ರಾಗ : ಅಠಾಣ ತಾಳ: ಆದಿ ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ ಅಂಬುಜಗೆ ಭಾನುವಿನ ಉದಯದ ಚಿಂತೆ ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ ಯಮಗೆ ನಮ್ಮ ಕೂಡಲಸಂಗಮದೇವರ ಚಿಂತೆ