ಪುಟ:Vyshakha.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

49


ಕೈಯಲ್ಲಿಟ್ಟು ‘ಅಳಬೇಡ ಕಂದಾ. ತಿನ್ನು’ ಎಂದರು. ಅದನ್ನು ಕಂಡು ತಾನು ಅವಾಕ್ಕಾಗಿದ್ದಳು...

“ಇದೇನು ಕಿಟ್ಟಣ್ಣ, ದೇವರಿಗೆ ಅಪಚಾರವಾಗಲಿಲ್ಲವೆ?” ಎಂದು ನಡುಮನೆಯಲ್ಲಿ ಮಲಗಿದಂತೆಯೇ ಸುಶೀಲಮ್ಮ ಕೂಗಿದಳು.

ಆಗ ಅಳು ನಿಲ್ಲಿಸಿ ಬೆರಳಿನಲ್ಲಿ ಸಜ್ಜಿಗೆಯನ್ನು ಬಟ್ಟಲಿನಿಂದ ತೋಡಿ ತೋಡಿ ಆನಂದದಿಂದ ತಿನ್ನುತ್ತಿದ್ದ ಸರಿಸಯನ್ನೆ ನಿರುಕಿಸುತ್ತ.

“ಯಾವುದು ಅಪಚಾರ?- ಹಸಿದಿರೊ ಕಂದನಿಗೆ ಕೊಡದೆ, ಸಜ್ಜಿಗೇನ ದೇವರ ಮುಂದಿಟ್ಟಿದ್ದರೆ ಅದು ದೇವರಿಗೆ ಪ್ರಿಯಾಗುತ್ತಿತ್ತೆ?” ಎಂದಷ್ಟೇ ಹೇಳಿ, ಮಾನವನವರು ಪುನಃ ದೇವರ ಕೋಣೆಯನ್ನು ಪ್ರವೇಶಿಸಿ ಅನ್ನಪುರ್ಣಾಸ್ತುತಿಯನ್ನು ಮುಂದಿವರಿಸಿದ್ದರು!...

ರುಕ್ಮಿಣಿಯ ಮನಸ್ಸಿನೊಳಗೆ ಅವಳ ಮದುವೆಯ ಸಂದರ್ಭವೆ ತುಂಬಿದಂತಿತ್ತು. ಸರಸಿ, ಸಜ್ಜಿಗೆಯನ್ನು ಚಪ್ಪರಿಸಿ ತಿನ್ನುತ್ತ, ಕಣ್ಣು ಮಿಟುಕಿಸಿ ಆಸೆ ಮೊಸ ಮಾಡುವಂತೆ ಬೆರಳು ಮಡಿಸಿ, ಸನ್ನೆಮಾಡುತ್ತಿದ್ದಳು. ತುಂಟಿ ಎಂದು ಪ್ರೀತಿಯಿಂದ ಅವಳ ಕೆನ್ನೆಯನ್ನು ಹಿಂಡಿ, ರುಕ್ಮಿಣಿ ಅಡಿಗೆ ಕೋಣೆಗೆ ನಡೆದಳು.

ಅಲ್ಲಿ ಮಧ್ಯಾಹ್ನದ ಅಡಿಗೆಗೆಂದು ಮದರಂಗದ ಬಾಳೆಕಾಯಿಗಳನ್ನು ಈಳಿಗೆಮಣೆಯಲ್ಲಿ ಹೋಳುಹೋಳಾಗಿ ಕತ್ತರಿಸಲು ಪ್ರಾರಂಭಿಸಿದಳು. ಸರಸಿ ಸಜ್ಜಿಗೆ ತಿಂದು ಮುಗಿಸಿ, ಬಾಯಿ ಕೆನ್ನೆ ಗಲ್ಲಗಳಿಗೆಲ್ಲ ಆ ತಿನಿಸನ್ನು ಮೆತ್ತಿಸಿಕೊಂಡು ಒಳಗೆ ಬಂದಳು. ರುಕ್ಮಿಣಿ ‘ಏನು ಅವಸ್ಥೆಯೆ ನಿನ್ನದು! ಎದು ನಕ್ಕು, ಅವಳ ಮುಖ ಕೈಗಳನ್ನೆಲ್ಲ ನೀರಿನಿಂದ ತೊಳೆದು ತನ್ನ ಸೆರಗಿನಲ್ಲಿ ಒರೆಸಿದಳು. ಅವಳನ್ನು ಮುದ್ದಿಸಿ, ಒಂದು ಬೆಳ್ಳಿಯ ಮಿಳ್ಳೆಯಲ್ಲಿ ಕಾಸಿದ ಹಾಲು ಕುಡಿಸಿ, ‘ಈಗ ನೀನು ನಾಗಲಕ್ಷ್ಮಿಯ ಮನೆಗೆ ಹೋಗಬಹುದು. ಆದರೆ ಅಲ್ಲಿ ವಾಸಂತಿ, ಶಾಂತಿಯರ ಜೊತೆ ಆಡ್ತಾ ಕೂತು ಮಧ್ಯಾಹ್ನದ ಊಟಕ್ಕೆ ಬರದೇ ಹೋದರೆ ಏಟು’ ಎಂದು ಮೆತ್ತಗೆ ಕೆನ್ನೆಯನ್ನು ಚಿವುಟಿದ್ದಳು.

ಪುನಃ ರುಕ್ಮಿಣಿಯು ಕಾಯಿಪಲ್ಲೆ ಹೆಚ್ಚುವ ಕ್ರಿಯೆಯಲ್ಲಿ ತೊಡಗಿದಳು. ಮತ್ತೆ ಮನಸ್ಸು ಹಿಂದಿನ ನೆನಪಿನಲ್ಲಿ ಮುಳುಗಿತು...

  • * * *

ಸಂಸ್ಕೃತ ಪಂಡಿತರಾದ ತನ್ನ ಯಜಮಾನರು ಬಲು ರಸಿಕರು. ಶೃಂಗಾರದ ಮಾತುಗಳನ್ನು ಪೋಲಿ ಎನ್ನಿಸುವಷ್ಟು ಸಲೀಸಾಗಿ ಹೇಳಿಬಿಡುತ್ತಿದ್ದರು. ತನ್ನ ಅನುಭವದಲ್ಲಿ ಸಂಸ್ಕೃತ ಪಂಡಿತರೆಲ್ಲ ಇವರಂತೆಯೇ ರಸಿಕಾಗ್ರಣಿಗಳು. ಆದರೂ