ವಿಷಯಕ್ಕೆ ಹೋಗು

ಶುಭಮಂಗಳ - ಸೂರ್ಯಂಗು ಚಂದ್ರಂಗು

ವಿಕಿಸೋರ್ಸ್ದಿಂದ

ಚಿತ್ರ: ಶುಭಮಂಗಳ

ಸಾಹಿತ್ಯ: ಎಂ.ಎನ್. ವ್ಯಾಸರಾವ್
ಸಂಗೀತ: ವಿಜಯಭಾಸ್ಕರ್
ಗಾಯನ: ರವಿ


ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗುತಾದ ಭೂತಾಯಿ ಮನಸು? |೨|

ರಾಜಂಗೂ ರಾಣೀಗೂ ಮುರಿದೋದ್ರೆ ಮನಸು ಅರೆಮನೆಯಾಗೇನೈತೆ ಸೊಗಸೂ?
ಅರೆಮನೆಯಾಗೇನೈತೆ ಸೊಗಸು?

ಮನೆತುಂಬ ಅರಿದೈತೆ ಕೆನೆ ಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದ ಉಸಿರು
ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ

ಸಿಡಿದೈತೆ ಕ್ವಾಪ

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ನಗುತಾದ ಭೂತಾಯಿ ಮನಸು?
ರಾಜಂಗು ರಾಣೀಗು ಮುರಿದೋದ್ರೆ ಮನಸು ಅರೆಮನೆಯಾಗೇನೈತೆ ಸೊಗಸೂ?
ಅರೆಮನೆಯಾಗೇನೈತೆ ಸೊಗಸೂ?

ಬೆಳದಿಂಗಳು ಚೆಲ್ಲೈತೆ ಅಂಗಳದಾ ಒರಗೆ
ಕರಿಮೋಡ ಮುಸುಕೈತೆ ಮನಸಿನಾ ಒಳಗೆ
ಬಯಲಾಗೆ ತುಳುಕೈತೆ ಹರುಸದಾ ಒನಲೂ
ಪ್ರೀತಿಯಾ ತೇರಿಗೆ ಬಡಿದೈತೆ ಸಿಡಿಲೂ
ಬಡಿದೈತೆ ಸಿಡಿಲೂ

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ನಗುತಾದ ಭೂತಾಯಿ ಮನಸು?
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು ಅರೆಮನೆಯಾಗೇನೈತೆ ಸೊಗಸೂ?
ಅರೆಮನೆಯಾಗೇನೈತೆ ಸೊಗಸು?

ಮುಂಬಾಗಿಲ ರಂಗೊಲಿ ಮಲಗೈತೆ ಆಯಾಗಿ
ಕಿರುನಗೆಯ ಮುಕವೆಲ್ಲ ಮುದುಡೈತೆ ಸೊರಗಿ
ಆನಂದ ಸಂತೊಸಾ ಈ ಮನೆಗೆ ಬರಲಿ

ಬೇಡುವೆನು ಕೈ ಮುಗಿದು ಆ ನನ್ನ ಸಿವನ
ಆ ನನ್ನ ಸಿವನಾ

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ನಗುತಾದ ಭೂತಾಯಿ ಮನಸು?
ರಾಜಂಗು ರಾಣೀಗು ಮುರಿದೋದ್ರೆ ಮನಸು ಅರೆಮನೆಯಾಗೇನೈತೆ ಸೊಗಸೂ?
ಅರೆಮನೆಯಾಗೇನೈತೆ ಸೊಗಸು?


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ