ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ-ಸುಧೆ ಬಡಿವಾರ ಬಂದಲ್ಲಿ ಬಡಿತಹೊಡೆತನೆ ಬಹಳ ಹಾಳು ನಾಲಿಗೆಗೆಂದು ದಣಿವು ಇಲ್ಲ. ಗರುವದಿಂದವರು ಹಿರಿಕಿರಿಯರನ್ನ ರಿಯರೈ! ಉಪಕಾರಿಗಳ ಗುರುತು ಹಿಡಿಯದಿಹರು. ಪರರೊಡನೆಯಂತಾಡಬೇಕೆಂದು ನೋಡದ || || ಹಿಟ್ಟು-ಹುಡಿಯನು ಸಮನೆ ಮಾಡುತಿಹರು || ೧೦ || ಗರುವದಾ ಕಟುಫಲವ ಸರುವರುಣಬೇಕಯ್ಯ, ತನ್ನ ನಡೆಯಲು ಪರರು ನಡೆಯುತಿಹರು, ಗರುವಿಗಳನಾರೆಂದೂ ಮಾತನಾಡಿಸರಯ್ಯ ಹಳೆಕೆರವಿನೊಲು ಬೀಳುಗಳೆಯುತಿಹರು. ಬಡಿವಾರ ಬಂದೊಡನೆ ಬಹುಕಾಲ ಬಾಳ, ಜ್ಞಾನ -ಧನ-ಸಂತಾನವಳಿಯುತಿಹುದು. ಒಡೆಯನಿಗೆ ಬಡಿವಾರ ಬರೆಯೊಡೆತನಕೆ ಕೇಡು ಬಡವನಿಗೆ ಬರೆ ಬಿಕ್ಕೆ ಕೂಡ ಸಿಗದು. ಇಂತು ಗುಣಗಳ ತೆರದಿ ನಿತ್ಯ ನಿರ್ಗುಣದಲ್ಲಿ ಗರುವ ಬರೆಯನುಭಾವ ಜರಿಯುತಿಹುದು. ಅಂತು ಕಳಕೊಳಲು ಎಳಸುವ ಮಾನವರು ತಾವು ಬಡಿವಾರದಿಂ ಬಹಳ ಮೆರೆಯಬಹುದು, ಬಡಿವಾರ ಬರೆ ಬಲ್ಲಿದರ ವಿನಯವನು ಕಂಡು ಅದರ ಅಂಕುರವನ್ನು ಮುರಿಯಬೇಕು. ಒಡೆಯ ದೇವನು ತನಗೆ ನೀಡಿದೊಡನೆಯ ಕೊಂಡು ಮರೆಯಲವುಗಳನುಂಡು ತಣಿಯಬೇಕು. || 00 || 116011 110211 11081