ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲಿವ್ಸ್ ಬೆಟ್ಟಸಾಲು

ವಿಕಿಸೋರ್ಸ್ದಿಂದ

ಜೆರೂಸಲೆಂನ ಪುರ್ವಕ್ಕಿರುವ ಸುಣ್ಣಕಲ್ಲು ರಚಿತ ಬೆಟ್ಟಗಳ ಸಾಲು ಇದಕ್ಕೂ ಜೆರೊಸಲೆಂಗೂ ಮಧ್ಯೆ ಕಿಡ್ರಾನ್ ಕಣಿವೆ ಇದೆ. ಈ ಮಾರ್ಗವಾಗಿಯೇ ಡೇವಿಡ್ ಜೆರೊಸಲೆಂನಿಂದ ಓಡಿಹೋದನೆಂದು ಬೈಬಲ್ಲಿನ ಹಳೆ ಒಡಂಬಡಿಕೆಯಲ್ಲೂ ಯೇಸು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದನೆಂದು ಹೊಸ ಒಡಂಬಡಿಕೆಯಲ್ಲೂ ಹೇಳಿದೆ. ಕ್ರೈಸ್ತ ಧರ್ಮಾವಲಂಬಿಗಳಿಗಾಗಿ ಇಲ್ಲಿ ಒಂದು ಆರಾಧನ ಮಂದಿರವನ್ನು ಕಟ್ಟಿಸಲಾಗಿತ್ತು. ಕಾಲಕ್ರಮೇಣ ಇದನ್ನು ಮಹಮ್ಮದೀಯರು ಮಸೀದಿಯನ್ನಾಗಿ ಮಾರ್ಪಡಿಸಿದರು. ಬೆಟ್ಟದ ತಳಭಾಗದಲ್ಲಿ ಸ್ವಲ್ಪವೇ ದೂರದಲ್ಲಿರುವ ಶಿಲೆಯಿಂದ ನಿರ್ಮಿತವಾಗಿರುವ ಗುಹೆಯನ್ನು ಧರ್ಮೋಪದೇಶಕರ ಸಮಾಧಿ ಎಂದು ಕರೆಯುತ್ತಾರೆ. ಆಲಿವ್ಸ್ ಸರಣಿಯ ಅತಿಎತ್ತರವಾದ ಶಿಖರ ಆಲಿವ್ಸ್ ಪರ್ವತ (೮೦೮ ಮೀ).

ಸ್ಕೊಪಿಸ್ ಶಿಖರ ಆಲಿವ್ಸ್ ಬೆಟ್ಟಗಳ ಒಂದು ಭಾಗ. ೧೯೨೫ರಲ್ಲಿ ಇಲ್ಲಿ ಹೀಬ್ರೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. ೧೯೨೭ರ ಜುಲೈನಲ್ಲಾದ ಭೂಕಂಪದಿಂದ ಈ ಪ್ರದೇಶಕ್ಕೆ ಅಪಾರ ಹಾನಿಯುಂಟಾಯಿತು. ರಾಜಕೀಯವಾಗಿ ಇಸ್ರೇಲಿ ಆಡಳಿತ ವ್ಯವಸ್ಥೆಗೆ ಸಂಬಂಧ ಗ್ರೇಟಕ್ ಜೆರೊಸಲೆಂನ ಪುರಸಭೆಗೆ ಸೇರಿದ ಒಂದು ಭಾಗ. ಕ್ರೈಸ್ತ ಮತ್ತು ಯೆಹೂದಿ ಧರ್ಮಗಳ ಪುಣ್ಯಕ್ಷೇತ್ರ.