿ ಸೇರ್ದೊ. ಅಲ್ಲಿ ಏಡು ಬೆದೆ ಉಲಿ, ಬೆದೆ ಆಡ್ತ ಬಂದಾಗ ನನ್ನೆಮ್ಮೆ ಅವ್ಕೆ ಆವುತಿ ಆದೊ...ಆ ಉಳಿಗಳು ಏಳೆಮ್ಮೆಗಳ ಮ್ಯಾಲೂ ಬಿದ್ದು ಸಾಲಾಗಿ ವೊಡುದು ಮನಗಿಸಿದ್ವಂತೆ. ಆದ್ರೆ ನನ್ನಮ್ಮೆಗಳಲ್ಲಿ ಒಂದೆಮ್ಮೆ ಬೋ ಸೂರ ಅದು ಸಾಯಕ್ಕೆ ಮುಂಚೆ ಒಂದು ಉಲಿ ವೋಟ್ಟೇಯ ತನ್ನ ಕೊಂಬ್ನಿಂದ ತಿವುದು ಅದ್ರ ಪಿರಾಣಾನು ತಕ್ಕಂಡಿತ್ತಂತೆ!... ಮಾರನೆ ಜಿನ ಸವುದೆ ತಕರಕ್ಕೆ ಕಾಡಿಗೋಗಿದ್ದ ನಮ್ಮೂರ ರೈತಾಪಿ ಕುಳ ಆ ದ್ರುಸ್ಯ ನ್ವಾಡಿ ಚೊಚಿಗಪಟ್ರಂತೆ! ಇಂದಿನ ನಾತ್ರೇನೆ ಮಳೆ ಬಿದ್ದಿತ್ತು. ಎಮ್ಮೆಗಳ ದಿಕ್ಕಾಪಾಲು ಅಟ್ಟಾಡಿ, ಆ ಕಕಾನ್ದ ವೋಟಗಲ್ಕೂ ಉಲಿ ಎಜ್ಜೆ ಎಮ್ಮೆ ಎಜ್ಜೆ ಒಂದಕೊಂದು ಬೆರಕಂಡಿದ್ವಂತೆ... ಒಂದೊಂದು ಎಮ್ಮೆ ಮಯ್ಯಿಂದ್ಲೂವೆ, ಉಲಿಗಳು ಈಟೀಟು