ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೫೩

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೫೩ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪರಿಶೀಲಿಸಲಾಗಿದೆ

ಹತ್ತಿ ಕದದ್ದು ಲಾಡು ತಿಂದದ್ದು

೩೭

ಹೇಳುತ್ತಿದ್ದರು. ನನ್ನೆಡೆಗೆ ಯಾರೋ ಓಡಿ ಬರುತ್ತಿದ್ದಂತೆ ಎನಿಸಿತು. ಕಣ್ಮರೆಸಿಕೊಂಡು,
ನೋಡಿದರೆ ಅದೇ ಆ ಚಕ್ಕಡಿಯ ಮನುಷ್ಯ! ನನ್ನ ಅಳುವು ಮತ್ತಷ್ಟು ಹೆಚ್ಚಾಯಿತು.
ಎದ್ದು ನಿಂತವನು, ಅಲ್ಲಿ ನೆಲಕ್ಕೆ ಹಿಡಿದುಕೊಳ್ಳುವಂತೆ ಗಪ್ಪನೇ ನೆಲ ಹಿಡಿದು ಕುಳಿತು
ಬಿಟ್ಟೆ. ಆತ ಬಂದವನ್ನೇ ನನ್ನ ಮುಂಗೈಯನ್ನು ಹಿಡಿದು ದರದರನೇ ಎಳೆದೊಯ್ಯ ತೊಡಗಿದ.

"ಯ್ಯೋ ಬಿಡ್ರಿ, ಹೊಡಿತನ ಹೊಡ್ದ ಮತ್ತ
ಎಳ್ದ ಒಯಿತ್ತೀರೆಲ್ಲಾ"

ಎಂದು ಆ ಹೆಂಗಸರು ಇನ್ನೊಂದೆಡೆಗೆ ಜಗ್ಗುತ್ತಿದ್ದರು. ಆತ ಎಳೆದೊಯ್ದು ಏನು
ಮಾಡುತ್ತಾನೆ ಎನ್ನುವುದಕ್ಕಿಂತ ಮತ್ತು ಈ ಹೆಂಗಸರು ನನ್ನನ್ನು ಬಿಡಿಸಿಕೊಳ್ಳಬಹುದೋ
ಇಲ್ಲವೋ ಎಂಬ ವಿಚಾರಕ್ಕಿಂತ-

"ನನ್ನ ಪಾಟಿ ಚೀಲ, ನನ್ನ ಅಳುವ ಧ್ವನಿಯ ಚೀರಾಟಕ್ಕೂ, ಆ ಹೆಂಗಸರ
ಬೇಡಿಕೆಗಾಗಿಯೊ ಕೊನೆಗೆ ಆತ ನನ್ನನ್ನು ಬಿಟ್ಟು ಹೋದ. ಅಲ್ಲಿಂದೆದ್ದವನೇ ನಾನು
ಗಿಡದ ಮರೆಯಲ್ಲಿ ಅಡಗಿಸಿಟ್ಟ ಚೀಲವನ್ನು ತೆಗೆದು ನೋಡಿದೆ. ಕಟ್ಟಿಗೆಯ ಕಟ್ಟೆ ಇಲ್ಲದ
ಮಣ್ಣಿನ ಪಾಟಿ ಭದ್ರವಾಗಿತ್ತು. ಅದನ್ನು ಹೆಗಲಿಗೆ ಹಾಕಿದವನೇ ಓಡಲು ಆರಂಭಿಸಿದೆ.
ಆತ ಮತ್ತೆ ಮರಳಿ ಬಂದು ನನ್ನನ್ನು ಎಳೆದೊಯ್ಯಬಹುದೆಂಬ ಭಯ ಆವರಿಸಿತ್ತು.

ಹೀಗಾಗುವುದಕ್ಕೆ ಕಾರಣವಿಷ್ಟೇ.

ಬೆಳಗು ಹೊಟ್ಟೆಗಿಲ್ಲದೆ ಶಾಲೆಗೆ ಹೋಗುವುದು (ಮನೆಯಲ್ಲಿ ತಿನ್ನಲು ಇದ್ದಾಗಲೂ).
ಎಷ್ಟೋ ಬಾರಿ ಕಣ್ಣಿಗೆ ಬವಳಿ ಬಂದು ರಸ್ತೆಯಲ್ಲಿಯೇ ಬಿದ್ದದ್ದೂ ಇದೆ. ಹೊಲದ
ಕೆಲಸಕ್ಕೆ ಹೋಗಿರುವ ನನ್ನ ತಾಯಿಗೆ ಈ ವಿಷಯ ತಿಳಿದಾಗ ಅವಳು ನನ್ನನ್ನು ಎದೆಗವಚಿ
ಅತ್ತದ್ದು ಬೇರೆ ಮಾತುಗಳು.

ಶಾಲೆಗೆ ಹೋಗುವಾಗ ರಸ್ತೆಯಲ್ಲಿ ಒಂದು ಮಿಠಾಯಿಯ ಅಂಗಡಿ ಇತ್ತು. ಅದಕ್ಕೆ
ನಾವು 'ಉಂಡಿ ಮುತ್ಯಾನಂಗಡಿ' ಎಂದು ಕರೆಯುವುದು ವಾಡಿಕೆ. ಹತ್ತಿಯನ್ನು ತಂದು ಕೊಟ್ಟರೆ
ಈತ ಒಂದು ಚಿಕ್ಕ ಬೆಲ್ಲದುಂಡೆಯನ್ನು ಕೊಡುತ್ತಿದ್ದ. ಈ ಉಂಡಿಗಳು ಆಗ ದುಡ್ಡಿಗೆ
ಮೂರು. ಬೊಗಸೆ ತುಂಬಾ ಕೊಟ್ಟ ಹತ್ತಿಗೆ ಈತ ಕೊಡುವುದು ಒಂದೋ ಅಥವಾ ಎರಡೋ
ಉಂಡಿಗಳು.

"ನನಗೆ ಕರಿ ಉಂಡಿ ಬೇಡಾ
ಬಿಳಿ ಉಂಡಿ ಕೊಡ್ರಿ"

ಎಂದು ಅಂಗಲಾಚುತ್ತಿದ್ದೆ. ಆ ಅಂಗಡಿ ಸ್ವಲ್ಪ ಎತ್ತರದ ಕಟ್ಟೆಯ ಮೇಲಿತ್ತು.
ಅದಕ್ಕೆ ಮೂರು ಮೆಟ್ಟಿಲುಗಳಿದ್ದವು. ಆ ಮೆಟ್ಟಿಲುಗಳು ನಮಗೇರುವುದಕ್ಕೆ ಅವಕಾಶ
ಇರುತ್ತಿರಲಿಲ್ಲ. ನಾನು ಮೊದಲೆ ಆ ಅಂಗಡಿಯ ಕಟ್ಟೆಗಿಂತ ಚಿಕ್ಕವ. ಆತ ಹತ್ತಿಯನ್ನು