ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರ್ಗುಣ ತ್ಯಾಗ, ೨೧. ಆಲಸ್ಯವು ಮುಖ್ಯ ಶತ್ರು. ಹೊಲಸು ಅಲಸಿಕೆಯನ್ನು ನಿಲಿಸಿಗೊಡದಿರು ನೀನು. ಶೀಲಕುಲಗಳನೆಯದು ಅಳಿಸುತಿಹುದು. ಒಲಿದ ಆಶ್ರಿತರನ್ನು ಕೊಲುವುದೆಯದರ ಧರ್ಮ ಅದರ ಗಾಳಿಗೆ ಕೂಡ ನಿಲ್ಲದಿಹುದು, ತನ್ನ ಇಹದರ್ಥಗಳ ಕೆಡಿಸುನಂದದಲ್ಲಿಯದು ಪರಮ ಅರ್ಥವ ಕೂಡ ಕೊಲ್ಲುತಿಹುದು. ಚೆನ್ನ ನಾಮವ ನೆನೆಯ ಕುಳಿತ ಸಮಯಕೆ ಬಂದು ನಿದ್ರೆರೂಪವ ತಾಳಿ ನಿಲ್ಲುತಿಹುದು, ಬಂದೊಡನೆ ತಾನವನು ಜರಿಯುತಲಿ ಮುರಿಯುತಲಿ ನಾನುವನು ಎಡೆಬಿಡದೆ ನೆನೆಯುತಿಹುದು. ಅ೦ದದಿ೦ದಲಿಯಿಂತು ಕೆಲಕಾಲ ನಡೆಯುತಿರೆ ಬಂದದಾರಿಯಲೆಯದು ಪೋಗುತಿಹುದು. ತಮ್ಮ ಕೆಲಸದಲೆಂದು ಅಲಸಿಕೆಯು ನೆಲಸುವದೋ ಆ ಚಣದಿಯದನಲ್ಲಿ ಹಣಿಯುತಿಹುದು. ಒಮ್ಮೆ ಗಟ್ಟಿಗನಾಗಿ ಜಟ್ಟಿಯೊಲು ಹೋರಿದೊಡೆ ಛಲದ 072 || 2 9 || 112211 || ೩೪ || ಬಲದಿಯದು ಮಣಿಯುತಿಹುದು || ೩೫ || ೨೨ ಚಿಂತೆಯ ಬೆಳೆ. ಹಾಳು ಚಿಂತೆಯ ಬೆಳೆಯು ಬಲುಬೇಗ ಬೆಳೆಯುವದು ಮೊಳೆತೊಡನೆ ಮೊಳಕೆಯನ್ನು ಮುರಿಯಬೇಕು, 1 ಕ್ಷಣ. 2 ದೃಢನಿಶ್ಚಯ.