ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಗುಣ- ಸಂಪಾದನ. ೨೬, ಇಂದ್ರಿಯ-ನಿಗ್ರಹ ಎಲ್ಲರಲ್ಲಿಹ ಜ್ಞಾನಕರ್ಮೇಂದ್ರಿಯಂಗಳವು ವಿಕಲ ಮಾಡುತಲಿಹವು ಸಕಲರನ್ನು, ಎಲ್ಲವರ ಬಯಕೆಗಳನಳಿಸಿ ಮಾತನು ಮುರಿದು ವಶದಲಿಡುತಿರು ನಿತ್ಯ ಅವುಗಳನ್ನು ಆತುಮನ ಸೇವೆಯಲಿ ಸವೆಯಿಸಿದರೆಲ್ಲವನು ಪ್ರತಿಯೊಂದು ವಶವಲಿಯೆ ನಿಲ್ಲುತಿಹುದು. ಈ ತೆರದಿ ವಶಪಡಿಸಿದವರು ಸಿದ್ಧರು ನೋಡು ಅಂಥವರಿಗೀ ಜನುಮ ಸಲ್ಲುತಿಹುದು. ೨೭ ಪ್ರಥಮ ಕಾಮನನ್ನೆ ಕೊಲ್ಲಬೇಕು ಕಾಮ ಕ್ರೋಧಂಗಳವ, ಮದ ಮತ್ಸರಂಗಳವು ದಂಭಹಂಕಾರಗಳು ನರರೊಳಿಹವು. ನೇಮದಿಂದಾತ್ಮನನು ಬಲವಾಗಿ ಬಂಧಿಸುತ ಭವದ ತಿರುಗಣಿಯಲ್ಲಿ ತಿರುಗಿಸುವವು. ಘನ ವಿಕಾರಗಳನ್ನು ಹರಿಯಗೊಡದಿರು ನೀನು ಅದಕೆ ಕಾಮನ ಮೊದಲು ಗೆಲ್ಲಬೇಕು ೨೧ 118 11 || 2 11 ಮನದಿ ಬಯಕೆಯು ಮೊಳೆಯೆ, ' ಎನಗಣೇತಕೆ ಬೇಕು?? ಈ ವಿವೇಕದಿಯದನು ಕೊಲ್ಲಬೇಕು ಕಾಮವಳಿದರೆ ಮುಂದೆ ಕ್ರೋಧ ಬರಲರಿಯ ಬಯಸಿದುದು ದೊರೆಯದಿರೆ ಕೋಪ ಬಹುದು. li 11 ಕಾಮನನೆ ತೊರೆಯುತಿರೆ, ಕ್ರೋಧ ಮೆರೆಯುವದೆಂತು? ಅಳಿದರಿವು ಇನ್ನಾವುದಳಿಯಬಹುದು ? 115 11