ಜನುಮ ಜನುಮದ ಅನುಭಂದ - ಆಕಾಶದಿಂದ ಜಾರಿ!
ಚಿತ್ರ: ಜನುಮ ಜನುಮದ ಅನುಭಂದ
ಸಾಹಿತ್ಯ: ಚಿ|ಉದಯಶಂಕರ್
ಸಂಗೀತ: ಇಳಯರಾಜ
ಗಾಯನ: ಎಸ್.ಪಿ.ಬಿ, ಎಸ್.ಜಾನಕಿ
ಆಕಾಶದಿಂದ ಜಾರಿ..
ಆಕಾಶದಿಂದ ಜಾರಿ!
ಭೂಮಿಗೆ ಬಂದ ನೋಡಿ
ಈ ಭೂಮಿಗೆ ಬಂದ ನೋಡಿ
ನಮಗಾಗಿ ಆ ದೇವನೆ
ನಮಗಾಗಿ ಮಹದೇವನೆ!
ಆಕಾಶದಿಂದ ಜಾರಿ!ಆಕಾಶದಿಂದ ಜಾರಿ
ಶಿವ ನಿನ್ನ ನೋಡಿ ನೋಡಿ ಕಣ್ಣು ತುಂಬಿ ಬಂದಿತು
ನಿನ್ನ ಕರುಣೆ ಕಂಡು ಕಂಡು ಹೃದಯ ತುಂಬಿ ಹೋಯಿತು
ಕನಸೋ ನನಸೋ
ಭ್ರಮೆಯೊ ಅರಿಯೆ?
ನಿನ್ನ ಪಾದ ಸೋಕಿ ಧರೆಯೇ..
ಕೈಲಾಸವಾಯಿತು ಆಯಿತು
ಎಂಥ ಭಾಗ್ಯ ನಮ್ಮದು!
ಹೇ! ಆಕಾಶದಿಂದ ಜಾರಿ
ಭೂಮಿಗೆ ಬಂದ ನೋಡಿ
ಈ ಭೂಮಿಗೆ ಬಂದ ನೋಡಿ
ನಮಗಾಗಿ ಆ ದೇವನೆ
ನಮಗಾಗಿ ಮಹದೇವನೆ!
ನಿನ್ನ ಸೇರಿ ಹೀಗೆ ಎಂದು ಬಾಳುವಾಸೆಯಾಗಿದೆ
ನಿನ್ನ ಬಾಳ ದೀಪವಾಗಿ ಇರುವ ಆಸೆ ಮೂಡಿದೆ
ಮನಸು ಮನಸು.. ಅರಿತು ಬೆರೆತು
ನಿನ್ನ ಸ್ನೇಹದಲ್ಲಿ ಜೀವಾ..
ಆನಂದ ತಂದಿದೆ.. ತಂದಿದೆ
ಪ್ರೇಮ ಗೀತೆ ಹಾಡಿದೆ
ಹೇ! ಆಕಾಶದಿಂದ ಜಾರಿ
ಭೂಮಿಗೆ ಬಂದ ನೋಡಿ
ಈ ಭೂಮಿಗೆ ಬಂದ ನೋಡಿ
ನಮಗಾಗಿ ಆ ದೇವನೆ
ನಮಗಾಗಿ ಮಹದೇವನೆ!
ಆಕಾಶದಿಂದ ಜಾರಿ!
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ