ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Se 66 ಪ್ರಸ್ತಾವ ನೆ - ಅಲ್ಪ - ಚರಿತ್ರೆ (0) On the Tree of Sachchidanand grow innumerable fruits such as Rama, Krishna, Christ and others; one or two come down, now and then, to this earth and they work wonderful changes in society." -Shri Ramakrishna.

  • ಸಚ್ಚಿದಾನಂದನೆಂಬ ಮಹಾ-ವೃಕ್ಷದಲ್ಲಿ ರಾಮ, ಕೃಷ್ಣ,

ಕ್ರಿಸ್ತಾದಿ ಅಗಣಿತ ಹಣ್ಣುಗಳು ಬೆಳೆಯುವವು. ಅವುಗಳಲ್ಲಿಯ ಒಂದೆರಡು ಆಗಾಗ ಪೃಥ್ವಿಯ ಮೇಲೆ ಅವತರಿಸಿ ಸಮಾಜದಲ್ಲಿ ಅದ್ಭುತವಾದ ಬದಲನ್ನು ಒದಗಿಸುವವು.” ಎಂದು ಶ್ರೀರಾಮಕೃಷ್ಣ ಪರಮಹಂಸರು ಉಸುರಿರುವರು. ಅಹುದು, ಇಂಥ ಮಹಾಪುರುಷರಿಂದಲೆ ದುಷ್ಟರ ದಂಡನ, ಶಿಷ್ಟರ ಪರಿಪಾಲನ, ಅಧರ್ಮದ ಖಂಡನ, ಸ್ವಧರ್ಮದ ಮಂಡನ ; ವ್ಯಕ್ತಿಯ ಹಾಗೂ ಸಮಾಜದ ಉದ್ಧಾರವು. ಭಕುತರ

  • ಅಘಖಂಡನವು ದುಃಖಭಂಜನವು ' ಇವರ ಕೆಲಸ. ಈ ಮಹಿಮರು

ರಸರಾಜನಾದ ಲವಣವಿದ್ದಂತೆ. ಇವರು ಸಮಾಜವನ್ನು ಕೊಳೆಯಗೊಡುವ ದಿಲ್ಲ-ಅಳಿಯಗೊಡುವದಿಲ್ಲ. ಇವರಿಂದಲೆ ವ್ಯಕ್ತಿ-ಜೀವನದಲ್ಲಿಯ ಸಮಾಜ, ಜೀವನದಲ್ಲಿಯೂ ನವರಸ, ಹೊಸರುಚಿ, ನಿತ್ಯನೂತನ ಆನಂದ. ಆದರೆ ಇವರದು ಮರೆಯಾಗಿರುವ ಸ್ವಭಾವ, ದೇವನಂತೆ ದೇವ ಮಾನವರು, ದೇವನಿರುವದು ತಿಲದ ಮರೆಯ ತೈಲದಂತೆ, ನೆಲದ ಮರೆಯ ನಿಧಾನದಂತೆ' ಮರೆಯಲ್ಲಿ, ಯಾರಿಗೂ ತಿಳಿಯದಂತೆ, ಎಲ್ಲಿಯ ಹೊಳೆಯ