ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಬಿಂದು ೪ ) ಸದ್ದು ಣ- ಸ೦ಪಾದ ನ ೨೪ ವಿವೇಕ ದುಷ್ಟ ದುರ್ಮಣಗಳನು ನಷ್ಟಗೊಳಿಸಲು ಬೇಗ ವರ ವಿವೇಕವೆ ಹಿರಿಯ ಕತ್ತಿಯಿಹುದು ಸ್ಪಷ್ಟ ಮಾತಿದು ತಾನೆ. ಇಷ್ಟೆ ಫಲ ದೊರೆವುದಕೆ ಅದನುಳಿದದೇನನ್ನೂ ಮಾಡಬಹುದು. ಮುಂದಿನವರೆಡವಿಯುರುಳಿದುದನ್ನು ತಾ ಕಂಡು ಹೆಚ್ಚಿನೆಚ್ಚರದಿಂದ ನಡೆಯಬೇಕು. ಮುಂದೆ ನೋಟ ನೆಟ್ಟು ಆತುಮನ ನೆನವಿಟ್ಟು ಸಂತಸದಿ ವೈರಿಗಳ ಜಡಿಯಬೇಕು. ೨೫. ಚಲೋ ಬುದ್ಧಿಯು. ತನ್ನ ಕಾಯ್ದುದು ಕೊಲ್ಲುವುದು ಬುದ್ಧಿಯಲ್ಲುಂಟು. ಒಳಿತು ಕಾಯುದು, ಕೆಡಕು ಕೊಲ್ಲುತಿಹುದು. ಚೆನ್ನ ಆತ್ಮನ ನಿತ್ಯ ನೆನೆವ ಬುದ್ಧಿಯು ಒಳಿತು ಅವನುಳಿದು ಚಿ೦ತಿ ಪುದೇ ಕೆಡಕು ಇಹುದು. ಧನ ಜನಾದಿಗಳ ಬಲವೆನಿತು ಇದ್ದರೂ ತನಗೆ ಬುದ್ಧಿಯನ್ನುಳಿದಾರೋ ಕಾಯರವರು. ತನಗದನೆ ನೀಡೆಂದು ಆತ್ಮದೇವನಿಗೆಂದೂ ಎದೆಯು ಕರೆಗುವ ತೆರದಿ ಪ್ರಾರ್ಥಿಸುತಿರು. ||0| 11 & 11 11 2 11