ಪುಟ:Chirasmarane-Niranjana.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೧೦೬

ಚಿರಸ್ಮರಣೆ

 ಪತ್ರಿಕೆಯತ್ತಿ ದೃಷ್ಟಿ ಹರಿಸುತ್ತಿದ್ದ ಚಿರುಕಂಡ ಕೇಳಿದ:
"ಹಾಗಾದರೆ ಇನ್ನು ಪತ್ರಿಕೆ ಓದಿಹೇಳೋದಕ್ಕೆ ಏನ್ನು ಮಾಡೋಣ ಸರ್?"
ಮಾಸ್ತರು ಉತ್ತರವಿತ್ತರು:
"ತಾಳು ಏನಾದರೂ ಮಾಡೋಣ."
ಮಾವಿನ ಗಿಡದಲ್ಲಿ ಆಸಕ್ತಿ ತೋರುತ್ತಿದ್ದ ಮಾಸ್ತರನ್ನು ಕಂಡು ಅಪ್ಪು ಎಂದು:
"ಅದೇನು ನೋಡ್ತಿದ್ದೇರಿ ಸರ್?"
"ಬೀಜ ಮೊಳೆತು ಪ್ಪುಟ್ಟ ಗಿಡವಾಗಿದೆ. ಈ ಗಿಡ ಮರವಾಗಿ ಮಾವಿನ ಹಣ್ಣು ಕೊಡೋದಕ್ಕೆ ಎಷ್ಟು ಕಾಲವಾದೀತೂಂತ ಯೋಚಿಸ್ತಿದ್ದೇನೆ."
ಅಪ್ಪು ಮಾಸ್ತರ ಮುಖವನ್ನೆ ನೋಡಿದ. ಅವರು ಮುಂದುವರಿಸಿದರು: "ಈ ಗಿಡ ಬೆಳೆದು ಫಲ ಸಿಗೋದಕ್ಕೆ ಬಹಳ ದಿನ ಬೇಕು, ಅಲ್ಲ?" ಅಪ್ಪು 'ಹೌದೆಂದು' ತಲೆಯಾಡಿಸಿದ. ಮಾಸ್ತರು ಮಾತನ್ನು ಪೂರ್ಣಗೊಳಿಸಿದರು:
"ಪ್ರತಿಯೊಂದೂ ಹಾಗೆಯೇ. ಬೀಜ ಮೊಳೆತು, ಗಿಡವಾಗಿ, ಮರವಾಗಿ ಫಲ ಬಿಡೋದಕ್ಕೆ ಸಮಯ ಬೇಕು. ತಾಳ್ಮೆಯಿಂದ ನಾವು ಕಾಯುತ್ತ ದುಡೀಬೇಕು.ಪ್ರತಿಯೊಂದೂ ಹಾಗೆಯೇ."
ಆ ಮಾತು ಅರ್ಥವಾಗಿ ಚಿರುಕಂಡ ತಿಳಿವಳಿಕೆಯ ನಗೆ ನಕ್ಕ. ಸ್ವಲ್ಪ ತಡೆದು ಅಪ್ಪುವಿಗೂ ಅದು ಅರ್ಥವಾಗಿ, ಆತನೂ ನಕ್ಕ.
ಶಾಲೆಯ ಜಗಲಿಯ ಬದಲು ಯಾವನಾದರೂ ರೈತನ ಮನೆಯಲ್ಲಿ ಮುಂದೆ ಪತ್ರಿಕೆ ಓದುವುದು ಮೇಲೆಂದು ಮಾಸ್ತರು ಮಾಡಿದ ಸೂಚನೆ ಯೋಗ್ಯವಾಗಿತ್ತು. ಆದರೆ 'ನನ್ನ ಮನೆಗೆ ಬನ್ನಿ'ಎಂದು ಕರೆಯಲು ಮಾತ್ರ ಯಾವ ರೈತನೂ ಸಿದ್ಧನಿರಲಿಲ್ಲ.ದಿನನಿತ್ಯದ ಕೆಲಸಕ್ಕಿಂತ ಭಿನ್ನವಾದ ಆ ಓದು ಅತ್ಯಗತ್ಯವೆಂದು ಅವರಿಗೆ ತೋರಲಿಲ್ಲ.ಜಮೀನ್ದಾರರ ಮನೆಯಲ್ಲಿ ಪತ್ರಿಕೆಯೋದುವ ಪ್ರಸ್ತಾಪ ಬಂದಿತ್ತೆಂದು ರೈತರಿಗೆ ತಿಳಿದಿದ್ದರೆ, ಆ ಓದಿನಲ್ಲಿ ಆಸಕ್ತಿ ತೋರುವವರ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತಿತ್ತು. "ನನಗಿನ್ನು ಬಿಡುವಿಲ್ಲ, ನನ್ನ ಬದಲು ಚಿರುಕಂಡ ಪತ್ತ್ರಿಕೆ ಓದಿ ಹೇಳ್ತಾನ" ಎಂದು ಮಾಸ್ತರು ಹೇಳಿದುದಂತೂ ಕೊನೆಯಗಂಟನ್ನೂ ಕಡಿದಹಾಗಾಯಿತು. ಶಿಲ್ಪ ಕೃತಿಯ ರಚನೆಗಾಗಿ ಪ್ರಯಾಸಪಟ್ಟು ತಂದು ಕೂಡಿಸಿದ ಆವೆ ಮಣ್ಣು ಒಣಗಿಹೋಗುತ್ತಿದೆಯಲ್ಲ, ಎಂದು ದುಃಖವಾಯಿತು ಕಲಾವಿದ