ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ- ಸುಧೆ ಸತ್ಯ ನುಡಿವುದರಿಂದ ಮನೆಮಾರು ಜನಧನವು ಎಲ್ಲವಳಿದರೂ ಕೂಡ ನಡೆಯಬಹುದು. ನಿತ್ಯ ದೇವನೆ ತನಗೆಯೆಲ್ಲ ನೀಡಲು ಬಲ್ಲ ಅವನದೆಯ ಕೊನೆಯನಕ ತಡೆಯಬಹುದು. || ೩೦ || ಸಟೆಯಾಡಿ ಬಾಳುವಾ ಹಾಳು ಬಾಳುವೆಗಿಂತ ದಿಟವಾಡಿ ಕರೆಯುವದು ಮರಣವನ್ನು, " ಘಟವು ಅಳಿದರೂ ಕೂಡ ಸಟೆಯನಾಡದವಂಗೆ ದೇವ ನೆರವನು ನೀಡಿ ಪೊರೆಯುತಿಹನು. ಆದರಿದರಲಿ ಕೂಡ ತೂಕವಿರಬೇಕಯ್ಯ, ತೂಕ ತಪ್ಪಿದರೆಯತಿ ಶೋಕವಯ್ಯ! ಸೋದರ ವಿವೇಕವನು ಆದರದಿ ಕೇಳುತಲಿ || 20 || ಲೋಕಹಿತವನು ನೋಡಿ ನುಡಿವುದಯ್ಯ, || ೩೨ || ಪರರ ಹಿತ ಜರಗುತಿರೆ, ತನಗಹಿತವೊದಗಿದರೆ ಸುಳ್ಳನೊಮ್ಮೊಮ್ಮೆ ತಾನುಸುರಬಹುದು. ಪರರು ಹರಣಕ್ಕೆ ಶರಣು ಎನುವ ಸಮಯದಿ ತಾನು ಸುಳ್ಳನುಸುರಿಯ ಆದನು ಉಳಿಸುತಿಹುದು. || ೩೩ | ಪಾರ್ವನೋರ್ವನದೊಮ್ಮೆ, ಭಾರ್ಯೆಯನು ಬಡಿಯುತಿರೆ ಒಡನೆ ಹರಣವನವಳು ಬಿಡುತಲಿಹಳು, ಸಾರ್ಧು ಕಂದುದರಿಂದ, ಹಿರಿ ಕಬೀರರು ಅದನು ಸಾಕ್ಷಿಕೊಡಲವರ ಕರೆದಿಹರು ಕೇಳು

  • ಇಂದು ಸತ್ಯವನುಸುರೆ, ಪಾರ್ವ ಸಾಯ್ತುದು ಸತ್ಯ.

ಸುಳ್ಳನಾಡಲು ಸಾಧುತನಕೆ ಕೇಡು'. || ೩೪ ||