ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಗುಣ. ಸಂಪಾದನ ದುಡಿಮಡಿಸಿ ದೇಹವನ್ನು ದಣಿಯಿಸುತ್ತಿರು ಅದನು ತಣಿವನದಕೆಂದೆಂದಿಗುಣಿಸ ಬೇಡಾ. ದುಡಿಯುತಿರು ಆಳಾಗಿ, ಉಣುತಲಿರು ಅರಸಾಗಿ ಬೆಳೆವ ಬಗೆಯಿದುವೆಯೆಂದೆಣಿಸು ನೋಡಾ, || ೬೬ ನಿಷ್ಠೆಯಿಲ್ಲದ ಕೆಲಸ, ನಷ್ಟವಪ್ಪುದು ಸ್ಪಷ್ಟ ನಿಷ್ಠೆಯೇ ಎಲ್ಲೆಲ್ಲಿ ಇಷ್ಟವಿಹುದು. ನಿಷ್ಠೆ ನಿಷ್ಠೆಗಳಲ್ಲಿ, ಆತ್ಮನಿಷ್ಠೆಯ ಶ್ರೇಷ್ಠ ಆತ್ಮಗೆಯೆ ತನುಮನವನರ್ಪಿಸುವದು. ೪೦. ತೂಕದಿಂದ ನಡೆಯೋಣ. ತಾನು ಗಳಿಸುವದೆನಿತು, ಮೇಣು ಬಳಿಸುವದೆನಿತು ? ದಕ್ಷನಾಗಿಯೇ ನಿತ್ಯ ಲಕ್ಷಿಸಯ್ಯ ತಾನು ಒಂದಡಿಯಿಡಲು, ದಾನವನು ಕೊಡುತಿರಲು ವರವಿವೇಕವ ನಿತ್ಯ ರಕ್ಷಿಸಯ್ಯ. ೪೧. ಪ್ರಪಂಚದಲ್ಲಿ ಪರಮಾರ್ಥ. ಸಿರಿಯ ಸಂಸಾರದಲಿ ಮರೆಯದಾತುಮನ ನೆನೆ ಬರಿಯ ಸಂಸಾರವನು ಜರೆವುದಯ್ಯ, ಹಿರಿಯ ಸತ್ವವ ಪಿಡಿದು, ಪರಮ ಆರ್ಥವ ಪಡೆದು ಸಂಸಾರ-ಸಂಗವನು ಹರಿವುದಯ್ಯ. ಪರಮಾರ್ಥ-ಸಾಧನವೇ ಪರಮ ಮಾನವ ಧರ್ಮ ಅದನ್ನು ಗಮನಿಸಿಯೆಲ್ಲ ಮಾಡಬೇಕು, ಪರಮಾರ್ಥಕನುಕೂಲ-ನಿರುವುದನು-ಇರುವನಿತು ಮಾಡುತಾತ್ಮನ ನೆನೆದು ಕೂರಬೇಕು. 112211 | ೬೮ || 112511 112011