ರಿಷಿ - ಎಲ್ಲೆಲ್ಲು ಹಬ್ಬ
Wikisource ಇಂದ
ಚಿತ್ರ: ರಿಷಿ
ಸಾಹಿತ್ಯ: ವಿ. ಮನೋಹರ್
ಸಂಗೀತ: ಗುರುಕಿರಣ್
ಗಾಯನ: ಕೆ. ಚಿತ್ರಾ, ಸೋನು ನಿಗಮ್
ಎಲೆಲ್ಲೆಲು ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ
ಈ ಸಂಭಂದ ಬೆಸೆದ ಹಬ್ಬ ಕಣ್ತುಂಬ ಪ್ರೀತಿ ಹಬ್ಬ |೨|
ಆ ಅಹ ಬೇವು ಕೂಡ ಸಿಹಿಯಾಯ್ತು ಬೆಲ್ಲ ಮೆಲ್ಲ ಜೇನಾಯ್ತು
ಮನೆಯ ತುಂಭ ನಗುವಿನ ತೋರಣ ತೂಗಿ ತೂಗಿತು
ಚಿಂತೆ ನೋವು ಹಗುರಾಯ್ತು ಸುಗ್ಗಿ ಸಿರಿಯ ಮಳೆಯಾಯ್ತು
ಮನೆಯ ತುಂಭ ಹರುಷದ ಹೂರಣ ಆಹಾ ಮೂಡಿತು
ಎಲ್ಲೆಲು ಜೀವ ಕಳೆ ಜೀವಕಿದು ಹೂವ ಕಳೆ |೨|
ಹಳೆಯ ಕೊಳೆಯ ತೊಳೆಯ ಬಂತು ರಂಗಿನ ಯುಗಾದಿ!
ಎಲೆಲ್ಲೆಲು ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ
ಈ ಸಂಭಂದ ಬೆಸೆದ ಹಬ್ಬ ಕಣ್ತುಂಬ ಪ್ರೀತಿ ಹಬ್ಬ
ಕಳೆದುದೆಲ್ಲ ದೊರಕಾಯ್ತು ದೊರಕಿದೆಲ್ಲಾ ವರವಾಯ್ತು
ಹೊಸತು ಹಾದಿ ತೋರಿ ಬಾಳ ಗೀತೆಯಾಯಿತು
ಹೃದಯ ಕುಣಿವ ನವಿಲಾಯ್ತು ಮನೆಯ ತುಂಭ ನಲಿವಾಯ್ತು
ಎಂದು ಹೀಗೆ ಇರಲಿ ಬಾಳಿಗಂತ ಕೋರಿತು
ಇನ್ನೆಲ್ಲ ಶುಭಶಕುನ ಅನುದಿನವು ಸನ್ಮಾನ |೨|
ಮರೆಯದಂತ ಸವಿ ಸವಿಗಳಿಗೆ ತಂದಿತು ಯುಗಾದಿ
ಎಲೆಲ್ಲೆಲು ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ
ಈ ಸಂಭಂದ ಬೆಸೆದ ಹಬ್ಬ ಕಣ್ತುಂಬ ಪ್ರೀತಿ ಹಬ್ಬ |೨|