ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೫೪

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೫೪ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪರಿಶೀಲಿಸಲಾಗಿದೆ

೩೫

ಗೌರ್ಮೆಂಟ್‌ ಬ್ರಾಹ್ಮಣ

ತೆಗೆದುಕೊಳ್ಳಬೇಕಾದರೆ, ಅಂಗಡಿಯವ ಟೀಕಾ ಆಸನದ ಮೇಲೆ ಕೂತವನೆ ಚುರುಮುರಿ
ಸೋಸುವ ಛಾಣಿಯ ಹಿಡಿಯನ್ನು ಹಿಡಿದು ಮುಂದಕ್ಕೆ ಚಾಚುತ್ತಿದ್ದ. ನಾನು ಅದರಲ್ಲಿ
ಹತ್ತಿಯನ್ನು ಹಾಕಬೇಕು. ಅವನು ಛಾಣಿಯಿಂದಲೇ ಒಂದೆರಡು ಬಾರಿ ತೂಗಿ ನೋಡಿದವನಂತೆ
ನಟಿಸಿ, ತನ್ನ ಅಂಗಡಿಯ ಮೂಲೆಯ ಹತ್ತಿಯ ರಾಶಿಗೆ ಎಸೆದು ಬಿಡುತ್ತಿದ್ದ. ಅಂದು
ನಾನು ಮೆಟ್ಟಿಲುಗಳನ್ನೇರಿ ಬಿಳಿ ಉಂಡಿ ಎಂದು "ಬೋಂದೆ ಲಾಡುಗೆ ಕೈ ಮಾಡಿ ತೋರಿಸಿ
ಕೇಳಿದ್ದರಿಂದ

"ಏ ಮೊದಲು ಪಾವಟಿಗಿ ಮ್ಯಾಲಿಂದ ಕೆಳಗಿಳಿಯ"- ಎಂದು ಬೆದರಿಸಿದ ಕೆಳಗಿಳಿದು
ಬೊಗಸೆ ಅಥವಾ ಅಂಗಿ ಉಡಿಯೊಡ್ಡಿದಾಗ ಅದರಲ್ಲಿ ಎಸೆಯುತ್ತಿದ್ದ. ಬೊಗಸೆಯೊಡ್ಡಿದಾಗ
ನೆಲಕ್ಕೆ ಬಿದ್ದ ಉಂಡೆಗಳು ಗುಂಡು ಉರುಳಿದಂತೆ ಉರುಳಿ ಹೋಗುತ್ತಿದ್ದವು. ಅಷ್ಟೇ
ಮೋಜಿನೊಂದಿಗೆ ಅದನ್ನೆತ್ತಿಕೊಂಡು ಬಾಯಿಂದ ಊದಿ, ಆಗಲೂ ಮಣ್ಣು ಹೋಗದಿದ್ದರೆ
ಅಂಗಿಗೆ ಒರೆಸಿಕೊಂಡು ತಿನ್ನುವ ಪದ್ಧತಿ.

ಬಿಳಿ ಉಂಡಿ ಕೇಳಿದ್ದರಿಂದ ಉಂಡಿ ಮುತ್ಯಾ ತನ್ನ ಬಲಗೈಯನ್ನು ಮುಂದೆ ಮಾಡಿ
"ತರೂದೇ ಈಟ ತರಿ, ಬೋಂದೆ ಲಾಡು ಹ್ಯಾಂಗ ಕೊಡ್ತಾರೋ"
ಈಗ ತಂದೆಯಲ್ಲಾ ಅದರ ಯಾಡ ಪಟ್ಟ ತೊಂಬಾ ಕೊಡ್ತಿನಿ ಎಂದ. ತನ್ನ
ಅಂಗಡಿಯಲ್ಲಿ ಕುಳಿತಿದ್ದ ಮತ್ತೊಬ್ಬನಿಗೆ ನೋಡಿ ಮುಸಿಮುಸಿ ನಕ್ಕ. ನಾನು ನಾಚಿ ನೀರಾದೆ.

"ನೀ ಏನು ಹುಡುಗೋ,
ತರೊದೇ ತರಿಯಾ ಒಮ್ಮೆ ಬಾಳೋಟ ತರಬೇಕು, ಅದ್ರ ಹೌದ್ ಅಂತಾರ
ಹೋಗ ಬಾಳೋಟು ತೊಂಬಾ ಎರಡು ಉಂಡಿ ಕೊಡ್ತಾರ"
ಎಂದು ಮತ್ತೊಬ್ಬ ವ್ಯಕ್ತಿ ಹುರಿದುಂಬಿಸಿದ.

ನಾಳೆ ಹೇಗಾದರೂ ಮಾಡಿ ಎರಡು ಪಟ್ಟು ಹತ್ತಿ ಇರಿದು ಸಂಗ್ರಹ ಮಾಡಲೇಬೇಕು
ಎಂದು ನಿರ್ಧರಿಸಿದೆ. ಹತ್ತಿಯನ್ನು ಕದಿಯಲು ಹೋಗುವಾಗ ಎರಡು ಮೂರು ಜನ
ಸೇರಿಯೇ ಹೋಗುವುದು ಹೆಚ್ಚು. ಆಗ ನನ್ನ ತಲೆಯಲ್ಲಿ ಬಂದ ವಿಚಾರ ಇಷ್ಟು.
ಈ ಇಬ್ಬರು ಸ್ನೇಹಿತರು ಇರೋದರಿಂದ ದಿಂಡಿನಿಂದ ಹತ್ತಿ ಬೇಗ ಬೇಗನೆ ಇರಿಯುವುದಕ್ಕೆ
ಆಗೋದಿಲ್ಲ. ಅದರಲ್ಲಿ ಮೂರು ನಾಲ್ಕು ಜನ ಆಗೋದರಿಂದ ಗಲಾಟೆ ಆಗಿ ಚಕ್ಕಡಿ
ನಡೆಸುವವನಿಗೆ ಗೊತ್ತಾಗುತ್ತದೆ. ಆದ್ದರಿಂದ ನಾನೊಬ್ಬನೇ ಹೋದರೆ ಹೆಚ್ಚು ಹತ್ತಿ ಇರಿದು
ತರಬಹುದೆನಿಸಿತು. ಆದ್ದರಿಂದ ನಾನೊಬ್ಬನೇ ಆ ಕೆಲಸದ ಸಾಹಸಕ್ಕೆ ಇಳಿದಿದ್ದೆ. ಚಕ್ಕಡಿ
ಹತ್ತಿರ ಬರುವವರೆಗೆ ಮರದಡಿಯಲ್ಲಿ ಅಡಗಿಕೊಂಡಿದ್ದೆ. ಚಕ್ಕಡಿ ನಾ ಅಡಗಿ ನಿಂತ ಮರ
ದಾಟಿ ಮುಂದಕ್ಕೆ ಹೋದಾಗ ಕಳ್ಳ ಹೆಜ್ಜೆ ಹಾಕುತ್ತ ಚಕ್ಕಡಿಯನ್ನು ಹಿಂಬಾಲಿಸಿದೆ. ಹತ್ತಿಯ
ದಿಂಡಿನ ಮೇಲೆ ಕುಳಿತು ಚಕ್ಕಡಿ ನಡೆಸುವ ಚಾಲಕನಿಗೆ ನಾನು ಗಾಡಿ ಅಡಿಯಲ್ಲಿ ಬಾಗಿ