೨. ಜೀವ ಜಡರೂಪ

ವಿಕಿಸೋರ್ಸ್ದಿಂದ


ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡುಮೊಳನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||

(ಪ್ರಪಂಚವನು+ಅದು+ಆವುದೊ) (ಆವರಿಸಿಕೊಂಡುಂ+ಒಳನೆರೆದುಂ+ಇಹುದಂತೆ) (ಭಾವಕೆ+ಒಳಪಡದಂತೆ)
(ಅಳತೆಗೆ+ಆಳವಡದಂತೆ)

ಈ ಜೀವ ತುಂಬಿದ ಚೇತನವಿಲ್ಲದ(ಜಡ) ಪ್ರಪಂಚವನ್ನು, ಯಾವುದೊ ಒಂದು ಶಕ್ತಿ ಆವರಿಸಿಕೊಂಡು, ಒಳಗೆ ತುಂಬಿಕೊಂಡು(ಒಳನೆರೆ) ಇರುವಂತೆ, ಭಾವಕ್ಕೆ ಒಳಪಡದಂತೆ,
ಅಳತೆಗೆ ವಶವಾಗದಂತೆ(ಅಳವಡದಂತೆ) ಇರುವುದೊ, ಆ ವಿಶೇಷಕ್ಕೆ ನಮಸ್ಕರಿಸು(ಮಣಿ)