ಪುಟ:Chirasmarane-Niranjana.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೪೭

ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:

“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ, ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು; ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."

ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು ತಿಳಿದು, ಅವರಿಗೆ ಆನಂದವಾಯಿತು.

ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.
“ಏನೇ ಅದು?"
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.

ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:

“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."


ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"


ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ ಜತೆಯಲ್ಲಿ ನಡೆದಳು.
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು. ....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ. ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ