ಪ್ರೇಮಪರ್ವ - ಅನುರಾಗದಾ ಆರಾದನೇ
Wikisource ಇಂದ
ಚಿತ್ರ: ಪ್ರೇಮಪರ್ವ
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಅನುರಾಗದಾ ಆರಾದನೇ ಹೊಸಬಾಳಿನಾ ಅಭಿನಂದನೇ
ನಮ್ಮನೂ ಜೋಡಿಯ ಮಾಡಿದಾ ಗುರುರಾಯರಾ ಪಾದಕೆ ವಂದನೇ
ನೋವೂ ನಲಿವಾಯ್ತೂ ಜೀವಾ ಹಗುರಾಯ್ತೂ
ನಮ್ಮ ಪೂಜೆ ಫಲವಾಯ್ತು
ಅನುರಾಗದಾ ಆರಾದನೇ ಹೊಸಬಾಳಿನಾ ಅಭಿನಂದನೇ
ನಮ್ಮನೂ ಜೋಡಿಯ ಮಾಡಿದಾ ಗುರುರಾಯರಾ ಪಾದಕೆ ವಂದನೇ
...||ಪಲ್ಲವಿ||
ನಾ ನಡೆವ ಪಥವೆಲ್ಲಾ ಬರಿ ಮುಳ್ಳೂ ಎಂದಿದ್ದೇ
ಹೂವನೂ ಹಾಸಿದೇ
ನನಗಾರೂ ಗತಿಯಿಲ್ಲಾ ಜೊತೆಯಿಲ್ಲಾ ಎಂದಿದ್ದೇ
ಆಸರೇ ನೀಡಿದೇ..ಆ..
ಒಲವೆಂಬಾ ಉಳಿಯಿಂದಾ ಕಲ್ಲನ್ನೂ ನೀ ಕಡೆದೇ
ರೂಪವಾ ನೀಡಿದೇ
ಛಲವೆಂಬಾ ಉರಿಯಿಂದಾ ಬದುಕಲ್ಲೀ ಬೆಂದಿದ್ದೇ
ತಾಳ್ಮೆಯಾ ಕಲಿಸಿದೇ..ಹೋ..ತಾಳ್ಮೆಯಾ ಕಲಿಸಿದೇ
...||ಅನುರಾಗದಾ||
ಹಣದಿಂದಾ ಮದವೇರೀ ಮೃಗವಾಗೀ ಮೆರೆದಿದ್ದೇ
ಮನುಜನಾ ಮಾಡಿದೇ
ದೇವರನೇ ಮರೆತಿದ್ದೇ ಗುರುವಾಗೀ ನೀ ಬಂದೇ
ಭಕ್ತಿಯಾ ಕಲಿಸಿದೇ..ಹಾ..
ಮನದಾಸೇ ರಥವೇರೀ ಅನುಗಾಲಾ ಜೊತೆಯಲ್ಲೀ
ನಲಿಯುತಾ ಸಾಗುವಾ
ನಾವೆಂದೂ ಸುಖವಾಗೀ ಒಲವಿಂದಾ ಇರುವಂತೇ
ರಾಯರಾ ಬೇಡುವಾ ಗುರುರಾಯರಾ ಬೇಡುವಾ
...||ಅನುರಾಗದಾ||