ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110011 || 00 || ಬೋಧ ಸುಧೆ ಮನವು ವಿಷಯವ ಬಯಸೆ, ಮೈಯ ವಶದಲ್ಲಿರಿಸು. ಮನದೊಡನೆಯದನೆಂದೂ ಕಳುಹಬೇಡ, ಮನವದನು ತೊರೆಯದಿರೆ, ಬುದ್ಧಿಯಿಂ ಬೋಧಿಸುತ ತೊರೆವನಕ ಸಾಧನವ ಮರೆಯಬೇಡ, ಲಾಭ ಸಾಧಕರಿವರ ಬಾಧೆಗೊಳಗಾಗದಲೆ ನಿರ್ವಿಕಾರತೆಯಿಂದ ಬೆಳೆಯಬೇಕು. ಲೋಭ-ಪ್ರಭದಿ ಭವದ ಬಾಧೆಯಲಿ ಬೀಳದಲೆ ಆತ್ಮಪ್ರಭೆಯಿಂದವರು ಹೊಳೆಯಬೇಕು, ೨೮. ಜಡ ಹಾಕಬಾರದು. ಯಾರ ಮೇಲೆಯು ಯಾವ ಬಗೆಯ ಭಾರವು ಬೇಡ. ತನ್ನ ಮೇಲದು ಮರಳಿ ಬೀಳ್ಳುದಲ್ಲ ! ಭಾರ ಹೇರಿದ ತೆರದಿ ಭಾರ ಬೀಳ್ವುದು ದಿಟವು. ನಿತ್ಯ ತತ್ವವ' ಇದಕ್ಕೆ ಚ್ಯುತಿಯು ಇಲ್ಲ. ೨೯. ಕೈ ಕೆಳಗೆ ಬೇಡ. ತನ್ನ ಕೈಯನು ಕಳಗೆ ಮಾಡಿ ಅನ್ಯರದನ್ನು ಎಂದೆಂದಿಗೂ ನೀನು ಕೊಳ್ಳಬೇಡ ತನ್ನ ಕೈ ಯದು ಕೆಡುಗು. ತನಗಿನಿಸು ಸಾಲದದು. ಅದಕೆ ಕೈ ಮೇಲಾಡದಿರಲು ಬೇಡ. ಖುಲ್ಲ ವೈದಿಕ-ಜಂಗಮರು ಎಲ್ಲರನು ಬೇಡಿ ಕಾಡಿ ಕೈಯನ್ನು ಕೆಡಿಸಿಕೊಳ್ಳುತಿಹರು. ಇಲ್ಲ ಕೆಲಸಕೆ ಗೆಲವು, ಐಸಿರಿಯ ಸಿರಿಯೊಲವು. ಪರರ ದಾನವನದಕೆ ಕೊಳ್ಳದಲಿರು. 11021 1180 11