ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಬೋಧ-ಸುಧೆ ಆತ್ಮ-ಸ್ಮರಣಿಯ ಸತತ, ಮಾಡುತಿರೆ ನೋಡುತಿರೆ ಸ್ವಸ್ಥತೆಯದಲ್ಲೆಡೆಗೆ ದೊರೆವುದಲ್ಲ ! ಆತ್ಮರೂಪವೆ ಸ್ವತ್ವ, ಅಲ್ಲಿ ಸ್ಥಿರತನ ಸ್ಥ-ತ್ವ ಸ್ವಾತ್ಮನಲ್ಲಿ ಸ್ಥಿರಮತಿಯು ಸ್ವಸ್ಥನಲ್ಲ ! ಮರವನೆಲ್ಲವ ಕಡಿದು, ಅರಿವನ್ನ ತಾ ಹಿಡಿದು ನಿರ್ಗುಣದಿ ನಿಲ್ವಂಗೆ ಶಾಂತಿ ಬಹುದು, ಅರಗಳಿಗೆಯೆನೂ ಕೂಡ ವ್ಯರ್ಥ ಕಳೆಯಲು ಬೇಡ ನಿತ್ಯ ಧ್ಯಾನದಿ ನಿರತನಿರುತಲಿಹುದು ಸತ್ಯವಾದರ್ಥವೆಯೆ, ನಿತ್ಯ ನಿಜರೂಪವದು ಅದರ ವಿರಹಿತವೆಲ್ಲ ವ್ಯರ್ಥವಲ್ಲ! ಸತ್ಯವನು ಸ್ಮರಿಸದ, ವರಿಸಿಯಾದರಿಸದಲೆ, ನೋಡದಲೆ ಮಾಳ್ವುದಕೆ ಫಲವೆಯಿಲ್ಲ. ೫೨. ಸತ್ಸಂಗದ ವ್ಯಾಖ್ಯೆಯು ಸತ್ಸಂಗವೆಂದರದು ಸಜ್ಜನರ ಸಂಗ, ತನಗಿಂತ ವರಗುಣದವರ ಸಂಗವು. ಸದ್ಗುರುಗಳಿ, ನಾಮದ ನೆನವು ಸತ್ಸಂಗ, ಉಸಿರಲದನುಸುರುವದು ಸತ್ಸಂಗವು. ನಿಚ್ಚ ಸದ್ವಸ್ತುವಿನ ಅನುಭಾವ ಸತ್ಸಂಗ ; ಇದರ ಅನುಸಂಧಾನವದನೆಯಿಹುದು. ಅಚ್ಯುತನ ಸಂಗದಿಂದಚ್ಯುತನು ತಾನಾಗಿ ಸಚ್ಚರಿತನಾಗಿ ಪಾರಾಗುತಿಹುದು. || 08 || 11 02 11 || 02 || | ೧೮ ||