ಪುಟ:Chirasmarane-Niranjana.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚಿರಸ್ಮರಣೆ

೯೯

ಹೋಟಲಿನ ಗಾಜಿನ ಲೋಟವಲ್ಲ.

"ಒಳಗೆ ಓಡು"ಎಂದು ನಂಬಿಯಾರರು ಮಗನಿಗೆ ಅಜ್ಜೆ ಇತ್ತರು. ಮಾಸ್ತರರ ದ್ರುಶ್ತಿ, ಓಡುತ್ತಿದ್ದ ಹುಡುಗನನ್ನು ಹಿಂಬಾಲಿಸಿತು. ಬಾಗಿಲ ಬಳಿ ಈಗ ಹೆಂಗಸರಿರಲಿಲ್ಲ.

ಒಂದು ಸಿಗರೇಟು ಹಚ್ಚಿ ಜಮೀನ್ದಾರರು ಚಹವನ್ನೆತ್ತಿಕೊಂಡು "ತಗೊಳ್ಳಿ"ಎಂದು ಮಾಸ್ತರಿಗೆ ಹೇಳಿದರು.
ಕಪ್ಪಿನಷ್ಟೇ ಸೊಗಸಾಗಿತ್ತು ಪಾನಿಯ ಲಕೂದಾ.ಶ್ರೀಮಂತ ಚಹ ಮತ್ತೇರುವಷ್ಟು ರುಚಿಕರ.
ಒಂದು ಗುಟುಕನ್ನು ಹೀರಿದ ಬಳಿಕ ಜಮೀನ್ದಾರರೆಂದರು:

"ಕರುಣಾಕರನಿಗೆ ಮುಂದೆ ಕಾಲೇಜು ಓದಿಸ್ಬೇಕೂಂತ ನಿರ್ಧಾರ ಮಾಡಿದ್ದೇನೆ ಮಾನವ ಕಡೆಯಿಂದ ಅವನಿಗೆ ಆಸ್ತಿಯೂ ಬರ್ತದೆ. ವಕೀಲನಾಗಿ ಆತ ರಾಜಕೀಯಕ್ಕೆ ಇಳೀಬೇಕೂಂತ ನನ್ನ ಅಪೇಕ್ಶ."

ಚಹ ಕುಡಿಯತ್ತ ಮಾಸ್ತರು ತನ್ನ ಬಡ ವಿದ್ಯಾರ್ಥಿಗಳನ್ನು ಸ್ಮರಿಸಿಕೊಂಡರು.ಜಮೀನ್ದಾರರ ಮಗನಷ್ಟೇ ಅಂತಸ್ತು ಇದ್ದ. ಬೇರೆ ಇಬ್ಬರು ಹುಡುಗರೆಂದರೆ ನಂಬೂದಿರಿಯ ಮಕ್ಕಳು---ತಾವು ಮಡಿ ಬ್ರಾಹ್ಮಣರೆಂದು ಯಾವಾಗಲೂ ಪ್ರತ್ಯೇಕವಾಗಿಯೇ ಕುಳಿತು,ಮನೆಗೆ ಹೋದೊಡನೆ ಸ್ನಾನ ಮಾಡಿ ಮೈಲಿಗೆ ಕಳೆಯುತ್ತಿದ ಎಳೆಯರು. ನಂಬಿಯಾರರ ಹಾಗೆಯೇ ಮಕ್ಕಳಿಗೆ ಕಾಲೇಜು ವಿದ್ಯಾಭ್ಯಾಸ ಕೊಡಿಸುವ ಮಾತನ್ನಾಡುವ ಸಾಮರ್ಥ್ಯ ಆ ಹಳಿಯಲ್ಲಿ ಬೇರೆಯೂ ಒಬ್ಬ ವ್ಯಕ್ತಿಗಿದ್ದುದೆಂದರೆ ನಂಬೂದಿರಿಗೆ ಮಾತ್ರ. ಇತರರು ಯಾರೂ ಅಂಥ ಕನಸನ್ನು ಕೂಡ ಕಾಣುವ ಸ್ಥಿತಿಯಲ್ಲಿರಲಿಲ್ಲ.
ಚಹ ಕುಡಿದು ಮುಗಿಸಿದ ಮಾಸ್ತರೊಡನೆ ಜಮೀನ್ದಾರರು ರಾಜಿಕೀಯದ ಮಾತೆತ್ತಿದರು:
"ಗ್ರಾಮಗಳಲ್ಲಿ ಈಗ ಕೆಲವು ಕಡೆ ಪಂಚಾಯಿತಿ ಅಂತ ಮಾಡ್ತಾರಲ್ಲ,ಅದರ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು?"
ಮಾಸ್ತರು ತಂತಿಯ ಮೇಲಿನ ಕಸರತ್ತಿಗೆ ಆರಂಭ ಮಾಡಿದರು:
"ಗ್ರಾಮಪಂಚಾಯಿತಿಯಿಂದ ಒಳ್ಳೆದೂ ಆಗ್ಬಹುದು;ಕೆಟದ್ದೂ ಆಗಬಹುದು ಕೆಟವರ ಕೈಗೆ ಅಧಿಕಾರ ಸಿಕ್ಕಿದ್ರೆ...."
ತೊಡೆ ತಟ್ಟಿ,ಮಾಸ್ತರ ಮಾತು ತಡೆದು, "ಅದೇನಾನೂ ಹೇಳೋದು!" ಎಂದು ನಂಬಿಯಾರರು ಉದ್ಗರಿಸಿದರು.