ಬಣ್ಣದ ತಗಡಿನ ತುತ್ತೂರಿ
Wikisource ಇಂದ
ರಚನೆ: ಜಿ. ಪಿ. ರಾಜರತ್ನಂ (ರತ್ನ)
ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ
ಸ-ರಿ-ಗ-ಮ-ಪ-ದ-ನಿ-ಸ ಊದಿದನು
ತನಗೇ ತುತ್ತುರಿ ಇದೆಯೆಂದ; ಬೇರಾರಿಗು ಅದು ಇಲ್ಲೆಂದ
ತುತ್ತೂರಿ ಊದುತ ಕೊಳದ ಬಳಿ; ಕಸ್ತೂರಿ ನಡೆದನು ಸಂಜೆಯಲಿ; ಜಂಭದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ; ಗಂಟಲು ಕಟ್ಟಿತು ನೀರೂರಿ
ಸ-ರಿ-ಗ-ಮ ಊದಲು ನೋಡಿದನು; ಗ-ಗ-ಗ-ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು; ಜಂಭದ ಕೋಳಿಗೆ ಗೋಳಾಯ್ತು